ಬೆಳಗ್ಗೆ 11.30ರ ಸುಮಾರಿಗೆ ಕೊಲ್ಲೂರಿನಿಂದ(Kolluru) ಆಗಮಿಸಿದ ರಾಜ್ಯಪಾಲರನ್ನು(Governor) ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ಆರ್‌ಎನ್‌ಎಸ್ ಟ್ರಸ್ಟ್ ಪರವಾಗಿ ನಾಗರಾಜ ಶೆಟ್ಟಿ ಬರಮಾಡಿಕೊಂಡರು. ದೇವಸ್ಥಾನದ ಅರ್ಚಕ ವೇ.ಮೂ. ಜಯರಾಮ ಅಡಿಗಳ್ ಅವರು ದೇವರಿಗೆ(God) ಪೂಜೆ(Pooje) ಸಲ್ಲಿಸಿ ಪ್ರಸಾದ ವಿತರಿಸಿದರು.
ಇದೇ ಸಂದರ್ಭದಲ್ಲಿ ದೇವಾಲಯ(Temple) ವತಿಯಿಂದ ಪ್ರಸಾದದ ರೂಪದಲ್ಲಿ ದೇವರ ಎದುರಿನಲ್ಲಿ ಶಾಲು ಹೊದಿಸಿ ರಾಜ್ಯಪಾಲರನ್ನು ಗೌರವಿಸಲಾಯಿತು. ಆನಂತರ ಅವರು ದೇವಸ್ಥಾನದ ಪ್ರಾಂಗಣದಲ್ಲಿ ತಮಗಾಗಿ ಇಡಲಾಗಿದ್ದ ಆಸನದಲ್ಲಿ ಕುಳಿತು ಸಂದರ್ಶಕರ ಪುಸ್ತಕದಲ್ಲಿ(Visitor's Book) ತಮ್ಮ ಸಂದೇಶವನ್ನು ಬರೆದರು.
ರಾಜ್ಯಪಾಲರು ದೇವಾಲಯದ ಪ್ರಾಂಗಣ, ಬೃಹತ್ ಶಿವನ ಮೂರ್ತಿಯನ್ನು(statue of Lord Shiva) ವೀಕ್ಷಿಸಿದ್ದಲ್ಲದೇ, ಬೃಹತ್ ರಾಜಗೋಪುರದ 21ನೇ ಮಹಡಿಗೆ ಲಿಫ್ಟ್ ಮೂಲಕ ತೆರಳಿ ಅಲ್ಲಿಂದಲೇ ದೇವಾಲಯದ ಹಿಂದುಗಡೆ ಇರುವ ಶಿವನ ಮೂರ್ತಿ, ಅರಬ್ಬೀ ಸಮುದ್ರದ(Arabian Sea) ಸೌಂದರ್ಯ ವೀಕ್ಷಿಸಿದರು. ಬಳಿಕ ಮುರ್ಡೇಶ್ವರದ(Murdeshwar) ಆರ್‌ಎನ್‌ಎಸ್ ರೆಸಿಡೆನ್ಸಿಯಲ್ಲಿ ಸ್ವಲ್ಪ ಕಾಲ ವಿಶ್ರಾಂತಿ ಪಡೆದು, ಆನಂತರ ಗೋಕರ್ಣಕ್ಕೆ ತೆರಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಎಸ್.ಪಿ. ಸುಮನ್ ಪನ್ನೇಕರ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗಾ, ಡಿವೈಎಸ್‌ಪಿ ಕೆ.ಯು. ಬೆಳ್ಳಿಯಪ್ಪ, ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್., ತಹಸೀಲ್ದಾರ್ ಎಸ್. ರವಿಚಂದ್ರ, ದೇವಸ್ಥಾನದ ಅರ್ಚಕರು, ಸಿಬ್ಬಂದಿ ಉಪಸ್ಥಿತರಿದ್ದರು.
ರಾಜ್ಯಪಾಲರು ಆಗಮಿಸಿದ ಹಿನ್ನೆಲೆಯಲ್ಲಿ ಮುರ್ಡೇಶ್ವರ ದೇವಸ್ಥಾನಕ್ಕೆ ಭಕ್ತರನ್ನು(Devotees) ನಿರ್ಬಂಧಿಸಲಾಗಿದ್ದು, ರಸ್ತೆಯಲ್ಲಿ ಕೂಡಾ ವಾಹನ ಸಂಚಾರಕ್ಕೆ ಅವಕಾಶ ಇರಲಿಲ್ಲ. ಅಲ್ಲಲ್ಲಿ ಜನರು ರಸ್ತೆಗಿಳಿಯದಂತೆ ಪೊಲೀಸರು(Police) ಕಟ್ಟೆಚ್ಚರ ವಹಿಸಿದ್ದರೆ, ದೇವಸ್ಥಾನದ ಸುತ್ತಮುತ್ತ ಕಮಾಂಡೋಗಳು ಕಾವಲು ಕಾಯುತ್ತಿದ್ದರು.
ಮುರ್ಡೇಶ್ವರದಲ್ಲಿ ರಾಜ್ಯಪಾಲ ಆಗಮನದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಪೊಲೀಸರು ಸೂಕ್ತ ಬಂದೋಬಸ್ತ್(Security) ಏರ್ಪಡಿಸಿದ್ದರು.
ಬೆಳಗ್ಗೆಯಿಂದಲೇ ಭಟ್ಕಳದ ಗಡಿಯಿಂದ ಮುರ್ಡೇಶ್ವರದ ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಪಾಯಿಂಟ್ ಹಾಕಿದ್ದು ಅಲ್ಲದೇ ಗಸ್ತು ವಾಹನಗಳು ನಿರಂತರವಾಗಿ ಓಡಾಡುತ್ತಿದ್ದವು.
ಶುಕ್ರವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್