ತಮನ್ನಾ ಬರ್ತಿದ್ದಂತೆ 22 ವರ್ಷ ಹಿಂದಿನ ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತು ವೈರಲ್

Published : Feb 11, 2026, 09:12 AM IST

ನಟಿ ತಮನ್ನಾ ಭಾಟಿಯಾ ಕರ್ನಾಟಕದ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್‌ನ ಹೊಸ ರಾಯಭಾರಿಯಾಗಿದ್ದಾರೆ. ಈ ನೇಮಕಾತಿ ಮತ್ತು ಅವರ ಸಂಭಾವನೆ ಚರ್ಚೆಗೆ ಕಾರಣವಾಗಿದ್ದು, ಇದೇ ವೇಳೆ 22 ವರ್ಷಗಳ ಹಿಂದಿನ ಸೋಪಿನ ಕಪ್ಪು-ಬಿಳುಪು ಜಾಹೀರಾತೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

PREV
16
ಮೈಸೂರು ಸ್ಯಾಂಡಲ್ ಸೋಪ್‌

Mysore Sandal Soap - The Royal Beauty Ritual: ಸೌಥ್ ಸಿನಿ ಅಂಗಳದ ಜನಪ್ರಿಯ ನಟಿ ತಮನ್ನಾ ಭಾಟಿಯಾ ಕರ್ನಾಟಕದ ಹೆಮ್ಮೆಯ ಉತ್ಪನ್ನ ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಭಾರಿಯಾಗಿದ್ದಾರೆ. ಮಂಗಳವಾರ ಅಧಿಕೃತವಾಗಿ ರಾಯಭಾರಿಯಾಗಿ ಕೆಲಸ ಆರಂಭಿಸಿರುವ ತಮನ್ನಾ ಭಾಟಿಯಾ, ಮೈಸೂರು ಸ್ಯಾಂಡಲ್ ಸೋಪ್ ಕೇವಲ ಒಂದು ಉತ್ಪನ್ನ ಅಲ್ಲ. ಈ ಸೋಪ್ ನಮ್ಮ ಬಾಲ್ಯದ ನೆನಪುಗಳ ಜೊತೆಯಲ್ಲಿದೆ ಎಂದು ಹೇಳಿದರು.

26
ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ

ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ನೇಮಕಗೊಂಡಿರುವ ನಟಿ ತಮನ್ನಾ ಭಾಟಿಯಾ 2 ವರ್ಷಗಳ ಅವಧಿಗೆ 6 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ. ಕರ್ನಾಟಕದ ಹೆಮ್ಮೆಯ ಉತ್ಪನ್ನಕ್ಕೆ ಬೇರೆ ಭಾಷೆಯ ನಟಿಯನ್ನು ಕರೆತಂದಿರೋದು ಎಷ್ಟು ಸರಿ? 6 ಕೋಟಿ ಸಂಭಾವನೆ ನೀಡುತ್ತಿರೋದಕ್ಕೆ ಕೆಲ ವರ್ಗದ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

36
ಜಾಹೀರಾತು

ಇತ್ತ ಮತ್ತೊಂದು ವರ್ಗದ ಜನರು ಒಂದು ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಪರಿಚಯಿಸಲು ಅಥವಾ ಮಾರಾಟ ಹೆಚ್ಚಳ ಮಾಡಲು ಜನಪ್ರಿಯ ವ್ಯಕ್ತಿಗಳು ಬೇಕಾಗುತ್ತಾರೆ. ತಮನ್ನಾ ಭಾಟಿಯಾ ಅವರನ್ನು ಇಡೀ ದೇಶವೇ ಗುರುತಿಸುತ್ತದೆ. ತಮ್ಮ ತ್ವಚೆಯಿಂದಲೇ ಆಕರ್ಷಿಸುವ ತಮನ್ನಾ ಅವರ ಆಯ್ಕೆ ಉತ್ತಮ. ಇದೆಲ್ಲವೂ ಮಾರುಕಟ್ಟೆ ತಂತ್ರಗಾರಿಕೆಗಳು. ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಸ್ಪರ್ಧೆ ನಡೆಸಲು ಇದೆಲ್ಲವೂ ಅವಶ್ಯಕ ಎಂದು ಹೇಳಿದ್ದರು.

46
22 ವರ್ಷಗಳ ಹಿಂದಿನ ಜಾಹೀರಾತು ವೈರಲ್

ಈ ಎಲ್ಲಾ ಬೆಳವಣಿಗೆ ನಡುವೆ ಸುಮಾರು 22 ವರ್ಷಗಳ ಹಿಂದಿನ ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತು ಪ್ರಕಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನೋಡಿ ನಮ್ ಸೋಪು. ಆಗ ಅಂದರೆ ಎಪ್ಪತ್ತೆರಡು ವರ್ಷಗಳ ಹಿಂದೆ, ತಮನ್ನಾ ಗಿಮನ್ನಾ ಅಂತ ಯಾರೂ ಇರಲಿಲ್ಲ ರೂಪದರ್ಶಿಗಳು. ಆ ಸೋಪಿನ ಪರಿಮಳವೊಂದೇ ಸಾಕಿತ್ತು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದರು.

56
ಜಾಹೀರಾತಿನಲ್ಲಿ ಏನಿದೆ?

ಕಪ್ಪು-ಬಿಳುಪು ಬಣ್ಣದ ಜಾಹೀರಾತಿನಲ್ಲಿ ಸೋಪ್ ಮತ್ತು ಕೆಲ ಜನರು ಸರದಿ ಸಾಲಿನಲ್ಲಿ ನಿಂತಿರುವ ಕಾರ್ಟೂನ್ ನೋಡಬಹುದು. ಇವುಗಳ ಜೊತೆಯಲ್ಲಿ ಜಾಹೀರಾತು ಗ್ರಾಹಕರನ್ನು ಆಕರ್ಷಿಸುವ ಸಾಲುಗಳನ್ನು ಹೊಂದಿದೆ.

ಇದನ್ನೂ ಓದಿ: Haveri: ಅಂಕಲ್ ಮಮ್ಮಿಗೆ ಫೋನ್ ಕೊಡಿ: ಮದುವೆಯಾದ ವಾರದಲ್ಲೇ ಬಯಲಾಯ್ತು ವಧು ರೇಖಾ ಆಂಟಿ ರಹಸ್ಯ!

66
ಮೈಸೂರು ಸ್ಯಾಂಡಲ್ ಸೋಪ್

ಕ್ಯೂ ನಿಂತು ಬೇಸತ್ತಾಗ.. ನಿಮ್ಮ ದೇಹ ಮನಸ್ಸು ಎರಡೂ ನೆಮ್ಮದಿಯಿಂದಿರುವುದಿಲ್ಲ ಅಲ್ಲವೇ? ಮನಸ್ಸಿಗೆ ಉಲ್ಲಾಸವನ್ನು ದೇಹಕ್ಕೆ ಚೈತನ್ಯವನ್ನೂ ಕೊಡುವ ಸಾಧನವೆಂದ್ರೆ ಸ್ನಾನ. ಸ್ನಾನಕ್ಕೆ ಮೈಸೂರು ಸ್ಯಾಂಡಲ್ ಸೋಪು ಮರೆಯಬೇಡಿ ಮತ್ತೆ. ದೇಹದ ಕಲ್ಮಶವನ್ನು ನಿವಾರಿಸುವುದದಲ್ಲೇ ಮೃದು ಮಧುರವಾದ ಸುವಾಸನೆಯನ್ನು ಕೊಡುತ್ತದೆ.

ಇದನ್ನೂ  ಓದಿ: ಮನೆಯೊಂದು ಮೂರು ಬಾಗಿಲಾದ ಮೈಸೂರು JDS: ಅಪ್ಪನ ವಿರುದ್ಧವೇ ಮಗ? GTDಗೆ HDK ಬಿಗ್‌ ಶಾಕ್!

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories