ಕಲಬುರಗಿ: ಕಲಬುರಗಿಯಲ್ಲಿ ಬೀಗ ಹಾಕಿದ್ದ ಮನೆಗಳನ್ನೇ ನೋಡಿ ಕಳ್ಳತನ ಮಾಡುವ ಕಳ್ಳಿಯರ ಗ್ಯಾಂಗೊಂದು ಕಾರ್ಯಾಚರಿಸುತ್ತಿದ್ದು, ಈ ಕಳ್ಳಿಯರ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
25
ಕಾಂತಾ ಕಾಲೋನಿಯಲ್ಲಿ ಬೀಗ ಹಾಕಿದ್ದ ಮನೆಗೆ ಕನ್ನ
ಕಲಬುರಗಿ ನಗರದ ಕಾಂತಾ ಕಾಲೋನಿಯಲ್ಲಿ ಬೀಗ ಹಾಕಿದ್ದ ಮನೆಯೊಂದರಲ್ಲಿ ಕಳ್ಳಿಯರು ಕೈ ಚಳಕ ತೋರಿದ್ದು ಅವರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
35
ಅಲಮಾರಿಯ ಬೀಗ ಮುರಿದು ಕಳ್ಳತನ
ಕಾಂತಾ ಕಾಲೋನಿಯ ಶಿಕ್ಷಕಿ ಶಶಿಕಲಾ ನರೋಣಕರ್ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಅಲಮಾರಿಯ(ಕಪಾಟು) ಬೀಗ ಮುರಿದು ಚಿನ್ನ, ಬೆಳ್ಳಿ ಆಭರಣ, ಚೆಕ್, ಮೊಬೈಲ್ ಹಾಗು ನಗದು ಹಣ ಕಳವು ಮಾಡಿದ್ದಾರೆ.
ಕಳ್ಳರು 8 ಗ್ರಾಂ. ಚಿನ್ನಾಭರಣ, 34 ತೋಲಿ ಬೆಳ್ಳಿ ಆಭರಣ, 2 ಲಕ್ಷದ 20 ಸಾವಿರ ನಗದು ಹಣ ಚೆಕ್ ಬುಕ್ ಹಾಗೂ 1 ಮೊಬೈಲ್ ಫೋನ್ ಕಳವು ಮಾಡಿದ್ದಾರೆ. ಕಳ್ಳರು ಒಟ್ಟು 2 ಲಕ್ಷದ 84 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿ ಎಸ್ಕೇಪ್ ಆಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಕ್ರಮ ನಿಮಿತ್ತ ಶಿಕ್ಷಕಿ ಶಶಿಕಲಾ ನರೋಣಕರ್ ಮನೆಗೆ ಬೀಗ ಹಾಕಿ ಬೆಂಗಳೂರಿಗೆ ಹೋಗಿದ್ದರು. ಬೆಂಗಳೂರಿನಿಂದ ವಾಪಸ್ ಬಂದು ನೋಡಿದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಈಗ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಕಳ್ಳಿಯರ ಸೆರೆಗೆ ಬಲೆ ಬೀಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ