ವಿಜಯಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ನಡೆದ ಭೀಕರ ಅಪಘಾತದಲ್ಲಿ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆ ನಾಂದೇಡ ಮೂಲದ ನಾಲ್ವರು ನಿವಾಸಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರಲ್ಲಿ ಒಬ್ಬಾತ ನಾಗಠಾಣ ಶಾಸಕ ದೇವಾನಂದ್ ಚವ್ಹಾಣ ಅಳಿಯ ವಿಜಯಕುಮಾರ್ ಕಾಶಿನಾಥ ದೊಡಮನಿ ಎಂದು ಗುರುತಿಸಲಾಗಿದೆ. ಪಾರ್ಚ್ಯೂನರ್ ಕಾರಿನ ಅತೀವೇಗ ಹಾಗೂ ಚಾಲಕನ ಆಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಅಪಘಾತ ನಡೆದ ಬೆನ್ನಲ್ಲೇ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಆಧಿಕಾರಿಗಳ ಭೇಟಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಮೃತರ ಹೆಸರು ಹಾಗೂ ವಿಳಾಸ ಪತ್ತೆಗೆ ಮುಂದಾದ ಪೊಲೀಸರು ಮುಂದಾಗಿದ್ದಾರೆ. ಸದ್ಯ ಮೃತ ನಾಲ್ವರ ಗುರು ಪತ್ತೆ ಹಚ್ಚಲಾಗಿದೆ.
ಇನ್ನು ಅಪಘಾತಕ್ಕೀಡಾದ ಕೆಎ 22 ಎಫ್ 2198 ನಂಬರಿನ ಬಸ್ ನಿಶ್ಚಿತಾರ್ಥ ಕಾರ್ಯಕ್ಕೆಂದು ನರಗುಂದನಿಂದ ವಿಜಯಪುರಕ್ಕೆ ಆಗಮಿಸಿದ್ದು, ನಿಶ್ಚಿತಾರ್ಥ ಕಾರ್ಯ ಮುಗಿಸಿ ವಾಪಸ್ ತೆರಳುತ್ತಿದ್ದ ವೇಳೆ ನಡೆದ ಅವಘಡ ಸಂಭವಿಸಿದೆ. ಎದುರಿಗೆ ವೇಗವಾಗಿ ಆಗಮಿಸಿದ ಎಂಎಚ್ 13 ಸಿಎಸ್ 3330 ನಂಬರಿನ ಪಾರ್ಚ್ಯೂನರ್ ಕಾರು ಮುಖಾಮುಕಿಯಾಗಿ ಡಿಕ್ಕಿ ಹೊಡೆದಿದೆ.
ಇನ್ನು ಮೃತರು ನಾಂದಣಿ ಗ್ರಾಮದ ನಿವಾಸಿಗಳಾಗಿದ್ದು, ಇವರೆಲ್ಲರೂ ಡಿಕ್ಕಿ ಹೊಡೆದ ಕಾರಿನಲ್ಲಿದ್ದರೆನ್ನಲಾಗಿದೆ. ಪಾರ್ಚುನರ್ ಕಾರ್ ಮಾಲೀಕ ಚಿದಾನಂದ ಸೂರ್ಯವಂಶಿ ಎಂದು ಗುರುತಿಸಲಾಗಿದ್ದು, ವಿಜಯಪುರದ ಕೊಲ್ಹಾರ ಗ್ರಾಮಕ್ಕೆ ನಿಶ್ಚಿತಾರ್ಥಕ್ಕಾಗಿ ಆಗಮಿಸಿದ್ದರೆಂಬ ಮಾಹಿತಿ ಲಭ್ಯವಾಗಿದೆ.
ಮೃತರ ಹೆಸರು ಪತ್ತೆ:
* ಚಿದಾನಂದ ನಾಗೇಶ ಸೂರ್ಯವಂಶಿ (45) ಸೋಲಾಪುರದ ನಾಂದೇಡ ಮೂಲದವರು
* ವಿಜಯಕುಮಾರ್ ದೊಡಮನಿ (32), ಶಾಸಕ ದೇವಾನಂದ ಚವ್ಹಾಣ ಅಳಿಯ... ದೇವಾನಂದ ಹಿರಿಯ ಸಹೋದರಿ ಪುತ್ರ
* ಸೋಮನಾಥ ಕಾಳೆ 43 ರಾಜೂರ ಸೋಲಾಪುರ.
* ಸಂದೀಪ ಪವಾರ 40 ಬಸವನಗರ ಸೋಲಾಪುರ.