ನನ್ನ ಹೆಂಡತಿ, ಮಗನಿಗೆ ತೊಂದರೆ ಕೊಡುತ್ತಿದ್ದಾರೆ : ಶೃಂಗೇರಿ ಕಾಂಗ್ರೆಸ್ ಶಾಸಕ ಟಿ ಡಿ‌‌ ರಾಜೇಗೌಡ ಕಣ್ಣೀರು

Published : Mar 03, 2026, 09:00 AM IST

ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ನಡೆದ ಜನಾಂದೋಲನ ಸಮಾವೇಶದಲ್ಲಿ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಕಣ್ಣೀರಿಟ್ಟಿದ್ದಾರೆ. ತಮ್ಮ ಕುಟುಂಬವನ್ನು ಬೀದಿಗೆ ತಂದು ನಿತ್ಯ ಕೋರ್ಟ್ಗೆ ಅಲೆದಾಡುವ ಸ್ಥಿತಿ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಶಾಸಕರು ಕಣ್ಣೀರಿಟ್ಟಿದ್ದಾರೆ. ಶಾಸಕರನ್ನೇ ಅಲೆದಾಡಿಸಿದವರು ಯಾರು?

PREV
15
ಶೃಂಗೇರಿ ಶಾಸಕ ಟಿ ಡಿ‌‌ ರಾಜೇಗೌಡ ಕಣ್ಣೀರು

ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಟಿ ಡಿ‌‌ ರಾಜೇಗೌಡ ಜನಾಂದೋಲನ ಸಮಾವೇಶದಲ್ಲಿ ಕಣ್ಣೀರಿಟ್ಟ ಘಟನೆ ನಡೆದಿದೆ. ಬಹಿರಂಗ ಸಭೆಯಲ್ಲಿ ಕಣ್ಣೀರು ಹಾಕಿದ ಶೃಂಗೇರಿ ಶಾಸಕ ಟಿ‌ ಡಿ ರಾಜೇಗೌಡ, ನನ್ನ ಕುಟುಂಬವನ್ನು ಬೀದಿಗೆ ತಂದಿದ್ದಾರೆ , ದಿನ ನಿತ್ಯ ಕೋರ್ಟ್ ಅಲೆದಾಡುವ ಸ್ಥಿತಿ ಬಂದಿದೆ ಎಂದು ಕಣ್ಣೀರಿಟ್ಟಿದ್ದಾರೆ.

25
ಜನಾಂದೋಲನ ಸಮಾವೇಶದಲ್ಲಿ ಕಣ್ಣೀರಿಟ್ಟ ಶಾಸಕ

ನನ್ನ ಮನೆಯನ್ನು ಹಾಳು ಮಾಡಿದ್ದೀರಿ, ಅನ್ಯಾಯ ಮಾಡಿದ್ದೀರಿ , ನಾನು ಸಾಲ ಮಾಡಿದ್ದೇನೆ, ನಾನು ಜನಕ್ಕೆ ಅನ್ಯಾಯವನ್ನು ಮಾಡಿಲ್ಲ, ನಾನು ಈ ಸಭೆ ಮೂಲಕ ಒಂದು ಘೋಷಣೆ ಮಾಡುತ್ತೇನೆ, ನಾನು ಚುನಾವಣೆಗೆ ಸ್ಪರ್ಧಿಸಲ್ಲ, ಯಾರಾದರೂ ನಿಲ್ಲಲಿ ಆದರೆ ಕೆಟ್ಟ ಮನಸ್ಥಿತಿಯ ವ್ಯಕ್ತಿ ಮತ್ತೆ ಶಾಸಕನಾಗಬಾರದು ಶಾಸಕರಾದರೆ ಈ ಕ್ಷೇತ್ರಕ್ಕೆ ದೊಡ್ಡ ಮಾರಕ, ಯಾರ ಮನೆ ಹೆಣ್ಣು ಮಕ್ಕಳನ್ನು ಏನ್ ಮಾಡ್ತಾರೋ ಗೊತ್ತಿಲ್ಲ ಎಂದು ಮಾಜಿ ಶಾಸಕ ಡಿ ಎನ್ ಜೀವರಾಜ್ ಹೆಸರು ಹೇಳದೆಯೇ ಹಾಲಿ ಶಾಸಕ ರಾಜೇಗೌಡ ಕಣ್ಣೀರು ಹಾಕಿದ್ದಾರೆ.

35
ನನ್ನ ಹೆಂಡತಿ, ಮಗನಿಗೆ ತೊಂದರೆ ಕೊಡುತ್ತಿದ್ದಾರೆ

ನನ್ನ ಹೆಂಡತಿ, ಮಗನಿಗೆ ತೊಂದರೆ ಕೊಡುತ್ತಿದ್ದಾರೆ, ನಾನು ಈ ಸಮಾವೇಶದ ಮೂಲಕ ಒಂದು ಘೋಷಣೆ ಮಾಡುತ್ತಿದ್ದೇನೆ, ಈ ಕ್ಷೇತ್ರದಲ್ಲಿ ಜನರಿಗೆ ವಿನಾಕಾರಣ ತೊಂದರೆ ಕೊಡುತ್ತಾ, ಮಹಿಳೆಯರಿಗೆ ತೊಂದರೆ ಕೊಟ್ಟಿರುವುದನ್ನು ಮನದಟ್ಟು ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸಲ್ಲ ಅಂತ ಘೋಷಣೆ ಮಾಡಲಿ ಎಂದು ಜೀವರಾಜ್ ಹೆಸರು ಹೇಳದೇ ಶಾಸಕ ರಾಜೇಗೌಡ ಸವಾಲು ಹಾಕಿದರು.

45
ನನ್ನ ಬದಲಿಗೆ ಕಾರ್ಯಕರ್ತರು ಚುನಾವಣೆಗೆ ನಿಲ್ಲಲಿ

ನಾನು ಕೂಡ ಘೋಷಣೆ ಮಾಡುತ್ತೇನೆ ನೀವು ಸ್ಪರ್ಧಿಸಲ್ಲ ಅಂದ್ರೆ ನಾನು ಸ್ಪರ್ಧಿಸಲ್ಲ ನನ್ನ ಬದಲಿಗೆ ಕಾರ್ಯಕರ್ತರು ನಿಲ್ಲಲಿ ಎಂದು ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಜನಾಂದೋಲನ ಸಮಾವೇಶದಲ್ಲಿ ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬಾರ್‌ಗೆ ಕುಡಿಯಲು ಬಂದ ದಂಪತಿ ಬಳಿ ಗಾಂಜಾ ಕೇಳಿ ಮಚ್ಚಿನಿಂದ ಹಲ್ಲೆ ಮಾಡಿದ ಯುವಕ

55
ಹಾಲಿ ಶಾಸಕರ ವಿರುದ್ಧ ಕಿಡಿಕಾರಿದ್ದ ಮಾಜಿ ಶಾಸಕ ಜೀವರಾಜ್

ಮಲೆನಾಡಿನಲ್ಲಿ ನಿರಂತರವಾಗಿ ಕಾಡಾನೆ ಹಾವಳಿ ವಿರೋಧಿಸಿ ನಡೆದಿದ್ದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಜೀವರಾಜ್ ಹಾಲಿ ಶಾಸಕರ ವಿರುದ್ಧ ಕಿಡಿಕಾರಿದ್ದರು. ಅಂದು ನಡೆದ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು ಶಾಸಕರ ವಿರುದ್ಧ ಆರೋಪದ ಸುರುಮಳೆ ಸುರಿದಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷದಿಂದ ಜನಾಂದೋಲನ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ: ಧಾರವಾಡ: ಮಹಿಳೆ ಅಪಘಾತದಲ್ಲಿ ಸಾವು ಪ್ರಕರಣಕ್ಕೆ ರೋಚಕ ತಿರುವು: ಬಸ್‌ನ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories