ಸರಳ-ಸಜ್ಜನ ಎಂದೇ ಹೆಸರಾದವರು ಸಚಿವ ಸುರೇಶ್ ಕುಮಾರ್. ಹಲವು ಕಾರ್ಯಗಳ ಮೂಲಕ ಅವರು ತಾವೆಷ್ಟು ಸರಳ ಜೀವಿ ಎಂಬುದನ್ನು ಪ್ರೂವ್ ಮಾಡಿದ್ದಾರೆ. ಇದೀಗ ತಮ್ಮ ಮನೆಯ ಮುಂದಿನ ರಸ್ತೆಯನ್ನು ಪತ್ನಿ ಸಾವಿತ್ರಿಯೊಂದಿಗೆ ಗುಡಿಸಿ, ಸ್ವಚ್ಛತೆಯೊಂದಿಗೆ ವ್ಯಾಯಾಮವೂ ಆಯಿತು ಎಂದು ಹೇಳಿದ್ದಾರೆ. ಅಲ್ಲದೇ ರಸ್ತೆಯ ಪೌರ ಕಾರ್ಮಿಕೆ ಲಿಂಗಮ್ಮ ಕಾಲಿಗೆ ಪೆಟ್ಟು ಮಾಡಿಕೊಂಡದ್ದನ್ನು ಕೇಳಿ ಈ ಕೆಲಸಕ್ಕೆ ಇಳಿದಿದ್ದು, ಅಷ್ಟರ ಮಟ್ಟಿಗೆ ಆಕೆಗೆ ನೆರವಾಗಿದ್ದೇನೆ ಎಂಬ ತೃಪ್ತಿಯನ್ನೂ ವ್ಯಕ್ತಪಡಿಸಿದ್ದಾರೆ.