ಕನ್ನಡ ರಾಜ್ಯೋತ್ಸವ 2025: ನಿಮ್ಮ ಆಪ್ತರಿಗೆ ಕನ್ನಡಿಗರ ಹಬ್ಬದ ಶುಭಾಶಯ ತಿಳಿಸಿ

Published : Nov 01, 2025, 06:00 AM IST

ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! ಕನ್ನಡದ ಹಿರಿಮೆ ಸಾರುವ ಸ್ಪೂರ್ತಿದಾಯಕ ಕವನಗಳು, ಸಂದೇಶಗಳು ಮತ್ತು ಉಲ್ಲೇಖಗಳ ಅತ್ಯುತ್ತಮ ಸಂಗ್ರಹವನ್ನು ಇಲ್ಲಿವೆ ನೋಡಿ. ನಿಮ್ಮ ಆಪ್ತರಿಗೂ ಈ ಕಾರ್ಡ್ ಕಳಿಸಿ, ಕನ್ನಡ ಹಬ್ಬದ ಶುಭಾಶಯ ತಿಳಿಸಿ.

PREV
110
ನಾವಾಡುವ ನುಡಿಯೇ ಕನ್ನಡ ನುಡಿ

ನಾವಾಡುವ ನುಡಿಯೇ ಕನ್ನಡ ನುಡಿ, 
ಚಿನ್ನದ ನುಡಿ, ಸಿರಿಗನ್ನಡ ನುಡಿ 
ನಾವಿರುವ ತಾಣವೇ ಗಂಧದ ಗುಡಿ, 
ಅಂದದ ಗುಡಿ, ಚೆಂದದ ಗುಡಿ

210
ಧನ್ಯವೀ ಕನ್ನಡ

ಧ್ಯಾನಕ್ಕೆ ಭೂಮಿ ಇದು, ಪ್ರೇಮಕ್ಕೆ ಸ್ವರ್ಗ ಇದು, 
ಸ್ನೇಹಕ್ಕೆ ಶಾಲೆ ಇದು ಜ್ಞಾನಕ್ಕೆ ಪೀಠ ಇದು 
ಕಾಯಕ್ಕೆ ಕಲ್ಪ ಇದು ಶಿಲ್ಪಕ್ಕೆ ಕಲ್ಪ ಇದು 
ನಾಟ್ಯಕ್ಕೆ ನಾಡಿ ಇದು ನಾದಾಂತರಂಗವಿದು 
ಕುವೆಂಪು ಬೇಂದ್ರೆ ಇಂದ ಕಾರಂತ ಮಾಸ್ತಿ ಇದು ಧನ್ಯವೀ ಕನ್ನಡ..

410
ಕನ್ನಡ ಉಸಿರೆಂದರೆ ಪಂಚಪ್ರಾಣ

ಕನ್ನಡವೆಂದರೆ ಜನಜಂಗುಳಿಯಲ್ಲ
ಜೀವನ ಶೈಲಿ ವಿಧಾನ ವಾಯುವೆಂದರೆ ಬರಿ ಹವೆಯೇ ಅಲ್ಲ
ಉಸಿರೆಂದರೆ ಪಂಚಪ್ರಾಣ
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

510
ಬಾರಿಸು ಕನ್ನಡ ಡಿಂಡಿಮವ

ಬಾರಿಸು ಕನ್ನಡ ಡಿಂಡಿಮವ ಸತ್ತಂತಿಹರನು ಬಡಿದೆಚ್ಚರಿಸು

ಕಚ್ಚಾಡುವರನು ಕೂಡಿಸಿ ಒಲಿಸು

ಹೊಟ್ಟೆಯ ಕಿಚ್ಚಿಗೆ ಕಣ್ಣೀ‌ರ್ ಸುರಿಸು

ಒಟ್ಟಿಗೆ ಬಾಳುವ ತೆರದಲಿ ಹರಸು

ಚೈತ ಶಿವೇತರ ಕೃತಿ ಕೃತಿಯಲ್ಲಿ

ಮೂಡಲಿ ಮಂಗಳ ಮತಿ ಮತಿಯಲ್ಲಿ

ಕವಿ ಋಷಿ ಸಂತರ ಆದರ್ಶದಲಿ ಸರ್ವೋದಯವಾಗಲಿ ಸರ್ವರಲಿ

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

610
ಎಂದೆಂದಿಗೂ ನೀ ಕನ್ನಡವಾಗಿರು

ಕನ್ನಡವೇ ಸತ್ಯ, ಕನ್ನಡವೇ ನಿತ್ಯ 

ಎಲ್ಲಾದರರೂ ಇರು ಎಂತಾದರೂ ಇರು 

ಎಂದೆಂದಿಗೂ ನೀ ಕನ್ನಡವಾಗಿರು

710
ಕನ್ನಡವಿಲ್ಲದೇ ಬೇರೇನೂ ಇಲ್ಲ

ಮನದೊಳಗೆ ಕನ್ನಡ 
ಮನಸೊಳಗೂ ಕನ್ನಡ 
ಕನ್ನಡವೇ ಎಲ್ಲಾ ಕನ್ನಡವಿಲ್ಲದೇ 
ಬೇರೇನೂ ಇಲ್ಲ 
ನಮ್ಮ ತಾಯಿ ಭಾಷೆ ಕನ್ನಡ

810
ಮಾತೃಭಾಷೆ ನಮ್ಮ ಒಲುಮೆ

ಜಗತ್ತಿನ ಯಾವ ಮೂಲೆಗೇ ಹೋದರೂ 
ಮಾತೃಭಾಷೆ ನಮ್ಮ ಒಲುಮೆ
ನಮ್ಮ ಪೊರೆವ ನಾಡು ನುಡಿಯ ಹಬ್ಬವಿಂದು 
ಕನ್ನಡ ರಾಜ್ಯೋತ್ಸವದ ಶುಭಾಶಯಗಳು

910
ಕನ್ನಡ ಕಲಿಸೋಣ, ಕನ್ನಡ ಬೆಳೆಸೋಣ

ಕನ್ನಡ ಕಲಿಸೋಣ, ಕನ್ನಡ ಬೆಳೆಸೋಣ
ಅಭಿವೃದ್ಧಿಗೆ ಶ್ರಮಿಸೋಣ
ತಾಯಿ ಭುವನೇಶ್ವರಿಗೆ ನಮಿಸೋಣ

1010
ಚೆಲುವ ಕನ್ನಡದ ಬಾವುಟ

ಗಗನ ಗಾಳಿಯಲಿ ಜಿಗಿದು ಜೀವಿಸಲಿ 
ಚೆಲುವ ಕನ್ನಡದ ಬಾವುಟ 
ತಿರುಗೋ ಭೂಮಿಯಲಿ ಮಿನುಗಿ ತೋರಿಸಲಿ 
ಚೆಲುವ ಕನ್ನಡದ ಭೂಪಟ

ಈ ಪುಣ್ಯನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

Read more Photos on
click me!

Recommended Stories