ಮೆಟ್ರೋ ಪ್ರಯಾಣಿಕರಿಗೆ ಬೆಳ್ಳಂಬೆಳಗ್ಗೆ ಶಾಕ್! ತಾಂತ್ರಿಕ ದೋಷಕ್ಕೆ ಪ್ರಯಾಣಿಕರು ಪರದಾಟ ಫೋಟೊ ಇಲ್ಲಿವೆ

Published : Feb 20, 2024, 11:10 AM IST

ತಾಂತ್ರಿಕ ದೋಷದಿಂದ ಬೈಯಪ್ಪನಹಳ್ಳಿಯಿಂದ ಗರುಡಾಚಾರ್‌ಪಾಳ್ಯ ನಡುವೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿದೆ. ಇದರಿಂದ ಮೆಟ್ರೋ ನಿಲ್ದಾಣಗಳಲ್ಲಿ ಜನ ದಟ್ಟಣೆ ಉಂಟಾಗಿದೆ ಪ್ರಯಾಣಿಕರು ಪರದಾಡುವಂತಾಗಿದೆ.

PREV
15
 ಮೆಟ್ರೋ ಪ್ರಯಾಣಿಕರಿಗೆ ಬೆಳ್ಳಂಬೆಳಗ್ಗೆ ಶಾಕ್!  ತಾಂತ್ರಿಕ ದೋಷಕ್ಕೆ ಪ್ರಯಾಣಿಕರು ಪರದಾಟ ಫೋಟೊ ಇಲ್ಲಿವೆ

ತಾಂತ್ರಿಕದೋಷದಿಂದ ಬೈಯಪ್ಪನಹಳ್ಳಿಯಿಂದ ಗರುಡಾಚಾರ್‌ಪಾಳ್ಯ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಬೆಳ್ಳಂಬೆಳಗ್ಗೆ ಮೆಟ್ರೋ ಪ್ರಯಾಣಿಕರು ಪರದಾಡುವಂತಾಯಿತು.

25

ತಾಂತ್ರಿಕ ದೋಷದ ಕಾರಣ ನೇರಳೆ ಮಾರ್ಗದ ರೈಲು ಸಂಚಾರ ನಿಧಾನವಾದ ಪರಿಣಾಮ ನಗರದ ಹಲವೆಡೆ ಸರಿಯಾದ ಸಮಯಕ್ಕೆ ಬಾರದ ಹಿನ್ನೆಲೆ ನಿಲ್ದಾಣಗಳಲ್ಲಿ ಮೆಟ್ರೋ ಪ್ರಯಾಣಿಕರಿಂದ ಜನದಟ್ಟಣೆ ಉಂಟಾಗಿದೆ.

35

ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರಿಂದ ಜನದಟ್ಟಣ ಉಂಟಾಗುತ್ತಿರುವ ಮೆಟ್ರೋ ತಾಂತ್ರಿಕ ಸಮಸ್ಯೆ ಬಗೆಹರಿಸುವವರೆಗೆ ಮೆಟ್ರೋ ಸ್ಟೇಷನ್ ಒಳಭಾಗಕ್ಕೆ ಪ್ರಯಾಣಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ

45

ತಾಂತ್ರಿಕ ಸಮಸ್ಯೆಯಿಂದ ಮೆಟ್ರೋ ಬೋಗಿಯಲ್ಲೂ ಸಾಮರ್ಥ್ಯಕ್ಕೂ ಮೀರಿ ಪ್ರಯಾಣಿಕರಿಂದ ತುಂಬಿತುಳುಕುತ್ತಿದ್ದು ಪ್ರಯಾಣಿಕರು ಇದೇ ಮೊದಲ ಬಾರಿ ಇಂಥ ಪರಿಸ್ಥಿತಿ ಸಿಲುಕಿದ್ದಕ್ಕೆ ಕೈಕೈ ಹಿಸುಕಿಕೊಳ್ಳುವಂತಾಯಿತು. ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಕರು ಮೆಟ್ರೋ ಸ್ಟೇಷನ್ ಒಳಗೆ ಹೋಗದಂತೆ ಗೇಟ್ ಕ್ಲೋಸ್ ಮಾಡಿದ ಭದ್ರತಾ ಸಿಬ್ಬಂದಿ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಎಲ್ಲ ಬಾಗಿಲುಗಳನ್ನು ಮುಚ್ಚಿದ ಸಿಬ್ಬಂದಿ ಈಗಾ

 

55

 ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇವೆಂದ ಬಿಎಂಆರ್​ಸಿಎಲ್ ತಿಳಿಸಿದೆ. ಅದ್ಯಾಗೂ ಬೆಳಬೆಳಗ್ಗೆ ಕಚೇರಿ, ಶಾಲೆ ಅಂತಾ ಮೆಟ್ರೋಗೆ ಬಂದ ಪ್ರಯಾಣಿಕರು ಸರಿಯಾದ ಸಮಯಕ್ಕೆ ತಲುಪಲಾಗದೆ ನಿಲ್ದಾಣದಲ್ಲೇ ಪರದಾಡುವಂತಾಗಿದೆ.

Read more Photos on
click me!

Recommended Stories