Hara Fair: ಅಯ್ಯಪ್ಪ, ದತ್ತಮಾಲೆ ರೀತಿ ಈ ಬಾರಿ ಹರ ಜಾತ್ರೆ

First Published Dec 10, 2021, 1:18 PM IST

ಬೆಂಗಳೂರು(ಡಿ.10):  ಹರಿಹರದ ಪಂಚಮಸಾಲಿ ಜಗದ್ಗುರು ಪೀಠದ(Panchamsali Jagadguru Peetha) ಸಹಯೋಗದಲ್ಲಿ 2022ರ ಜ.14 ಹಾಗೂ 15 ರಂದು ನಡೆಯಲಿರುವ ‘ಹರ ಜಾತ್ರೆಗೆ’ ಇದೇ ಮೊದಲ ಬಾರಿಗೆ ಅಯ್ಯಪ್ಪ(Ayyappa) ಮಾಲೆ, ದತ್ತ ಮಾಲೆ(Datta Mala) ರೀತಿಯಲ್ಲಿ ‘ಹರ ಮಾಲೆ’(Hara Fair) ಧರಿಸಿ ಆಗಮಿಸುವ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದ್ದೇವೆ ಎಂದು ಪಂಚಮಸಾಲಿ ಜಗದ್ಗುರು ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ(Vachananand Swami) ಘೋಷಿಸಿದ್ದಾರೆ.

ಗಂಡು-ಹೆಣ್ಣು ಎಂಬ ಬೇಧವಿಲ್ಲದೆ 3 ರಿಂದ 21 ದಿನಗಳವರೆಗೆ ಹರಮಾಲೆ ವ್ರತ ಪೂರೈಸಿ ಲಕ್ಷಾಂತರ ಮಂದಿ ಭಕ್ತಾದಿಗಳು ಹರ ಜಾತ್ರೆಗೆ ಆಗಮಿಸಲಿದ್ದು, ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಸಹ ಹರಮಾಲೆ ಧರಿಸಿ 21 ದಿನಗಳ ವ್ರತ ಪೂರೈಸಿಯೇ ಹರಜಾತ್ರೆಗೆ ಬರುವುದಾಗಿ ಭರವಸೆ ನೀಡಿದ್ದಾರೆ ಎಂದ ವಚನಾನಂದ ಸ್ವಾಮೀಜಿ

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ‘ಹರಮಾಲೆ’ ವ್ರತಾಚರಣೆ ವಿಧಾನದ ಹೊತ್ತಿಗೆ,‘ಹರಜಾತ್ರೆಯ’ ಲೋಗೋ, ಧ್ವನಿಸುರುಳಿ, ಟಿ- ಶರ್ಟ್‌ನ್ನು ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

ನಾವು ಸಾಮಾನ್ಯವಾಗಿ ದತ್ತ ಮಾಲೆ, ಅಯ್ಯಪ್ಪ ಮಾಲೆ ಕೇಳಿದ್ದೇವೆ. ಅದೇ ರೀತಿ ಹರಮಾಲೆ ವ್ರತಾಚರಣೆ ಮಾಡಿ ಹರಜಾತ್ರೆಗೆ ಬರುವಂತೆ ಹರಮಾಲೆ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದ್ದೇವೆ. ಹರಮಾಲೆ ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಮತ್ತೊಂದು ದೂರದೃಷ್ಟಿಯ ಸಂಕಲ್ಪ. ಸಾಮಾಜಿಕ ಬದಲಾವಣೆಯಲ್ಲಿ ಹರಮಾಲೆ ಬಹಳ ದೊಡ್ಡ ಪಾತ್ರ ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಶ್ರೀಗಳು 

ನಡತೆ ತಪ್ಪಿದವರನ್ನು ತಿದ್ದುವ, ದುಶ್ಚಟಗಳಿಗೆ ದಾಸರಾದವರನ್ನು ಅದರಿಂದ ಮುಕ್ತಿಗೊಳಿಸುವ, ಧೂಮಪಾನ- ಮದ್ಯಪಾನದಂತಹ ಸಾಮಾಜಿಕ ಪಿಡುಗುಗಳಿಗೆ ತಿಲಾಂಜಲಿ ಇಡುವ, ಎಲ್ಲಕ್ಕಿಂತ ಹೆಚ್ಚಾಗಿ ಸಮಾಜವನ್ನು ಒಳ್ಳೆಯ ಮನಸ್ಸುಗಳಿಂದ ನಿರ್ಮಿಸುವ, ಆತ್ಮ ಶುದ್ಧೀಕರಿಸುವ ಮಹಾಸಂಕಲ್ಪ ಹರಜಾತ್ರೆ ಹಿಂದಿದೆ. ಅದಕ್ಕಾಗಿ ಯುವ ಮನಸ್ಸುಗಳು 21 ದಿನ, 15 ದಿನ, 9 ದಿನ, 5 ದಿನ, 3 ದಿನ ಕಾಲ ಅತ್ಯಂತ ಕಟ್ಟುನಿಟ್ಟಾಗಿ ಹರಮಾಲೆ ವ್ರತವನ್ನು ಕೈಗೊಳ್ಳಬೇಕು. ಹರನಿಗೆ ಭಕ್ತಿ ನಿಷ್ಟೆಯಿಂದ ಕಾಯಾ ವಾಚಾ ಮನಸಾ ನಡೆದುಕೊಳ್ಳಬೇಕು. ಆಗಮಾತ್ರ ಸಂಕಲ್ಪ ಪ್ರಾಪ್ತಿಯಾಗುತ್ತದೆ ಎಂದು ಕರೆ ನೀಡಿದ ವಚನಾನಂದ ಸ್ವಾಮೀಜಿ

ಇಷ್ಟಾರ್ಥ ಪ್ರಾಪ್ತಿಯಾಗಬೇಕೆಂದರೆ ಮೊದಲು ಶುದ್ಧ ಮನಸ್ಸಿನಿಂದ, ಭಕ್ತಿಯಿಂದ ಹರಮಾಲೆ ಧರಿಸಬೇಕು. ಹರನಿಗೆ ಸಂಪೂರ್ಣವಾಗಿ ನಿಮ್ಮನ್ನು ನೀವು ಅರ್ಪಿಸಿಕೊಳ್ಳಬೇಕು. ಆಗ ಹರ ಒಲಿಯುತ್ತಾನೆ. ಹರಮಾಲೆ ಒಂದು ಮಹಾ ಸಂಕಲ್ಪ. ನಿಮ್ಮ ಜೀವನದಲ್ಲೊಂದು ಮಹಾ ಬದಲಾವಣೆ. ಗೊತ್ತಿರಲಿ, ಆ ಬದಲಾವಣೆಯೇ ಬದುಕಿನ ಮಹಾಬೆಳಕು ಎಂದು ಹೇಳಿದ ಶ್ರೀಗಳು

ಹರ ಜಾತ್ರೆ ಕೇವಲ ಊಟ, ತಿಂಡಿ, ಜಾತ್ರೆ ವಾತಾವರಣಕ್ಕೆ ಸೀಮಿತವಲ್ಲ. ಹರ ಜಾತ್ರೆಯಲ್ಲಿ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ದೇಶದಲ್ಲೇ ಮೊಟ್ಟ ಮೊದಲಿಗೆ ರಾಜ್ಯದಲ್ಲಿ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಜಾಗೃತಿ ಮೂಡಿಸಲಾಗುವುದು. ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ್‌ ಅವರ ಬಳಿಯೂ ಚರ್ಚಿಸಲಾಗಿದೆ ಅಂತ ಮಾಹಿತಿ ನೀಡಿದ ಪಂಚಮಸಾಲಿ ಜಗದ್ಗುರು ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ 

ಜತೆಗೆ ಯುವಕರಿಗೆ ಉದ್ಯಮದ ಬಗ್ಗೆ ಮಾಹಿತಿ ನೀಡಲು ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ(Murugesh Nirani) ಮಾರ್ಗದರ್ಶನದಲ್ಲಿ ‘ಉದ್ಯಮಿಯಾಗು, ಉದ್ಯೋಗ ನೀಡು’ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಚನಾನಂದ ಸ್ವಾಮೀಜಿ ಮಾಹಿತಿ ನೀಡಿದರು.

ಹರ ಜಾತ್ರೆ ನೆಪದಲ್ಲಿ ಮುಂಬರುವ ದಿನಗಳಲ್ಲಿ ಸಮಾಜ ಹಾಗೂ ನಾಡು ಕಟ್ಟಿ ಸಂಸ್ಕೃತಿಯನ್ನು(Culture) ಕಟ್ಟೋಣ. ನಾಗರಿಕತೆ ಸುಲಭವಾಗಿ ಬೆಳೆಯುತ್ತದೆ. ಆದರೆ ಸಂಸ್ಕೃತಿ ಬೆಳೆಯುವುದು ಕಷ್ಟ. ನಾಗರೀಕತೆ ಹಾಗೂ ಸಂಸ್ಕೃತಿ ಬೇರೆಯೇ ಪದಗಳು. ಹೀಗಾಗಿ ವಚನಾನಂದ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಎಲ್ಲರೂ ಸಂಸ್ಕೃತಿ ಕಟ್ಟುವ ಕಾಯಕಕ್ಕೆ ಕೈ ಜೋಡಿಸೋಣ ಎಂದು ಕರೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

ಈ ವೇಳೆ ಸಚಿವರಾದ ಮುರುಗೇಶ್‌ ಆರ್‌. ನಿರಾಣಿ(Murugesh Nirani), ಡಾ.ಸಿ.ಎನ್‌. ಅಶ್ವತ್ಥನಾರಾಯಣ(Dr CN Ashwath Narayan), ಶಂಕರ ಪಾಟೀಲ್‌ ಮುನೇನಕೊಪ್ಪ(Shankar Patil Munenkoppa) ಸೇರಿದಂತೆ ಹಲವರು ಹಾಜರಿದ್ದರು.

click me!