ಗಣೇಶ ಚತುರ್ಥಿ ಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು. ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು 100ಕ್ಕೂ ಅಧಿಕ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ಭಕ್ತರಿಗೆ ವಿತರಿಸಿದರು.

23
ಮಣ್ಣಿನ ಗಣಪ, ಪರಿಸರ ರಕ್ಷಣೆ
ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ತಿಳಿಸಿದ ಸುಬುಧೇಂದ್ರ ತೀರ್ಥರು ಶ್ರೀಗಳು, ಈ ಹಬ್ಬವನ್ನು ಸಂಪ್ರದಾಯದ ಜೊತೆಗೆ ಪರಿಸರ ಸ್ನೇಹಿಯಾಗಿ ಆಚರಿಸೋಣ. ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಆಚರಿಸಿ. ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪ್ರಕೃತಿಯನ್ನು ಕಾಪಾಡುವ ಜವಾಬ್ದಾರಿಯನ್ನು ನಾವೆಲ್ಲರೂ ತೆಗೆದುಕೊಳ್ಳೋಣ ಕರೆ ನೀಡಿದರು.
33
ಮಂತ್ರಾಲಯ ಶ್ರೀಗಳು ಮಾತು
ಈ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗವಹಿಸಿ, ಪರಿಸರ ಸ್ನೇಹಿ ಗಣಪತಿಯ ಮೂರ್ತಿಗಳನ್ನು ಸ್ವೀಕರಿಸಿದರು. ಮಂತ್ರಾಲಯ ಮಠದ ಈ ಪ್ರಯತ್ನವು ಸ್ಥಳೀಯರಲ್ಲಿ ಪರಿಸರ ಜಾಗೃತಿಯನ್ನು ಮೂಡಿಸಿದೆ. ಮಣ್ಣಿನ ಮೂರ್ತಿಗಳ ಬಳಕೆಯಿಂದ ಪ್ಲಾಸ್ಟಿಕ್ ಮತ್ತು ಹಾನಿಕಾರಕ ವಸ್ತುಗಳ ಬಳಕೆ ಕಡಿಮೆಯಾಗಲಿದೆ. ಈ ಕಾರ್ಯಕ್ರಮವು ರಾಯಚೂರಿನ ಗಣೇಶ ಚತುರ್ಥಿ ಆಚರಣೆಗೆ ಹೊಸ ಆಯಾಮವನ್ನು ನೀಡಿದ್ದು, ಪರಿಸರ ಸಂರಕ್ಷಣೆಯ ಜೊತೆಗೆ ಆಧ್ಯಾತ್ಮಿಕ ಮಹತ್ವವನ್ನು ತಿಳಿಸಿದೆ