Religious Conversion: 2023ಕ್ಕೆ ಅಧಿಕಾರಕ್ಕೆ ಬರ್ತೇವೆ, ಮತಾಂತರ ನಿಷೇಧ ಕಾಯ್ದೆ ಹಿಂಪಡಿತೇವೆ: ಸಿದ್ದು

First Published | Dec 18, 2021, 7:04 AM IST

ಬೆಳಗಾವಿ(ಡಿ.18): ಮತಾಂತರ ನಿಷೇಧ ಕಾಯ್ದೆಗೆ(Conversion Prohibition Act) ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ದುಸ್ಸಾಹಸಕ್ಕೆ ಸರ್ಕಾರವೇನಾದರೂ ಕೈಹಾಕಿ ಮಸೂದೆ ಅಂಗೀಕರಿಸಿದರೆ, 2023ರಲ್ಲಿ ನೂರಕ್ಕೆ ನೂರರಷ್ಟು ನಾವೇ ಅಧಿಕಾರಕ್ಕೆ ಬರುತ್ತೇವೆ. ಆಗ ನಾವೇ ಈ ಕಾಯ್ದೆ ವಾಪಸ್‌ ಪಡೆಯುತ್ತೇವೆ ಎಂದು ಹೇಳಿದ್ದಾರೆ. 

ರಾಜ್ಯ ಸರ್ಕಾರದ(Government of Karnataka) ಮತಾಂತರ ನಿಷೇಧ ಕಾಯ್ದೆ ವಿರೋಧಿಸಿ ಭಾರತೀಯ ಕ್ರೈಸ್ತ ಮಹಾಸಭಾದಿಂದ ನಗರದ ಸುವರ್ಣ ವಿಧಾನ ಸೌಧದ ಬಳಿ ಶುಕ್ರವಾರ ನಡೆದ ಸಾಂಕೇತಿಕ ನಿರಶನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಸಿದ್ದರಾಮಯ್ಯ

ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಹೊರಟಿರುವುದು ಗಂಭೀರ ವಿಚಾರ. ದೇಶದಲ್ಲಿ ಕೋಮು ಸೌಹಾರ್ದ(Communal Friendly) ಹಾಳು ಮಾಡಲು ಹಾಗೂ ಒಂದು ಧರ್ಮವನ್ನು(Religion) ಗುರಿಯಾಗಿಟ್ಟುಕೊಂಡು ಈ ಕಾಯ್ದೆ ತರಲಾಗುತ್ತಿದೆ. ಇದರಲ್ಲಿ ರಾಜ್ಯದ ಹಿತ ಇಲ್ಲ ಎಂದರು. ಜತೆಗೆ, ನಾವು ಕ್ರೈಸ್ತರ(Christians0 ಜೊತೆ ಯಾವಾಗಲೂ ಇರುತ್ತೇವೆ. ವಿಧಾನಸಭೆಯಲ್ಲಿ ಮತಾಂತರ ನಿಷೇಧ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತೇವೆ, ಅನುಮೋದನೆ ಪಡೆಯಲು ಅವಕಾಶ ನೀಡಲ್ಲ. ಹಾಗೊಂದು ವೇಳೆ ಮತಾಂತರ ಕಾಯ್ದೆ ಜಾರಿಗೆ ತಂದರೆ 2023ರಲ್ಲಿ ನಾವೇ ಅಧಿಕಾರಕ್ಕೆ ಬಂದು ಕಾಯ್ದೆ ಹಿಂಪಡೆಯುತ್ತೇವೆ ಎಂದರು.

Tap to resize

ಯಾವುದೇ ಸರ್ಕಾರ ಸಂವಿಧಾನ(Constitution) ಏನು ಹೇಳಿದೆಯೋ ಅದರಂತೆ ನಡೆದುಕೊಳ್ಳಬೇಕು. ಸಾಮಾಜಿಕ ಆರ್ಥಿಕ ಅಸಮಾನತೆ ಹೋಗಲಾಡಿಸಲು ಕೆಲಸ ಮಾಡಬೇಕು. ಅದನ್ನು ಬಿಟ್ಟು ಮತ್ತೊಬ್ಬರ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಮಾಡಬಾರದು. ಮತಾಂತರ ನಿಷೇಧ ಕಾಯ್ದೆಯನ್ನು ಬಿಜೆಪಿ(BJP) ಕ್ರೈಸ್ತ ಸಮುದಾಯವನ್ನು ಗುರಿಯಾಗಿಸಿಕೊಂಡೇ ತರುತ್ತಿದೆ. ಬಿಜೆಪಿ ಸರ್ಕಾರ(BJP Government) ರಾಜ್ಯದಲ್ಲಿ(Karnataka) ಏನೂ ಕೆಲಸ ಮಾಡಿಲ್ಲ. ಹೀಗಾಗಿ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ತಿರುಗಿಸಲು ಇಂಥ ಕೆಲಸ ಮಾಡುತ್ತಿದ್ದಾರೆ ಎಂದ ಸಿದ್ದು 

ನಾನು ಮುಖ್ಯಮಂತ್ರಿ ಆಗಿದ್ದಾಗ ಚರ್ಚ್‌(Church) ಮೇಲೆ ಒಂದೇ ಒಂದು ದಾಳಿ ಆಗದಂತೆ ನೋಡಿಕೊಂಡಿದ್ದೆ. ಆಗಲೂ ಇದ್ದ ಪೊಲೀಸರೇ(Police) ಈಗಲೂ ಇದ್ದಾರೆ. ಅವರನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದನ್ನು ಆಡಳಿತ ನಡೆಸುವವರು ವಿವೇಚನೆಯಿಂದ ನಿರ್ಧರಿಸಬೇಕು ಎಂದು ಹೇಳಿದ ಸಿದ್ದರಾಮಯ್ಯ

Latest Videos

click me!