ದರ್ಶನ್‌ಗೆ ಬಳ್ಳಾರಿ ಬೇಡ ತಿಹಾರ್ ಜೈಲಿಗೆ ಕಳುಹಿಸಿ, ಅತ್ಯಂತ ಕೆಟ್ಟ ಸೆರೆಮನೆ ಕಿರಣ್ ಬೇಡಿಯಿಂದ ಬದಲಾಯ್ತು

First Published | Aug 30, 2024, 8:52 PM IST

ಆರೋಪಿ ದರ್ಶನ್​ ಜೈಲಿನ ಎರಡು ಪೋಟೋಗಳು ರಾಜ್ಯ ಮಾತ್ರವಲ್ಲ ದೇಶವನ್ನೇ ಚಿಂತೆಗೀಡು ಮಾಡಿವೆ. ಈ ಎರಡು ಪೋಟೋಗಳು ದೇಶದಲ್ಲಿರುವ ಜೈಲಿನ ದುಸ್ಥಿತಿಯನ್ನು ತೋರಿಸಿವೆ.  ಇದು ಕೇವಲ ಪರಪ್ಪನ ಅಗ್ರಹಾರ ಜೈಲಿನ ಕಥೆಯಲ್ಲ ದೇಶದ ಎಲ್ಲ ಜೈಲುಗಳನ್ನೂ ಇದೇ ಪರಿಸ್ಥಿತಿ ಇದೆ.    ದರ್ಶನ್ ಅವರಿಗೆ ಬಳ್ಳಾರಿ ಜೈಲು ಸುರಕ್ಷಿತವಲ್ಲ, ಅಲ್ಲೂ ಸಹ ಇತರೆ ಜೈಲುಗಳಂತೆ ಹಲವು ಅಕ್ರಮ ಚಟುವಟಿಕೆಗಳು ನಡೆಯುತ್ತವೆ. ಹಾಗಾಗಿ ದರ್ಶನ್ ಅನ್ನು ತಿಹಾರ್ ಜೈಲಿಗೆ ಕಳಿಸಿಬಿಟ್ಟರೆ ಅಲ್ಲಿ ಸುರಕ್ಷಿತವಾಗಿರುತ್ತಾರೆ ಎಂದು ಕುಖ್ಯಾತ ಕಳ್ಳ, ಬಳ್ಳಾರಿ ಜೈಲಿನ ಮಾಜಿ ಕೈದಿ ಸಿಗ್ಲಿ ಬಸ್ಯ ಸಲಹೆ ನೀಡಿದ್ದಾರೆ. ಆದರೆ ನೀವು ತಿಹಾರ್‌ ಜೈಲಿನ ಕ್ರಾಂತಿ ಬಗ್ಗೆ ತಿಳಿಯಲೇಬೇಕು. 

ದೇಶದಲ್ಲಿ ಜೈಲುಗಳ ಅವ್ಯವಸ್ಥೆ ಹೇಳತೀರದು. ಬಲ್ಲವರು ಹೇಳು ಪ್ರಕಾರ ದೇಶದ ಯಾವುದೇ ಜೈಲು ಸಹ ಕನಿಷ್ಠ ನಿಯಮಗಳನ್ನು ಪಾಲಿಸುತ್ತಿಲ್ಲ. ಇದಕ್ಕೆಲ್ಲ ಕಾರಣ ಅಧಿಕಾರಿಗಳೇ ಆಗಿದ್ದಾರೆ ಅನ್ನೋದು ಇನ್ನೂ ದುರಂತ. ಜೈಲುಗಳ ಈ ಹದಗೆಟ್ಟ ವ್ಯವಸ್ಥೆಯನ್ನು ನೋಡಿದ್ರೆ ನಮಗೆಲ್ಲ ಕಿರಣ್​​ ಬೇಡಿ ನೆನಪಾಗುತ್ತಾರೆ. ಕಿರಣ್​ ಬೇಡಿ ತಿಹಾರ್​ ಜೈಲಿನ ಐಜಿ ಆಗಿದ್ದಾಗ ಅಲ್ಲಿ ದೊಡ್ಡ ಮಟ್ಟದ ಸುಧಾರಣೆ ತಂದಿದ್ದರು. ದೇಶದ ಮೊದಲ ಮಹಿಳಾ ಐಪಿಎಸ್​​ ಅಧಿಕಾರಿಯಾಗಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಇವರು ತಮ್ಮ ಸರ್ವೀಸ್​​​ನ 35 ವರ್ಷಗಳ ಕಾಲ ಯಶಸ್ವಿಗೊಳಿಸಿದ್ದಾರೆ.

ಬೇಡಿ ಸಾಧನೆಗೆ ಇಡೀ ದೇಶವೇ ಇವರಿಗೆ ಸೆಲ್ಯೂಟ್ ಹೊಡೆದಿತ್ತು. ಹೀಗಾಗಿ ಕಿರಣ್​ ಬೇಡಿ ಇಂದಿಗೂ ಯೂತ್​​ ಐಕಾನ್​ ಆಗಿದ್ದಾರೆ ಎಂದು ಹೇಳಿದರೂ ತಪ್ಪಿಲ್ಲ.  ಅವರು ತಿಹಾರ್​ ಜೈಲಿನಲ್ಲಿ ಐಜಿಯಾಗಿ ತಂದಿರುವ ಸುಧಾರಣೆಗಳ ಕುರಿತು ಹೇಳಲೇಬೇಕು.  ಏಷ್ಯಾದ ಅತೀ ದೊಡ್ಡ ಜೈಲಾಗಿರುವ ತಿಹಾರ್​ ಸೆರೆಮನೆ. 1993ರಲ್ಲಿ ಕಾರಾಗೃಹ ಐಜಿಪಿಯಾಗಿ ಕಿರಣ್​ ಬೇಡಿ ತಮ್ಮ ಸರ್ವೀಸ್​​​​ ಉದ್ದಕ್ಕೂ ಕೊಟ್ಟ ಹುದ್ದೆಗೆ ಶಿಸ್ತಿನ ಕೆಲಸದ ಮೂಲಕ ಗೌರವ ತಂಡುಕೊಡುತ್ತಲೇ ಬಂದಿದ್ದರು. 90ರ ದಶಕದಲ್ಲಿ ತಿಹಾರ್​​ ಜೈಲು ಅಕ್ಷರಶಃ ರೌಡಿ-ಗೂಂಡಾಗಳ ಅಡ್ಡಾದಂತಾಗಿತ್ತು. ಅಲ್ಲಿನ ವ್ಯವಸ್ಥೆ ತುಂಬಾನೇ ಹದಗೆಟ್ಟಿತ್ತು.

Latest Videos


ಹೇಗಿತ್ತು ತಿಹಾರ್​ ಜೈಲಿನ ಸ್ಥಿತಿಗತಿ..?

ಈ ಸಂದರ್ಭದಲ್ಲಿ ತಿಹಾರ್​ ಜೈಲಿನ ಸುಧಾರಣೆ ತರಲೆಂದೇ ಕೇಂದ್ರ ಸರ್ಕಾರ ದಕ್ಷ ಮಹಿಳಾ ಅಧಿಕಾರಿ ಕಿರಣ್​ ಬೇಡಿಯವರನ್ನು, ತಿಹಾರ್​​ ಜೈಲಿನ ಐಜಿಪಿಯಾಗಿ 1993ರಲ್ಲಿ ನೇಮಕ ಮಾಡಿತ್ತು. ತಿಹಾರ್​ ಜೈಲಿಗೆ ಕಿರಣ್​ ಬೇಡಿ ಐಜಿಪಿಯಾಗಿ ಹೋದ ಮೇಲೆ ಏನೆಲ್ಲ ಸುಧಾರಣೆ ತಂದರು ಎಂದು ನಾವು-ನೀವೆಲ್ಲ ತಿಳಿಯುವುದು ಅವಶ್ಯವಿದೆ. ಅದು ತಿಳಿಯಬೇಕೆಂದ್ರೆ ತಿಹಾರ್​​ ಜೈಲು ಅದೆಷ್ಟರ ಮಟ್ಟಿಗೆ ಹದಗೆಟ್ಟಿತ್ತು ಅನ್ನೋದನ್ನು ಮೊದಲು ತಿಳಿಯಬೇಕು. 1993ರಲ್ಲಿ ಕಿರಣ್​ ಬೇಡಿ ತಿಹಾರ್​ ಜೈಲಿನ ಐಜಿಪಿಯಾಗಿ ಅಧಿಕಾರ ಸ್ವೀಕರಿಸುವ ಮುನ್ನ ತಿಹಾರ್​ ಜೈಲಿನ ವ್ಯವಸ್ಥೆ ತುಂಬಾನೇ ಹದಗೆಟ್ಟಿತ್ತು.

ಸಾಮಾನ್ಯವಾಗಿ ದೇಶದ ಎಲ್ಲ ಜೈಲುಗಳ ಪರಿಸ್ಥಿತಿನೂ ಅದೇ ಆಗಿತ್ತು ಬಿಡಿ. ಆದ್ರೆ ತಿಹಾರ್​ ಜೈಲಿನ ವ್ಯವಸ್ಥೆ ತುಂಬಾನೇ ಶೋಚನೀಯವಾಗಿತ್ತು. ಈ ಜೈಲಿನ ವಿಸ್ತೀರ್ಣ ವಿರೋದು ಒಟ್ಟು 180 ಎಕರೆ. ಇಷ್ಟೊಂದು ದೊಡ್ಡ ಜೈಲಿನಲ್ಲಿ ಹೆಚ್ಚೆಂದರೆ 2 ಸಾವಿರ ಕೈದಿಗಳನ್ನು ಇಲ್ಲಿ ಸೆರೆವಾಸದಲ್ಲಿ ಇಡಬಹುದಿತ್ತು. ಆದ್ರೆ 1993ರ ಸಮಯದಲ್ಲಿ ಈ ಜೈಲಿನೊಳಗೆ ಸೆರೆವಾಸದಲ್ಲಿದ್ದ ಕೈದಿಗಳ ಸಂಖ್ಯೆ ಎಷ್ಟು ಗೊತ್ತಾ? ಬರೋಬ್ಬರಿ 10 ಸಾವಿರ. ಹೌದು, 2 ಸಾವಿರ ಕೈದಿಗಳು ಇರಬಹುದಾರ ಈ ಜೈಲಿನಲ್ಲಿ ಕುರಿ ಹಿಂಡಿನಂತೆ ಬರೋಬ್ಬರಿ 10 ಸಾವಿರ ಕೈದಿಗಳನ್ನು ತುರುಕಲಾಗಿತ್ತು. ಇನ್ನೊಂದು ದುರಂತವೆಂದರೆ ಈ 10 ಸಾವಿರ ಕೈದಿಗಳಲ್ಲಿ ಸುಮಾರು 500 ಮಹಿಳಾ ಕೈದಿಗಳೂ ಆಗಿದ್ದರು. 

ಮಹಿಳಾ ಕೈದಿಗಳೊಂದಿಗೆ ಮಕ್ಕಳೂ ಇದ್ದರು!

ಅಂದು ತಿಹಾರ್​ ಜೈಲಿನ ಪರಿಸ್ಥಿತಿ ಅದೆಷ್ಟರ ಮಟ್ಟಿಗೆ ಹದಗೆಟ್ಟಿತ್ತೆಂದ್ರೆ, ಆರೋಪಿಗಳು ಅಲ್ಲದೇ ಇರೋದು, ಅಪರಾಧಿಗಳು ಅಲ್ಲದೇ ಇರೋದು ಸಹ ತಿಹಾರ್​ ಜೈಲನ್ನು ಮನೆಯನ್ನಾಗಿ ಮಾಡಿಕೊಂಡಿದ್ದರು. ಆಗ್ಲೇ ಹೇಳಿದ ಹಾಗೆ ತಿಹಾರ್​ ಜೈಲಿನಲ್ಲಿ 500ಕ್ಕೂ ಹೆಚ್ಚಿನ ಮಹಿಳಾ ಕೈದಿಗಳು ಇದ್ದರು. ಈ ಮಹಿಳಾ ಕೈದಿಗಳ ಜೊತೆಗೆ ಅವರ ಪುಟ್ಟ   ಮಕ್ಕಳೂ ಅದೇ ಜೈಲಿನಲ್ಲಿ ವಾಸ ಮಾಡುತ್ತಿದ್ದರು. ತಾಯಿಯರೊಂದಿಗೆ ಇರುವ ಈ ಮಕ್ಕಳು ಯಾವುದೇ ಆರೋಪಿ ಅಥವಾ ಅಪರಾಧಿಗಳಾಗಿರಲಿಲ್ಲ ಆದ್ರೂ ಅಲ್ಲಿನ ಸಿಬ್ಬಂದಿ ಲಂಚ ಪಡೆದು ಆ ಮಕ್ಕಳನ್ನು ಜೈಲಿನಲ್ಲಿ ಇಟ್ಟುಕೊಳ್ಳುತ್ತಿದ್ದರು.  ಕುಡಿತ,ಗಾಂಜಾ ಬೇಕೆಂದಿದ್ದೆಲ್ಲ ಸಿಗುತ್ತಿತ್ತು.

ರೋಗಗಳ ತಾಣವಾಗಿತ್ತು ತಿಹಾರ್​ ಜೈಲು

ಆ ಕಾಲದಲ್ಲಿ ತಿಹಾರ್​ ಜೈಲಿನಲ್ಲಿ ಎಲ್ಲವೂ ಬಿಂದಾಸಾಗಿ ನಡೆಯುತ್ತಿತ್ತು. ಗಾಂಜಾ ಗಿರಾಗಿಗಳಿಗೆ ನಿತ್ಯ ಗಾಂಜಾ ಸಿಗುತ್ತಿತ್ತು. ಕುಡುಕ ಕೈದಿಗಳಿಗೆ ಎಣ್ಣೆಗೇನು ಕಮ್ಮಿ ಇರ್ಲಿಲ್ಲ. ಇದಿಷ್ಟೇ ಅಲ್ಲ ಜೈಲಿನೊಳಗೆ ಜೂಜು ನಡೆಯುತ್ತಿತ್ತು. ಒಂದೇ ಮಾತಿನಲ್ಲಿ ಹೇಳಬೇಕೆಂದ್ರೆ 90ರ ದಶಕದಲ್ಲಿ ತಿಹಾರ್​ ಜೈಲಿನಲ್ಲಿ ಅನೈತಿಕ ಚಟುವಟಿಕೆಗಳೆಲ್ಲ ಯಾವುದೇ ಭಯವಿಲ್ಲದೇ ನಡೆಯುತ್ತಿದ್ದವು. ತಿಹಾರ್ ಜೈಲು ಅದೆಷ್ಟು ಕೆಟ್ಟ ಸ್ಥಿತಿಯಲ್ಲಿತ್ತೆಂದರೆ ದುರ್ವಾಸನೆ. ಸ್ವಚ್ಛತೆ ಎಂದ್ರೆ ಎನೂ ಅಂತನೂ ಅಲ್ಲಿನ ಅಧಿಕಾರಿಗಳಿಗೆ ಗೊತ್ತಿರಲಿಲ್ಲ . ಈ ಜೈಲಿಗೆ ಹೋಲಿಸಿದರೆ ದೇಶದ ಪ್ರಮುಖ ಸ್ಲಂಗಳೇ ಎಷ್ಟೋ ಕ್ಲೀನ್​ ಅನ್ನಿಸುವಷ್ಟು ತಿಹಾರ್​ ಜೈಲು ಕೊಳಕಾಗಿತ್ತು. ಹೀಗಾಗಿ ಇಲ್ಲಿ ರೋಗಗಳಿಗೆ, ರೋಗಿಗಳಿಗೆ ಯಾವುದೇ ಕಮ್ಮಿ ಇರಲಿಲ್ಲ. ಇಡೀ ದಿನ ಗಾಂಜಾ ಮತ್ತು ಕುಡಿತದ ಅಮಲಿನಲ್ಲೇ ತೇಲಾಡುವಂತ ವ್ಯವಸ್ಥೆ ಇದ್ದ ತಿಹಾರ್​ ಜೈಲಿಗೆ ಅಕ್ಷರಶಃ ದುರ್ಗೆಯಾಗಿ ಕಿರಣ್​ ಭೇಡಿ ಎಂಟ್ರಿ ಕೊಟ್ಟಿದ್ದರು. 

ಭ್ರಷ್ಟ ಅಧಿಕಾರಿಗಳ ಬೇಟೆಗೆ ನಿಂತ ಕಿರಣ್​ ಬೇಡಿ

1993ರಲ್ಲಿ ಐಜಿಪಿಯಾಗಿ ಮೊದಲ ಬಾರಿ ಜೈಲಿಗೆ ಭೇಟಿ ನೀಡಿದ್ದ ಕಿರಣ್​ ಬೇಡಿಗೆ ಅಲ್ಲಿನ ದುರ್ವೆವಸ್ಥೆ ಕಂಡು ಆಘಾತವಾಗಿತ್ತು.  ಜೈಲಿಗೆ ಎಂಟ್ರಿ ಕೊಡುತ್ತಿದ್ದಂತೆ ಕಿರಣ್​ ಬೇಡಿ ಅಲ್ಲಿನ ಅವ್ಯವಸ್ಥೆಯ ಮೂಲ ಬೇರನ್ನೇ ಗುರಿಯಾಗಿಸಿಕೊಂಡರು.   ತಿಹಾರ್​ ಜೈಲಿನ ಸುಧಾರಣೆಯಾಗಬೇಕೆಂದ್ರೆ ಅಲ್ಲಿನ ಅಧಿಕಾರಿಗಳ ಸುಧಾರಣೆ ಮೊದಲು ಆಗಬೇಕೆಂಬ ತೀರ್ಮಾನಕ್ಕೆ ಬಂದ ಕಿರಣ್​ ಬೇಡಿ ತಳಮಟ್ಟದಿಂದ ಮೇಲ್ವರ್ಗದ ಎಲ್ಲ ಅಧಿಕಾರಿಗಳ ಬಗ್ಗೆ ಕಂಪ್ಲೀಟ್​ ಮಾಹಿತಿ  ಪಡೆದು  ಭ್ರಷ್ಟ ಅಧಿಕಾರಿಗಳ ತಲೆದಂಡವಾಗುತ್ತೆ. ಇನ್ನು ಕೆಲ ಅಧಿಕಾರಿಗಳ ವರ್ಗಾವಣೆಯಾಗುತ್ತೆ. ಹಾಗೆನೇ ಕೆಲ ಅಧಿಕಾರಿಗಳಿಗೆ ಖಡಕ್​ ಎಚ್ಚರಿಕೆಯನ್ನು ಕೊಡಲಾಗುತ್ತೆ.

ಕಿರಣ್​ ಬೇಡಿ ಇದೆಲ್ಲವನ್ನು ಯಾವುದೇ ಭಯವಿಲ್ಲದೆ, ಯಾರಿಗೂ ಜಗ್ಗದೇ ಮಾಡ್ತಾರೆ. ತಿಹಾರ್​ ಜೈಲಿನ ಐಜಿಪಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ  ಜೈಲಿನ ಸಿಬ್ಬಂದಿಯ ರಿಪೇರಿ ಮಾಡುತ್ತಾರೆ. ಅಲ್ಲಿಗೆ ತಿಹಾರ್​ ಜೈಲು ಸಢನ್ನಾಗಿ ಅರ್ಧದಷ್ಟು ಸುಧಾರಣೆಯಾಗುತ್ತೆ.ಕಿರಣ್​ ಬೇಡಿ ಅಧಿಕಾರ ವಹಿಸಿಕೊಳ್ಳುವ ಮೊದಲು ತಿಹಾರ್​ ಜೈಲಿನಲ್ಲಿದ್ದ ಕೈದಿಗಳನ್ನು ಅಲ್ಲಿನ ಅಧಿಕಾರಿಗಳು ತುಂಬಾ ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದರು. ಮನ ಬಂದಂತೆ ದಂಡಿಸುತ್ತಿದ್ದರು. ಮೈಕೈ ಗಾಯಗಳಾಗುವಂತೆ ಹೊಡೆಯುತ್ತಿದ್ದರು.  ಕೈದಿಗಳನ್ನು ಹಿಂಸಾತ್ಮಕವಾಗಿ ದುಡಿಸಿಕೊಳ್ಳುತ್ತಿದ್ದರು. ಒಟ್ಟಿನಲ್ಲಿ ಅಲ್ಲಿನ ಅಧಿಕಾರಿಗಳಿಗೆ ಕೈದಿಗಳೆಂದ್ರೆ ದಂಡಿಸುವ ಪ್ರಾಣಿಗಳು ಎಂಬ ವಾತಾವರಣ ಅಲ್ಲಿತ್ತು.

ಭ್ರಷ್ಟ ಅಧಿಕಾರಿಗಳನ್ನು ಹೊರಗೆ ಹಾಕಿದ ನಂತರ ದಕ್ಷ ಅಧಿಕಾರಿ ಕಿರಣ್​ ಬೇಡಿ ಅದೆಲ್ಲದಕ್ಕೂ ಬ್ರೇಕ್​ ಹಾಕಿದರು. ಆಗ ಅಧಿಕಾರಿಗಳಿಗೆ ಅಧಿಕಾರಿಗಳಿಂದ ಆಗುತ್ತಿದ್ದ ಹಿಂಸೆಗೆ ಬ್ರೇಕ್​ ಬಿತ್ತು. ಮೈ ಮುರಿಯುವಂತೆ ದುಡಿಯುತ್ತಿದ್ದ ಕೈದಿಗಳಿಗೆ ಮುಕ್ತಿ ಸಿಕ್ಕಿತು. ಇದರಿಂದ ಕೈದಿಗಳು ನೆಮ್ಮದಿಯ ಉಸಿರಾಡುವಂತಾಯಿತು.  ಲಂಚಕೋರ ಅಧಿಕಾರಿಗಳು ಕಳ್ಳರಂತೆ ಅಲ್ಲೇ ಉಳಿದುಕೊಂಡಿದ್ದರು. ಅದನ್ನೂ ಪತ್ತೆ ಮಾಡಿ  ಅಲ್ಲಿನ ಸಿಬ್ಬಂದಿ ಮತ್ತು ಕೈದಿಗಳಿಗೆ ಕಿರಣ್​ ಬೇಡಿ ಅಕ್ಷರಶಃ ದುರ್ಗೆಯಂತೆ ಕಂಡಿದ್ದರು. ಕಿರಣ್​ ಬೇಡಿ ದುರ್ಗೆಯ ಅವತಾರಕ್ಕೆ ಎಲ್ಲರೂ ತತ್ತರಿಸಿದ್ದರು.

ಇಷ್ಟೆಲ್ಲ ಆದರೂ ದಕ್ಷ ಅಧಿಕಾರಿ ಕಿರಣ್​ ಬೇಡಿಗೆ ಇನ್ನೊಂದು ದೊಡ್ಡ ಸವಾಲಿತ್ತು. ಅದೇನೆಂದ್ರೆ ತಿಹಾರ್ ಜೈಲಿನಲ್ಲಿ 18 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಬಾಲಾಪರಾಧಿಗಳು ಒಂದು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕಾನೂನು ಪ್ರಕಾರ ಅವರನ್ನು ರಿಮಾಂಡ್ ಹೋಮ್‌ನಲ್ಲಿ ಪ್ರತ್ಯೇಕವಾಗಿ ಇಡಬೇಕಿತ್ತು. ಆದ್ರೆ ತಿಹಾರ್ ಜೈಲಿನಲ್ಲಿ ಅದಕ್ಕೆ ವ್ಯವಸ್ಥೆಯೇ ಇರಲಿಲ್ಲ. ಹೀಗಾಗಿ ಜೈದಿಗಳ ಜೊತೆಗೆ ಬಾಲಾಪರಾಧಿಗಳೂ ಜೊತೆಗೆನೇ ಇದ್ದರು. ಹೀಗಾಗಿ ಕಿರಣ್​​ ಬೇಡಿ ಬಾಲಾಪರಾಧಿಗಳಿಗೆ ಉತ್ತಮ ವ್ಯವಸ್ಥೆ ಮಾಡಿಕೊಡಲು ಹೋರಾಟವನ್ನೇ ಮಾಡಬೇಕಾಯ್ತು. ಇದರ ನಂತರ ಜೈಲಿನ ನಿಜವಾದ ಶುದ್ಧಿಕರಣಕ್ಕೆ ಕಿರಣ್​ ಬೇಡಿ ನಿಂತರು.

ಈ ಜೈಲಿನಲ್ಲಿ ಗಾಂಜಾ ಹೊಗೆಯಿಂದ ಬೆಳಕಾಗುತ್ತಿತ್ತು. ಎಣ್ಣೆ ಅಮಲಿನಲ್ಲಿ ರಾತ್ರಿಯಾಗುತ್ತಿತ್ತು. ಒಂದೇ ಹೊಡೆತಕ್ಕೆ ಅದೆಲ್ಲ ನಿಂತು ಹೋಯಿತು. ಅಕ್ರಮವಾಗಿ ಜೈಲಿನೊಳಗೆ ಬರುತ್ತಿದ್ದ ಗಾಂಜಾ, ಸಿಗರೇಟ್​​, ಎಣ್ಣೆಗಳಿಗೆ ಬ್ರೇಕ್​​ ಬಿತ್ತು.  ಗಾಂಜಾ, ಎಣ್ಣೆ, ಸಿಗರೇಟ್​​ ಸಿಗದೇ ಇದ್ದಾಗ ಕೈದಿಗಳು ಸಿಟ್ಟಿಗೇಳ್ತಾರೆ.  ಹೋರಾಟಕ್ಕೆ ನಿಂತರ ಕೈದಿಗಳನ್ನು ಆರಂಭದಲ್ಲಿ ದರ್ಪದಲ್ಲೇ ಸಮಾಧಾನ ಮಾಡಿದ ಕಿರಣ್​ ಬೇಡಿ ಎಲ್ಲಿರಿಗೂ ಮೊದಲ ಬಾರಿಗೆ ಸಮಗ್ರ ವೈದ್ಯಕೀಯ ಪರೀಕ್ಷೆ ಮಾಡಿಸುತ್ತಾರೆ. ನಂತರ ವಿವಿಧ ಸರಕಾರೇತರ ಸಂಸ್ಥೆಗಳ ಸಹಾಯ ಪಡೆದು ಅತ್ಯಾಧುನಿಕ ಕೌನ್ಸೆಲಿಂಗ್ ಕೇಂದ್ರಗಳಿಂದ ಮೊದಲ ಬಾರಿಗೆ ಜೈಲಿನೊಳಗಿದ್ದ ಎಲ್ಲ ಕೈದಿಗಳಿಗೆ ಕೌನ್ಸಲಿಂಗ್​ ಕೊಡಿಸಲಾಗುತ್ತೆ.

ಬಳಿಕ ತಜ್ಞರಿಂದ ಯೋಗ, ಪ್ರಾಣಾಯಾಮ, ಭಗವದ್ಗೀತೆ ಮತ್ತು ಧಾರ್ಮಿಕ ಪಠನದ ತರಗತಿಗಳು ಆರಂಭಿಸಲಾಗುತ್ತದೆ. ಈ ಮೂಲಕ ಕೈದಿಗಳ ಮಾನಸಿಕ ದೃಢತೆ ಹೆಚ್ಚು ಮಾಡಲು ಕಿರಣ್​ ಬೇಡಿ ಮುಂದಾಗ್ತಾರೆ. ನಂತರ ಕೈದಿಗಳಿಗೆ ನಿಧಾನಕ್ಕೆ ಸ್ವಚ್ಛತಾ ಪ್ರಜ್ಞೆಯ ಬಗ್ಗೆ ಶಿಕ್ಷಣ ಕೊಡಲಾಯಿತು. ಆಗ ಎಲ್ಲೆಂದರಲ್ಲಿ ಗುಟ್ಕಾ ಕಲೆಗಳಿಂದಲೇ ತುಂಬಿಕೊಂಡಿದ್ದು ಜೈಲು ನಿಧಾನಕ್ಕೆ ಸ್ವಚ್ಛವಾಗತೊಡಗಿತು. ಅದರ ನಂತರ ವಿಚಾರಣಾಧೀನ ಕೈದಿಗಳಿಗೆ ಕಾನೂನು ಮಾಹಿತಿ ಶಿಬಿರಗಳು ನಡೆದವು. ಅವರ ಮನಸ್ಸು ಪರಿವರ್ತನೆಗೆ ಕೌನ್ಸೆಲಿಂಗ್ ಕೇಂದ್ರಗಳು ಶ್ರಮಿಸಿದವು!

ಅದರ ನಂತರ ವಿಚಾರಣಾಧೀನ ಕೈದಿಗಳಿಗೆ ಕಾನೂನು ಮಾಹಿತಿ ಶಿಬಿರಗಳು ನಡೆದವು. ಅವರ ಮನಸ್ಸು ಪರಿವರ್ತನೆಗೆ ಕೌನ್ಸೆಲಿಂಗ್ ಕೇಂದ್ರಗಳು ಶ್ರಮಿಸಿದವು! ಜೈಲಿನ ಒಳಗೆ ಕೈಮಗ್ಗದ ಒಂದು ಘಟಕವು ಉದ್ಘಾಟನೆ ಆಯಿತು. ಮುಂದೆ ಸಾಬೂನು ತಯಾರಿಕೆ, ಖಾದಿ ಬಟ್ಟೆ ತಯಾರಿ, ಬೇಕರಿ ಉತ್ಪನ್ನಗಳ ತಯಾರಿ ಘಟಕಗಳು ಆರಂಭ ಆದವು. ಅವರ ಉತ್ಪನ್ನಗಳಿಗೆ ಮಾರ್ಕೆಟ್ ಬೇಕಲ್ಲಾ? ಅದಕ್ಕಾಗಿ ಕಿರಣ್ ಬೇಡಿ ಅವರೇ ನಗರದಲ್ಲಿ ಹಲವು ಮಾರಾಟ ಕೇಂದ್ರಗಳನ್ನು ತೆರೆದರು. ಅದಕ್ಕೆ ‘ತಿಹಾರ್ ಉತ್ಪನ್ನಗಳ ಮಾರಾಟ ಮಳಿಗೆ’ಎಂಬ ಹೆಸರಿಟ್ಟರು. ಗುಣಮಟ್ಟವು ಚೆನ್ನಾಗಿ ಇದ್ದ ಕಾರಣ ವ್ಯಾಪಾರ ಭರ್ಜರಿ ಆಯಿತು. ಅದರ ಲಾಭವನ್ನು ನೇರವಾಗಿ ಕೈದಿಗಳ ಖಾತೆಗೆ ಜಮೆ ಮಾಡುವ ಕೆಲಸ ಆಯ್ತು.

ಈ ಎಲ್ಲ ಪ್ರಯತ್ನಗಳಿಂದ ಜೈಲಿನಲ್ಲಿ ದೊಡ್ಡ ಬದಲಾವಣೆಯೇ ಆಯಿತು. ಯೋಗ ಶಿಬಿರಗಳು ಸೆರೆಮನೆಯಲ್ಲಿ ಭಾರೀ ಬದಲಾವಣೆ ತಂದವು. ಮೊದ ಮೊದಲು ಪ್ರತಿಭಟನೆ ಮಾಡಿದ ಕೈದಿಗಳು ನಿಧಾನವಾಗಿ ಕಿರಣ್ ಮೇಡಂ ಅವರ ಸಹಜ ಪ್ರೀತಿಗೆ ಮನಸೋತರು. ಮಧ್ಯಾಹ್ನ ಊಟದ ಸಮಯದಲ್ಲಿ ಕಿರಣ್​ ಬೇಡಿ ಕೈದಿಗಳ ಜೊತೆಗೆನೇ ಕುಳಿತು ಊಟ ಮಾಡುತ್ತಿದ್ದರು. ಕೈದಿಗಳೆಂದು ತಯಾರಿಸಿದ ಊಟವನ್ನೇ ಅವರು ಮಾಡುತ್ತಿದ್ದರು. ಕೈದಿಗಳು ಅವರನ್ನು ಪ್ರೀತಿಯಿಂದ ಕಿರಣ್ ದೀದಿ ಎಂದು ಕರೆಯಲು ಆರಂಭ ಮಾಡಿದರು. ಅವರ ಉದಾತ್ತ ಆಶಯಗಳಿಗೆ ಬೆಂಬಲವಾಗಿ ನಿಂತರು. ರಾಜ್ಯ ಮತ್ತು ದೇಶದ ಎಲ್ಲ ಜೈಲುಗಳಿಗೆ ಕಿರಣ್​ ದೀದೀ ಅಂತ ಅಧಿಕಾರಿಗಳು ಬೇಕು. ಅಂದಾಗ ಮಾತ್ರ ದೇಶದಲ್ಲಿ ಕ್ರೈಂ ಸಂಖ್ಯೆ ಕಡಿಮೆಯಾಗೋದಕ್ಕೆ ಸಾಧ್ಯ.

click me!