ಬೆಂಗಳೂರಿನಲ್ಲಿ ಯುದ್ಧದ ತುರ್ತು ಸನ್ನಿವೇಶದ ಮಾಕ್ ಡ್ರಿಲ್; ಇಲ್ಲಿವೆ ಬೆಸ್ಟ್ ಫೋಟೋಸ್

Published : May 07, 2025, 06:44 PM IST

ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್‌ ನಂತರ, ಬೆಂಗಳೂರು ಸೇರಿದಂತೆ ರಾಜ್ಯದ ಮೂರು ಜಿಲ್ಲೆಗಳಲ್ಲಿ ನಾಗರಿಕರ ತುರ್ತು ಸನ್ನಾಹವನ್ನು ಪರಿಶೀಲಿಸಲು ಸಿವಿಲ್ ಡಿಫೆನ್ಸ್ ಮತ್ತು ಅಗ್ನಿಶಾಮಕ ದಳದಿಂದ ಮಾಕ್ ಡ್ರಿಲ್ ನಡೆಸಲಾಯಿತು. ಈ ಡ್ರಿಲ್‌ನಲ್ಲಿ ಕಟ್ಟಡದ ಮೇಲ್ಭಾಗದಲ್ಲಿ ಸಿಲುಕಿರುವವರ ರಕ್ಷಣೆ, ಬೆಂಕಿ ಅವಘಡ, ಮತ್ತು ಸಮುದ್ರ ತೀರದಲ್ಲಿ ಸಿಲುಕುವವರ ರಕ್ಷಣೆಯಂತಹ ವಿವಿಧ ಸನ್ನಿವೇಶಗಳನ್ನು ಸೃಷ್ಟಿಸಲಾಯಿತು.

PREV
19
ಬೆಂಗಳೂರಿನಲ್ಲಿ ಯುದ್ಧದ ತುರ್ತು ಸನ್ನಿವೇಶದ ಮಾಕ್ ಡ್ರಿಲ್; ಇಲ್ಲಿವೆ ಬೆಸ್ಟ್ ಫೋಟೋಸ್

ಬೆಂಗಳೂರು (ಮೇ 7): ಪಹಲ್ಗಾಮ್ ದಾಳಿಗೆ ತಿರುಗೇಟು ನೀಡಿದ ಭಾರತೀಯ ಸೇನೆಯ ಆಪರೇಶನ್ ಸಿಂಧೂರ್‌ಗೆ ನುಡಿವಂತ ಅಭಿನಂದನೆಗಳು ಹರಿದುಬರುತ್ತಿರುವ ಮಧ್ಯೆ, ಈ ಯುದ್ಧ ಸನ್ನಿವೇಶದ ಸಂದರ್ಭದಿಗಾಗಿ ನಾಗರಿಕರ ತುರ್ತು ಸನ್ನಾಹವನ್ನು ಪರಿಶೀಲಿಸಲು ಬೆಂಗಳೂರು ನಗರ ಸೇರಿದಂತೆ ರಾಜ್ಯದ ಮೂರು ಪ್ರಮುಖ ಜಿಲ್ಲೆಗಳಲ್ಲಿ ಸಿವಿಲ್ ಡಿಫೆನ್ಸ್ ಮತ್ತು ಅಗ್ನಿಶಾಮಕ ದಳದ ಭಾರಿ ಮಾಕ್ ಡ್ರಿಲ್ (ಅಣಕು ಪ್ರದರ್ಶನ) ನಡೆಸಲಾಯಿತು.

29

ರಾಜಾಜಿನಗರದಲ್ಲಿ ಸೈರನ್ ಡ್ರಿಲ್ – ಜನತೆ ಆತಂಕಪಡಬೇಡಿ: 
ಬೆಂಗಳೂರಿನ ರಾಜಾಜಿನಗರ ಅಗ್ನಿಶಾಮಕ ಕಚೇರಿಯಲ್ಲಿನ ಮಾಕ್ ಡ್ರಿಲ್ ಮಧ್ಯಾಹ್ನ 3:58ರಿಂದ 4 ಗಂಟೆಯವರೆಗೆ ಸೈರನ್ ಮೊಳಗಿಸುವ ಮೂಲಕ ಪ್ರಾರಂಭವಾಯಿತು. ಈ ಸಮಯದಲ್ಲಿ ಜನತೆ ಯಾವುದೇ ಆತಂಕಪಡಬಾರದು ಎಂಬ ಸೂಚನೆ ಕೂಡ ನೀಡಲಾಯಿತು. ಈ ಡ್ರಿಲ್ ನ ಉದ್ದೇಶ – ಯುದ್ಧದಂತಹ ತುರ್ತು ಸಂದರ್ಭದಲ್ಲಾಗುವ ಸ್ಪಂದನೆ ಮತ್ತು ರಕ್ಷಣಾ ಕ್ರಮಗಳನ್ನು ಜನರಲ್ಲಿ ಅರಿವು ಮೂಡಿಸುವುದಾಗಿತ್ತು.

39

35 ಸ್ಥಳಗಳಲ್ಲಿ ಸೈರನ್, ಗಮನ ಸೆಳೆದ ಹಲಸೂರು ಡ್ರಿಲ್: ಬೆಂಗಳೂರು ನಗರದಲ್ಲಿ ಒಟ್ಟಾರೆ 35 ಕಡೆಗಳಲ್ಲಿ ಸೈರನ್ ಮೊಳಗಿಸಲಾಯಿತು. ಹಲಸೂರಿನ ಅಗ್ನಿಶಾಮಕ ಕಚೇರಿಯಲ್ಲಿ ನಡೆದ ಮಾಕ್ ಡ್ರಿಲ್ ವಿಶೇಷ ಗಮನ ಸೆಳೆದಿದ್ದು, ಕಟ್ಟಡದ ಮೇಲ್ಭಾಗದಲ್ಲಿ ಸಿಲುಕಿರುವವರ ರಕ್ಷಣೆಗೆ Bronto Skylift ವಾಹನದ ಮೂಲಕ ರಕ್ಷಣೆ ನಡೆಸುವ ಪ್ರದರ್ಶನ ಗಮನಾರ್ಹವಾಗಿತ್ತು.

49

ಗೃಹಸಚಿವ ಪರಮೇಶ್ವರ್‌ ಭೇಟಿ:
ಗೃಹಸಚಿವ ಡಾ. ಜಿ. ಪರಮೇಶ್ವರ್ ಅವರು ಹಲಸೂರಿನಲ್ಲಿ ನಡೆದ ಮಾಕ್ ಡ್ರಿಲ್ ವೀಕ್ಷಿಸಿ, 'ಭಾರತ ಸರ್ಕಾರವು ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ನಾಗರಿಕರು ಹೇಗೆ ಸ್ಪಂದಿಸಬೇಕು ಎಂಬುದರ ಅರಿವು ಮೂಡಿಸಲು ಈ ಮಾಕ್ ಡ್ರಿಲ್‌ಗಳನ್ನು ನಡೆಸುತ್ತಿದೆ. ಭಾರತದಲ್ಲಿ 244 ಜಿಲ್ಲೆಗಳಲ್ಲಿ ಇದು ನಡೆಯುತ್ತಿದೆ. ಅದರಲ್ಲಿ ಕರ್ನಾಟಕದ ಬೆಂಗಳೂರು, ಕಾರವಾರ ಮತ್ತು ರಾಯಚೂರು ಜಿಲ್ಲೆಗಳನ್ನೂ ಒಳಗೊಂಡಿದೆ' ಎಂದು ತಿಳಿಸಿದ್ದಾರೆ.

59

ವಾಟರ್ ರೆಸ್ಕ್ಯೂ ಟೀಮ್‌ಗಳಿಂದ ಸಮುದ್ರ ರಕ್ಷಣಾ ಪ್ರದರ್ಶನ:
ವಾಯು ದಾಳಿ ಅಥವಾ ಪ್ರಾಕೃತಿಕ ಆಪತ್ತುಗಳ ಸಂದರ್ಭದಲ್ಲಿ ಸಮುದ್ರ ತೀರದಲ್ಲಿ ಸಿಲುಕುವ ಸಾರ್ವಜನಿಕರ ರಕ್ಷಣೆಯ ಕುರಿತು ವಾಟರ್ ರೆಸ್ಕ್ಯೂ ತಂಡದಿಂದ (Water Rescue Team) ಕೆಲವು ಮಾದರಿಯ ಪ್ರದರ್ಶನವನ್ನೂ ನಡೆಸಿತು. ಬೆಂಕಿಗೆ ಸಿಲುಕಿರುವ ಕಟ್ಟಡ, ಗಾಯಾಳುಗಳ ರಕ್ಷಣೆ, ಆಂಬ್ಯುಲೆನ್ಸ್ ಸೇವೆಗಳ ಲೈವ್ ಡೆಮೋ ನಿಜವಾದ ಪರಿಸ್ಥಿತಿಯ ಅನುಭವವನ್ನು ನೀಡಿತು.

69

ಮಾಕ್ ಡ್ರಿಲ್‌ನಲ್ಲಿ ಪರಮೇಶ್ವರ್ ಭಾಗಿ:
ಅಣಕು ಪ್ರದರ್ಶನ ವೀಕ್ಷಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಅಮಾಯಕ ಜನರನ್ನು ಮಕ್ಕಳನ್ನು ಕೊಂದಿರುವುದನ್ನು ನೆನಪಿಸಿ ಕೊಂಡರೆ. ಸಿಟ್ಟು ಬಾರದೇ ಇರಲ್ಲ. ವಿಶೇಷವಾಗಿ ಗಡಿ ಕಾಯುವವರು ಇವೆಲ್ಲವನ್ನೂ ಸಹಿಸಿ ಕೊಂಡಿದ್ದರು. ಭಾರತ ಸರ್ಕಾರ ರಾತ್ರಿ 1.30ಕ್ಕೆ ಏರ್ ಸ್ಟ್ರೈಕ್ ಮಾಡಿದ್ದಾರೆ. ಎಲ್ಲೆಲ್ಲಿ ಟೆರರಿಸ್ಟ್ ಕ್ಯಾಂಪ್ ಇತ್ತು ಅದನ್ನ ಪತ್ತೆ ಹಚ್ಚುವ ಕೆಲಸ ಮಾಡಿ ದಾಳಿ ಮಾಡಿದ್ದಾರೆ. ಎಷ್ಟು ಜನ ಸತ್ತರು ಅನ್ನೋ  ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ. ಯುದ್ಧವಾದ ಛಾಯೆ ಇಡೀ ಭಾರತ ಆವರಿಸಿಕೊಂಡಿದೆ. ಈ ಸಂದರ್ಭದಲ್ಲಿ ನಾಗರೀಕರಿಗೆ ಅರಿವು ಮೂಡಿಸಬೇಕಿದೆ ಎಂದರು.

79

ತುರ್ತು ಸಂದರ್ಭದಲ್ಲಿ ಯಾವ ರೀತಿ ರಿಯಾಕ್ಟ್ ಮಾಡಬೇಕು ಅನ್ನೋ ಮಾಕ್ ಡ್ರಿಲ್ ಮಾಡಲು ಕೇಂದ್ರ ಸರ್ಕಾರ ತಿಳಿಸಿದೆ. ಎಲ್ಲ ರಾಜ್ಯದಲ್ಲಿ ಮಾಕ್ ಡ್ರಿಲ್ ಮಾಡಲು ತಿಳಿಸಿದ್ದಾರೆ. ಅದೇ ರೀತಿ ಮಾಕ್ ಡ್ರಿಲ್ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ಯಾವ ರೀತಿ ನಾಗರೀಕರನ್ನ ರಕ್ಷಿಸಬೇಕು‌. ನಾಗರೀಕರ ಜವಬ್ದಾರಿ ಏನು ಅನ್ನೋದ್ರ ಮಾಕ್ ಡ್ರಿಲ್ ನಡೆಯಿತು. ದೇಶದಾದ್ಯಂತ 244 ಜಿಲ್ಲೆಗಳನ್ನ ಕೇಂದ್ರ ಸರ್ಕಾರ ಗುರುತಿಸಿದೆ.

89

ಡ್ಯಾಮ್, ಇರಿಗೇಷನ್, ಕೈಗಾರಿಕಗಳು, ಹೆಚ್ಚು ಜನ ವಾಸ ಮಾಡುವ ಪ್ರದೇಶವನ್ನ ಗಮನದಲ್ಲಿಟ್ಟುಕೊಂಡು 244 ಜಿಲ್ಲೆಗಳನ್ನ ಗುರುತಿಸಿದೆ. ಆದರಲ್ಲಿ ನಮ್ಮ ರಾಜ್ಯದಲ್ಲಿ 3 ಜಿಲ್ಲೆಗಳನ್ನ ಗುರುತಿಸಿದ್ದಾರೆ. ಬೆಂಗಳೂರು, ರಾಯಚೂರು, ಕಾರವಾರವನ್ನ ಗುರುತಿಸಿದ್ದಾರೆ. ಈ ಜಿಲ್ಲೆಗಳಲ್ಲಿ ನೇವಿ, ಕಾರ್ಖಾನೆಗಳು ಹಾಗೂ ಕಂಪನಿಗಳು ಇವೆ. ಆದ್ರಿಂದ ಈ 3 ಜಿಲ್ಲೆಗಳನ್ನ ಯಾವ ರೀತಿಯಾಗಿ ಕಾಪಾಡಿಕೊಳ್ಳಬೇಕು ಅನ್ನೋ ಮಾಕ್ ಡ್ರಿಲ್ ಇದು. 3 ಜಿಲ್ಲೆಗಳಲ್ಲೂ ಇವತ್ತು ಮಾಕ್ ಡ್ರಿಲ್ ನಡೆಯುತ್ತಿದೆ ಎಂದರು.

99

ಇನ್ನು ದೇಶದಾದ್ಯಂತ ಮಾಕ್ ಡ್ರಿಲ್ ಮಾಡುತ್ತಿರುವ ವಿಚಾರ ತುಂಬಾ ಪ್ರಮುಖವಾದ ವಿಚಾರವಾಗಿದೆ. ಮಾಕ್ ಡ್ರಿಲ್ ಗಳನ್ನ ನಾನು ನೋಡುತ್ತಿದ್ದೆ. ಇದು ಇನ್ನು ಫಾಸ್ಟ್ ಆಗಿ ನಡೆಯಬೇಕು. ನಾನು ಆಲ್ ರೆಡಿ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಅವರು ಆನ್ ದ ಸಿಚುಯೇಷನ್ ನಾವು ಸಮರ್ಪಕವಾಗಿ ಮಾಡುತ್ತೇವೆ ಅಂತ ಹೇಳಿದ್ದಾರೆ. ಬಿಲ್ಡಿಂಗ್ ನಿಂದ ಜನರನ್ನ ಲ್ಯಾಡರ್ ನಲ್ಲಿ ಇಳಿಸುವುದೇ 10 ನಿಮಿಷ ಆಯ್ತು. ಅಷ್ಟು ಹೊತ್ತು ರೆಸ್ಕ್ಯೂ ಮಾಡಿದ್ರೆ ಪ್ರಾಣ ರಕ್ಷಿಸೋದು ಕಷ್ಟ. ಅದನ್ನು ಇನ್ನು ಸ್ಪೀಡ್ ಆಗಿ ಮಾಡಬೇಕಿದೆ ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದರು.

Read more Photos on
click me!

Recommended Stories