ಪುಣೆಯಿಂದ ಇಂದು (ಮಂಗಳವಾರ) 11:30ಕ್ಕೆ ಬೆಂಗಳೂರಿಗೆ ಬಂದು ತಲುಪಿದೆ.
ಬೆಂಗಳೂರಿನ ಆನಂದ್‍ರಾವ್ ವೃತ್ತದ ಬಳಿಯಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಟ್ಟಡದಲ್ಲಿ ಈ ಲಸಿಕೆಗಳನ್ನು ದಾಸ್ತಾನು ಮಾಡಲಾಗಿದೆ.
ಮೊದಲ ಕಂತಿನ 7.95 ಲಕ್ಷ ಲಸಿಕೆ ಬಂದಿದೆ,
ಆನಂದ್ ರಾವ್ ವೃತ್ತದ ಬಳಿಯಿರುವ ಸಂಗ್ರಹ ಕೇಂದ್ರಕ್ಕೆ ಭೇಟಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿದರು.
ಲಸಿಕೆಯನ್ನು ಸುರಕ್ಷಿತವಾಗಿ ಸಂಗ್ರಹಿಸಲಾಗಿದ್ದು ಜಿಲ್ಲಾ ಕೇಂದ್ರಗಳಿಗೆ ರವಾನಿಸಲಾಗುವುದು ಎಂದು ಸುಧಾಕರ್ ತಿಳಿಸಿದರು.
ಎರಡನೇ ಕಂತು ಬೆಳಗಾವಿಗೆ ಆಗಮಿಸಲಿದೆ ಎಂದರು.
ಒಂದು ವಯಲ್‍ನಲ್ಲಿ 5 ಎಂಎಲ್ ಇರಲಿದ್ದು, 0.5 ಎಂಎಲ್‍ನಂತೆ 10 ಜನರಿಗೆ ಲಸಿಕೆ ನೀಡಲು ಒಂದು ವಯಲ್‍ನ್ನು ಬಳಸಲಾಗುತ್ತದೆ ಎಂದು ಮಾಹಿತಿ ನೀಡಿದರು.
Suvarna News