ಕೊರೋನಾ ಸೋಂಕಿತರನ್ನು ಬದುಕಿಸಲು ತಮ್ಮ ಜೀವದ ಹಂಗು ತೊರೆದು ಹಗಲಿರುಳು ದುಡಿಯುತ್ತಿದ್ದಾರೆ ನಮ್ಮ ವೈದ್ಯರು, ದಾದಿಯರು ಹಾಗೂ ಆರೋಗ್ಯ ಸಿಬ್ಬಂದಿ ಮನೆಗಳಿಗೆ ಹೋಗುವಂತಿಲ್ಲ, ಕುಟುಂಬದೊಂದಿಗೆ ಬೆರೆಯುವಂತಿಲ್ಲ, ಮಕ್ಕಳನ್ನೂ ಕಾಣುವಂತಿಲ್ಲ. ತಮ್ಮ ಮನೆ–ಕುಟುಂಬ ಬಿಟ್ಟು ಕೊರೋನಾ ವಿರುದ್ಧ ಹೋರಾಟದಲ್ಲಿ ತೊಡಗಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸರು ಕೂಡ ಕಾಲಿಗೆ ಚಕ್ರಕಟ್ಟಿಕೊಂಡು ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತಿದ್ದಾರೆ. ಇದೀಗ ಇವರಗಳ ಸಹಾಯಕ್ಕೆ ಮೆಕಾನಿಕ್ಸ್ ನಿಂತಿದ್ದಾರೆ.