ಐಟಿ ಬಿಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಇಂದು ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಸಂಚಾರ ಮಾಡಿ ಅಚ್ಚರಿ ಮೂಡಿಸಿದರು. ನಾಸ್ಕಾಮ್ ಡಿಸೈನ್ ಮತ್ತು ಎಂಜಿನಿಯರಿಂಗ್ ಶೃಂಗಸಭೆ 2024( Nasscom Design and Engineering Summit 2024) ರಲ್ಲಿ ಪಾಲ್ಗೊಳ್ಳಲು ಅವರು ವಿಧಾನ ಸೌಧ ಮೆಟ್ರೋ ನಿಲ್ದಾಣದಿಂದ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಿದರು.