ಸಚಿವ ಬೈರತಿ ಸುರೇಶ್ ವಿಧಾನಸೌಧದ ಕಚೇರಿಯಲ್ಲೇ 300 ಗ್ರಾಂ ಚಿನ್ನಾಭರಣ, 1.5 ಲಕ್ಷ ನಗದು ಕಳ್ಳತನ

Published : Feb 10, 2026, 10:34 AM IST

ವಿಧಾನಸೌಧದಲ್ಲಿ ಸಚಿವ ಬೈರತಿ ಸುರೇಶ್ ಅವರ ಕಚೇರಿಯಲ್ಲೇ ಕಳ್ಳತನ ನಡೆದಿದೆ. ಕಚೇರಿಗೆ ಬಂದಿದ್ದ ವ್ಯಕ್ತಿಯೊಬ್ಬರು ಮರೆತುಹೋದ 300 ಗ್ರಾಂ ಚಿನ್ನ ಹಾಗೂ 1.5 ಲಕ್ಷ ನಗದುಳ್ಳ ಬ್ಯಾಗ್‌ ಕಳ್ಳತನವಾಗಿದೆ. ಈ ಸಂಬಂಧ ದೂರು ದಾಖಲಾಗಿದೆ.

PREV
15
300 ಗ್ರಾಂ ಚಿನ್ನಾಭರಣ, 1.5 ಲಕ್ಷ ನಗದು

ಶಕ್ತಿಸೌಧ ವಿಧಾನಸೌಧದಲ್ಲಿಯೇ ಕಳ್ಳತನ ನಡೆದಿದೆ. ರಾಜ್ಯ ಸರ್ಕಾರದ ಪ್ರಭಾವಿ ಸಚಿವರಾದ ಬೈರತಿ ಸುರೇಶ್ ಅವರ ಕಚೇರಿಯಲ್ಲಿದ್ದ 300 ಗ್ರಾಂ ಚಿನ್ನಾಭರಣ, 1.5 ಲಕ್ಷ ನಗದು ಕಳ್ಳತನವಾಗಿದೆ. ಇದರ ನಡುವೆ ವಿಧಾನಸೌಧದೊಳಗೆ ಇಷ್ಟೊಂದು ಚಿನ್ನಾಭರಣ ಹೇಗೆ ಬಂತು ಎಂಬುದರ ಬಗ್ಗೆಯೂ ಪ್ರಶ್ನೆ ಮೂಡಿದೆ.

25
ಚಿನ್ನ ಮತ್ತು ಹಣವುಳ್ಳ ಚೀಲ ಇರಲಿಲ್ಲ

ನವೀನ್ ಎಂಬ ವ್ಯಕ್ತಿ ಕೆಲಸದ ನಿಮಿತ್ ಸಚಿವ ಬೈರತಿ ಸುರೇಶ್ ಅವರ ಕಚೇರಿಗೆ ಆಗಮಿಸಿದ್ದರು. ಈ ವೇಳೆ ನವೀನ್ ತಮ್ಮೊಂದಿಗೆ ತೆಗೆದುಕೊಂಡು ಬಂದಿದ್ದ ಚಿನ್ನಾಭರಣ ಮತ್ತು ಹಣವುಳ್ಳ ಬ್ಯಾಗ್ ಮರೆತು ಹೋಗಿದ್ದಾರೆ. ಮರುದಿನ ಬಂದು ನೋಡಿದಾಗ ಸಚಿವರ ಕಚೇರಿಯಲ್ಲಿ ಚಿನ್ನ ಮತ್ತು ಹಣವುಳ್ಳ ಚೀಲ ಇರಲಿಲ್ಲ.

35
ವಿಧಾನಸೌಧ ಪೊಲೀಸ್ ಠಾಣೆ

ಇದೀಗ ತಮ್ಮ ಬ್ಯಾಗ್ ಕಾಣೆಯಾಗಿದ್ದರ ಬಗ್ಗೆ ನವೀನ್ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ವಿಧಾನಸೌಧಕ್ಕೆ ಆಗಮಿಸಿ ಸಚಿವರ ಕಚೇರಿಯ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಡಿಪಿಎಆರ್ ಡಿ ಗ್ರೂಪ್ ನೌಕರನ ಪಾತ್ರವಿರೋದು ಪತ್ತೆಯಾಗಿದೆ.

45
ಸಿಸಿಟಿವಿ ಕ್ಯಾಮೆರಾ ಪರಿಶೀಲನೆ

ಡಿಪಿಎಆರ್ ಡಿ ಗ್ರೂಪ್ ನೌಕರ ಬ್ಯಾಗ್ ತೆಗೆದುಕೊಂಡು ಹೋಗುತ್ತಿರೋದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಕರಣ ಸಂಬಂಧ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಹೊಯ್ಸಳ ವಾಹನಕ್ಕೆ ಆಟೋ ಗುದ್ದಿಸಿ ಕಳ್ಳನ ಹಿಡಿದುಕೊಟ್ಟಚಾಲಕ! ಅಸಲಿಗೆ ನಡೆದ್ದೇನು?

55
ಹಲವು ಪ್ರಶ್ನೆಗಳು

ಅಸಲಿಗೆ ವಿಧಾನಸೌಧದೊಳಗೆ ಇಷ್ಟೊಂದು ಚಿನ್ನಾಭರಣ ಮತ್ತು ಹಣ ಬಂದಿದ್ದು ಹೇಗೆ? ದೂರು ದಾಖಲಿಸಿರುವ ನವೀನ್ ಯಾರು? ಮೆಟಲ್‌ ಡಿಟೆಕ್ಟರ್ ,ತಪಾಸಣೆ ಕೇವಲ ನೆಪಕ್ಕೆ ಮಾತ್ರಾನಾ? ಸಚಿವರ ಕಚೇರಿಯೊಳಗೆ ಬಂದಿರುವ ಈ ಚಿನ್ನಾಭರಣದ ಮೂಲ ಏನು ಎಂಬಿತ್ಯಾದಿ ಪ್ರಶ್ನೆಗಳು ಮೂಡಿವೆ.

ಇದನ್ನೂ ಓದಿ: ಮೆಟ್ರೋ ಟಿಕೆಟ್‌ ದರ ದರ ಏರಿಕೆಯಲ್ಲಿ ಕೇಂದ್ರದ ಪಾತ್ರವಿಲ್ಲ: ಆರ್‌.ಅಶೋಕ್‌

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories