ಶ್ರೀಕೃಷ್ಟನ ದೇವಸ್ಥಾನ ನಿರ್ಮಿಸಿ ಸಾಮರಸ್ಯದ ದೀಪ ಬೆಳಗಿದ ಮುಸ್ಲಿಂ ವ್ಯಕ್ತಿ!

First Published | Aug 29, 2024, 1:14 PM IST

ಹಿಂದೂ- ಮುಸ್ಲಿಂ ಅಂತಾ ಬಡಿದಾಡಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಶ್ರೀ ಕೃಷ್ಣನ ದೇವಸ್ಥಾನ ನಿರ್ಮಿಸಿ ಸಾಮರಸ್ಯದ ಸಂದೇಶ ಸಾರಿದ್ದಾರೆ.

ಕೃಷ್ಣ ಜನ್ಮಾಷ್ಟಮಿಯನ್ನು ಹಿಂದೂಗಳ ರೀತಿ  ಆಚರಿಸುವದರ ಜೊತೆಗೆ ಶ್ರೀ ಕೃಷ್ಣನ ದೇವಸ್ಥಾನವನ್ನ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಖುರ್ದ್‌ನಲ್ಲಿ ಗ್ರಾಮಸ್ಥರ ಸಹಕಾರದಿಂದ  ಬಾಪುಸಾಹೇಬ್ ಶೌಕತ್‌ಅಲಿ ತಾಸೆವಾಲೆ ಎಂಬುವರು ನಿರ್ಮಾಣ ಮಾಡಿದ್ದಾರೆ. 

ಸಬ್ ಕಾ ಮಾಲೀಕ್ ಏಕ್ ಹೈ ಎಂಬಂತೆ ಬದುಕುತ್ತಿರುವ ಮುಸ್ಲಿಂ ಸಮುದಾಯದ ಬಾಂಧವ ಕೃಷ್ಣನ ಆರಾಧನೆ ಮಾಡುತ್ತಿದ್ದಾರೆ. ಬಾಪುಸಾಹೇಬ್‌ನ ಮನೆಯಲ್ಲಿ ಕೃಷ್ಣ, ರಾಮ, ಶಿವಪಾರ್ವತಿ, ಹನುಮಂತ ಸೇರಿದಂತೆ ಹಿಂದೂಗಳ ದೇವರನ್ನು ಆರಾಧಿಸುತ್ತಾರೆ.

Latest Videos


ದೇವಸ್ಥಾನದ ಉದ್ಘಾಟನೆಯನ್ನ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಮಠಾಧೀಶರು ಉದ್ಘಾಟಿಸಿ ಮುಸ್ಲಿಂ ಸಮುದಾಯದ ಬಾಬಾಸಾಹೇಬರ ಸಾಮರಸ್ಯದ ಸಂದೇಶದ  ಕಾರ್ಯವನ್ನ ಶ್ಲಾಘಸಿದ್ದಾರೆ.

click me!