ನಾಪತ್ತೆಯಾಗಿದ್ದ ಮಹಿಳೆ 25 ವರ್ಷಗಳ ಬಳಿಕ ಪತ್ತೆ!; ಅಧಿಕಾರಿಗಳ ಪ್ರಯತ್ನದ ಫಲವಾಗಿ ಮರಳಿ ಗೂಡು ಸೇರಿದ ಸಾಕಮ್ಮ!

First Published | Dec 23, 2024, 10:00 AM IST

ಮನೆಯಿಂದ ನಾಪತ್ತೆಯಾಗಿದ್ದ ಮಹಿಳೆ ಬರೋಬ್ಬರಿ 25 ವರ್ಷಗಳ ಬಳಿಕ ಪತ್ತೆಯಾದ ವಿಚಿತ್ರ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಕಾಣೆಯಾಗಿದ್ದ  ಆ ತಾಯಿಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ತಡ ಮಾಡದೇ ತಕ್ಷಣ ಅಧಿಕಾರಿಗಳ ತಂಡವನ್ನು ಚಂಢಿಗಡಕ್ಕೆ ಕಳುಹಿಸಿ ಮರಳಿ ಗೂಡು ಸೇರುವಂತೆ ಮಾಡಿದ ಸಮಾಜ ಕಲ್ಯಾಣ ಅಧಿಕಾರಿ ಕ್ಯಾ. ಮಣಿವಣ್ಣನ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
 

ಬಳ್ಳಾರಿ ಮೂಲದ ಸಾಕಮ್ಮ,ಪತ್ತೆಯಾದ ಮಹಿಳೆ. ಮೂವರು ಮಕ್ಕಳ ತಾಯಿಯಾಗಿರುವ ಸಾಕಮ್ಮ. 25 ವರ್ಷಗಳ ಹಿಂದೆ ಮನೆಯಿಂದ ಹೊಸಪೇಟೆ ರೈಲು ನಿಲ್ದಾಣಕ್ಕೆ ಹೋದಾಕೆ ಮರಳಿ ಮನೆಗೆ ಬಂದಿರಲಿಲ್ಲ.

ಎಲ್ಲ ಕಡೆ ಹುಡುಕಾಡಿದ್ದ ಕುಟುಂಬಸ್ಥರು ಕೊನೆಗೆ ಮೃತಮಟ್ಟಿದ್ದಾಳೆಂದು ಭಾವಿಸಿ ತಿಥಿ ಕಾರ್ಯವನ್ನು ಸಹ ಮಾಡಿದ್ದರು. ಆದರೆ ಇಪ್ಪತ್ತೈದು ವರ್ಷಗಳ ಬಳಿಕ ದೂರದ ಚಂಢಿಗಡದ ಅನಾಥಾಶ್ರಮವೊಂದರಲ್ಲಿ ಇರುವುದು ಗೊತ್ತಾಗಿದೆ.

Tap to resize

ಯಾವುದೋ ಟ್ರೈನ್ ಹತ್ತಿ ಕಾಣೆಯಾಗಿದ್ದ ಸಾಕಮ್ಮ:

ಇಪ್ಪತ್ತೈದು ವರ್ಷಗಳ ಹಿಂದೆ ಹೊಸಪೇಟೆ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ಎಲ್ಲಿಗೋ ತೆರಳಬೇಕಿದ್ದ ಸಾಕಮ್ಮ. ಆಕಸ್ಮಿಕವಾಗಿ ಹೊಸಪೇಟೆಯಿಂದ ಚಂಢಿಗಡಕ್ಕೆ ಹೊರಡುವ ಟ್ರೈನ್ ಹತ್ತಿದ್ದಾಳೆ. ಹೀಗೆ ದೂರದ ಚಂಢಿಗಡ ಹೋಗಿದ್ದ ಸಾಕಮ್ಮ ಮರಳಿ ಹೊಸಪೇಟೆಗೆ ಬರಲು ಗೊತ್ತಾಗದೆ. ಹಣವೂ ಇಲ್ಲದೆ ಅಲ್ಲೆ ಅಲೆದಾಡಿದ್ದಾಳೆ. ಕೊನೆಗೆ ಚಂಢಿಗಡದ ಮಂಡಿ ಜಿಲ್ಲೆಯ ಅನಾಥಾಶ್ರಮವೊಂದರಲ್ಲಿ ನೆಲೆಯೂರಿದ್ದ ಸಾಕಮ್ಮ. 
 

ಪತ್ತೆ ಹಚ್ಚಿದ್ದು ಹೇಗೆ?

ಬಳ್ಳಾರಿ ಮೂಲದ ಸಾಕಮ್ಮ ಎಂಬಾಕೆ ಅನಾಥಾಶ್ರಮದಲ್ಲಿ ನೆಲೆಯೂರಿರುವ ಬಗ್ಗೆ ಮಂಡ್ಯ ಮೂಲದ ಐಪಿಎಸ್ ಅಧಿಕಾರಿಯೊಬ್ಬರಿಗೆ ಮಾಹಿತಿ ಲಭಿಸಿದ. ಈ ಬಗ್ಗೆ ಕರ್ನಾಟಕ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯಾಗಿರುವ ಕ್ಯಾಪ್ಟನ್ ಮಣಿವಣ್ಣನ್ ಅವರಿಗೆ ಬಳ್ಳಾರಿ ಮೂಲದ ಅಜ್ಜಿಯ ಬಗ್ಗೆ ಮಾಹಿತಿ ನೀಡಿದ್ದ ಪೊಲೀಸ್ ಅಧಿಕಾರಿ. 

 ಕ್ಯಾ.ಮಣಿವಣ್ಣನ್ ಅವರ ನಿರ್ದೇಶನದ ಮೇರೆಗೆ ಬಳ್ಳಾರಿ ಅಧಿಕಾರಿಗಳ ತಂಡ ಚಂಢಿಗಡದ ಮಂಡಿ ಜಿಲ್ಲೆಯಲ್ಲಿನ ಅನಾಥಾಶ್ರಮಕ್ಕೆ ಭೇಟಿ ನೀಡಿದ್ದಾರೆ. ಅಜ್ಜಿಯನ್ನ ವಿಚಾರಿಸಿರುವ ಅಧಿಕಾರಿಗಳ ತಂಡ. ಬಳ್ಳಾರಿ ಜಿಲ್ಲೆಯ ಕುಟುಂಬಸ್ಥರ ಕುರಿತು ಮಾಹಿತಿ ಕೇಳಿದ್ದಾರೆ. ಅನಂತರ ಅಲ್ಲಿಂದಲೇ ಬಳ್ಳಾರಿಯಲ್ಲಿರುವ ಮಕ್ಕಳಿಗೆ ಕರೆ ಮಾಡಿದ್ದಾರೆ.

ತಾಯಿ ಜೀವಂತ ಇರುವುದು ತಿಳಿದು ಕಣ್ಣೀರಾದ ಮಕ್ಕಳು. 25 ವರ್ಷಗಳಿಂದ ತಾಯಿ ಮೃತಳಾಗಿದ್ದಾಳೆಂದು ಎಲ್ಲ ಕಾರ್ಯ ಮುಗಿಸಿದ್ದ ಮಕ್ಕಳು. ಇದೀಗ ತಾಯಿ ಜೀವಂತ ಇರುವುದು ತಿಳಿದು ತಿಳಿದು ಕುಟುಂಬಸ್ಥರು, ಮಕ್ಕಳಿಗೆ ದುಃಖ ಉಮ್ಮಳಿಸಿ ಕಣ್ಣೀರಾಗಿದ್ದಾರೆ. ಅಧಿಕಾರಿಗಳ ಪ್ರಯತ್ನದಿಂದ ಸಾಕಮ್ಮ 25 ವರ್ಷಗಳ ಬಳಿಕ ಮನೆ ಸೇರುತ್ತಿದ್ದಾರೆ.
 

Latest Videos

click me!