ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಕುಡ್ಲೆ ಬೀಚ್‌ನ ಕೆಫೆ ಪ್ಯಾರಡೈಸ್ ರೆಸಾರ್ಟ್ ಆವರಣದಲ್ಲಿ ವಿದೇಶಿ ಜೋಡಿ ಭಾರತೀಯ ಪದ್ದತಿಯಂತೆ ಸಪ್ತಪದಿ ತುಳಿದು ವಿವಾಹವಾಗಿದ್ದಾರೆ. ವಿದೇಶಿ ಜೋಡಿಯ ಸುಂದರ ಫೋಟೊಗಳು ಕೆಳಗಿವೆ ನೋಡಿ.
ನಾರ್ವೆ ದೇಶದ ಸ್ಯಾಮ್ ಮತ್ತು ಆರ್ಟಿಮಾ ಜೋಡಿ, ಉತ್ತರಕನ್ನಡದ ಗೋಕರ್ಣದ ಕುಡ್ಲೆ ಬೀಚ್‌ನಲ್ಲಿ ಭಾರತೀಯ ಸಂಪ್ರದಾಯದಂತೆ ವಿವಾಹವಾಗುವ ಮೂಲಕ ಗಮನಸೆಳೆದಿದ್ದಾರೆ.
29
ಸಾಂಪ್ರದಾಯಿಕ ಸಿದ್ಧತೆ:
ನಾರ್ವೆ ದೇಶದ ಸ್ಯಾಮ್ ವೃತ್ತಿಯಲ್ಲಿ ಮುಖ್ಯ ಅಡುಗೆ ತಯಾರಕರಾಗಿದ್ದು, ಇದೇ ದೇಶದ ಆರ್ಟಿಮಾ ಜೊತೆ ನವಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಆರಂಭಕ್ಕೂ ಮಂಟಪ ಸುಂದರವಾಗಿ ಡೆಕೊರೇಶನ್ ಮಾಡಿ ಅಲಂಕೃತಗೊಳಿಸಲಾಗಿತ್ತು.ಈ ಮಂಟಪದಲ್ಲಿ ಕುಳಿತ ನವ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದು ಪುಣ್ಯ ಕ್ಷೇತ್ರದಲ್ಲಿ ನೆರವೇರಿದ ಪವಿತ್ರ ವಿವಾಹ.
39
ವೇದಮಂತ್ರಗಳ ಘೋಷಣೆ
ವೇ.ಪ್ರಸನ್ನ ಜೋಗಭಟ್, ವೇ. ಮಹೇಶ ಅಡಿ ಸೇರಿದಂತೆ ಇತರ ವೈದಿಕರ ಮಂತ್ರ ಘೋಷಗಳೊಂದಿಗೆ ವಿವಾಹ ವಿಧಿವಿಧಾನಗಳ ಮೂಲಕ ವಿದೇಶಿ ಜೋಡಿ ವಿವಾಹವಾಗಿರುವುದು ವಿಶೇಷವಾಗಿದೆ.
ಭಾರತೀಯ ಸಂಸ್ಕೃತಿಯನ್ನು ಮೆಚ್ಚಿದ ವಿದೇಶಿ ಜೋಡಿ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ವೇಳೆ ಜೋಡಿ ಭಾವುಕರಾದಂತೆ ಕಾಣಿಸಿತ್ತು. ಈ ವಿದೇಶಿ ಜೋಡಿ ಭಾರತೀಯ ಸಂಪ್ರದಾಯ ಮೆಚ್ಚಿಕೊಂಡರು.
59
ಮಾಂಗಲ್ಯ ಧಾರಣೆ:
ಸ್ಯಾಮ್ ಅವರು ಆರ್ಟಿಮಾ ಅವರ ಕುತ್ತಿಗೆಗೆ ಮಂಗಳ ಸೂತ್ರ ಕಟ್ಟಿದ ದೃಶ್ಯ. ಈ ಅಪೂರ್ವ ಬಂಧಕ್ಕೆ ಗೋಕರ್ಣ ಸಾಕ್ಷಿಯಾಯಿತು. ಇದು ಹಿಂದೂಗಳ ಮದುವೆ ಎಂಬಂತೆ ಭಾಸವಾಗಿದ್ದು ಸುಳ್ಳಲ್ಲ. ನೆರೆದಿದ್ದ ಎಲ್ಲರೂ ಅಕ್ಷತ ಕಾಳು ಹಾಕಿ ಹಾರೈಸಿದರು.
69
ಪುಷ್ಪಾರ್ಚನೆ
ಹಿಂದೂ ವಿವಾದ ಪದ್ಧತಿಯಂತೆ ವಿವಾಹದ ಭಾಗವಾಗಿ ದೇವರಿಗೆ ಮತ್ತು ಬಂಧುಗಳಿಗೆ ಹೂವುಗಳನ್ನು ಅರ್ಪಿಸುತ್ತಿರುವ ನಾರ್ವೆಯ ನವ ವಧು-ವರರು. ಈ ಸಂದರ್ಭದಲ್ಲಿ ಹಲವು ವರ್ಷಗಳಿಂದ ಗೋಕರ್ಣಕ್ಕೆ ಭೇಟಿ ನೀಡುತ್ತಿದ್ದ ಸ್ಯಾಮ್, ಕೆಫೆ ಪ್ಯಾರಡೈಸ್ ರೆಸಾರ್ಟ್‌ನ ಮಾಲಕ ಮುರಳಿ ಕಾಮತ್ ಕುಟುಂಬದವರೊಂದಿಗೆ ಆತ್ಮೀಯವಾಗಿ ಪಾಲ್ಗೊಂಡರು.
79
ವಿದೇಶಿಗರ ಮೆಚ್ಚುಗೆ:
ಭಾರತೀಯ ಉಡುಗೆ ತೊಟ್ಟು, ಹಿಂದೂ ವಿವಾಹ ಪದ್ಧತಿ, ಸಂಪ್ರದಾಯದಂತೆ ಮದುವೆಯಾದ ಈ ಜೋಡಿಯ ಸಂತಸದ ಕ್ಷಣ. ನಮ್ಮ ಸಂಸ್ಕೃತಿಗೆ ಈ ವಿದೇಶಿ ಜೋಡಿ ಅಷ್ಟೇ ಅಲ್ಲ ಅವರ ಬಂಧುಗಳು ಕೂಡ ಮನಸೋತರು.
89
ಆಪ್ತ ಬಂಧು-ಬಳಗದಿಂದ ಹಾರೈಕೆ
ಮದುವೆಯಲ್ಲಿ ಭಾಗವಹಿಸಿದ್ದ ಮುರಳಿ ಕಾಮತ್ ಕುಟುಂಬದವರು ಮತ್ತು ಆಪ್ತರು ನವ ಜೋಡಿಗೆ ಶುಭ ಹಾರೈಸಿದರು.
99
ಸುಂದರ ಹಿನ್ನಲೆ:
ಪಶ್ಚಿಮ ಕರಾವಳಿಯ ಗೋಕರ್ಣದ ಸುಂದರ ರಮಣೀಯ ಕುಡ್ಲೆ ಬೀಚ್‌ನ ಹಿನ್ನಲೆಯಲ್ಲಿ ಸ್ಯಾಮ್ ಮತ್ತು ಆರ್ಟಿಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಯ ವಿವಾಹ ಸೊಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಶುಭ ಹಾರೈಸುತ್ತಿದ್ದಾರೆ.