ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಹೋರಾಟದ ಪಾದಯಾತ್ರೆ ಆರಂಭವಾಗಿದೆ.
undefined
ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ಕನಕದಾಸರ ಮೂರ್ತಿಗೆ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಿದರು.
undefined
ಯಾತ್ರೆಯಲ್ಲಿ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಸಚಿವ ಕೆ.ಎಸ್. ಈಶ್ವರಪ್ಪ, ಕೆ.ಇ. ಕಾಂತೇಶ್, ಎಂ. ಶ್ರೀಕಾಂತ್ ಸೇರಿದಂತೆ ಸಾವಿರಾರು ಜನ ಭಾಗಿಯಾಗಿದ್ದಾರೆ.
undefined
ಯುವಕರೊಂದಿಗೆ ಹೆಜ್ಜೆ ಹಾಕಿದ ಕುರುಬ ಎಸ್‌ಟಿ ಹೋರಾಟ ಸಮಿತಿಯ ಅಧ್ಯಕ್ಷ, ಮಾಜಿ ಸಂಸದ ಕೆ.ಎಸ್.ವಿರುಪಾಕ್ಷಪ್ಪ
undefined
ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಕಾಗಿನೆಲೆಯಿಂದ ಆರಂಭಿಸಿ ಬೆಂಗಳೂರಿನವರೆಗೆ ಜ. 15ರಿಂದ ಫೆ.7ರವರೆಗೆ ಬರೋಬ್ಬರಿ 340 ಕಿ.ಮೀ. ಈ ಪಾದಯಾತ್ರೆ ನಡೆಯಲಿದೆ.
undefined
ರಸ್ತೆಯುದ್ದಕ್ಕೂ ಭಾರತದ ತ್ರಿವರ್ಣ, ಕರ್ನಾಟಕದ ಧ್ವಜ ಹಿಡಿದು ಬೆಂಗಳೂರಿನತ್ತಹೆಜ್ಜೆ ಹಾಕಿದಕುರುಬರ ಪಡೆ
undefined
ಪ್ರತಿದಿನ ಬೆಳಿಗ್ಗೆ 5.30ರಿಂದ ಹೊರಡುವ ಪಾದಯಾತ್ರೆಯು 10 ಕಿ.ಮೀ. ಸಂಚರಿಸಿ ಮುಂದಿನ ವಾಸ್ತವ್ಯ ಕೇಂದ್ರ ಸೇರಲಿದೆ. ಅಲ್ಲಿ ಗುರುಗಳ ಪೂಜೆ, ಪುನಸ್ಕಾರ, ಪ್ರಸಾದ ಆದ ಮೇಲೆ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಮತ್ತೆ 10 ಕಿ.ಮೀ. ಪಾದಯಾತ್ರೆ ಸಾಗಿ ರಾತ್ರಿ ವಾಸ್ತವ್ಯ ಮಾಡಲಿದ್ದು, ಫೆ.7ರಂದು ಕುರುಬರ ದಂಡು ರಾಜಧಾನಿ ಬೆಂಗಳೂರಿಗೆ ತಲುಪಲಿದೆ.
undefined