ಚಾಮರಾಜನಗರ ಜಿಲ್ಲೆಯ ಗಡಿಯಲ್ಲಿರುವ ಗುಮಟಾಪುರ ಗ್ರಾಮದಲ್ಲಿ ಪ್ರತಿ ವರ್ಷ ತಪ್ಪದೆ ಗೊರೆ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ. ಸಗಣಿ ರಾಶಿ ಹಾಕಿ ಅದರಲ್ಲಿ ಹೊರಳಾಡುವ ಗ್ರಾಮಸ್ಥರು ಸಗಣಿಯಲ್ಲೇ ಹೊಡೆದಾಡುವುದು ಈ ಹಬ್ಬದ ವಿಶೇಷ.
ಚಾಮರಾಜನಗರ (ಅ.23): ಚಾಮರಾಜನಗರ ಗಡಿಯ ತಮಿಳುನಾಡಿನ ಗುಮಟಾಪುರ ಗ್ರಾಮದಲ್ಲಿ ಪ್ರತಿ ವರ್ಷ ಆಚರಿಸುವ ಗೊರೆ ಹಬ್ಬವು ಅನನ್ಯ ಸಂಪ್ರದಾಯವಾಗಿದೆ. ಸಗಣಿಯಲ್ಲಿ ಹೊರಳಾಡುವುದು ಮತ್ತು ಒಬ್ಬರಿಗೊಬ್ಬರು ಹೊಡೆದಾಡುವುದು ಈ ಹಬ್ಬದ ಮುಖ್ಯ ಆಕರ್ಷಣೆ.
25
ಧಾರ್ಮಿಕ ನಂಬಿಕೆ
ಈ ಹಬ್ಬವು ಸಮಾನತೆ ಮತ್ತು ಏಕತೆಯನ್ನು ಸಂಕೇತಿಸುತ್ತದೆ. ಸಗಣಿಯಾಟದ ಹಿಂದೆ ಧಾರ್ಮಿಕ ನಂಬಿಕೆಗಳೂ ಇವೆ. ಈ ಹಬ್ಬವು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಚಾಮರಾಜನಗರ ಜಿಲ್ಲೆಯ ಗಡಿಯಲ್ಲಿರುವ ಗುಮಟಾಪುರ ಗ್ರಾಮದಲ್ಲಿ ಪ್ರತಿ ವರ್ಷ ತಪ್ಪದೆ ಗೊರೆ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ.
35
ಸಗಣಿಯಲ್ಲೇ ಹೊಡೆದಾಡುವುದು
ಸಗಣಿ ರಾಶಿ ಹಾಕಿ ಅದರಲ್ಲಿ ಹೊರಳಾಡುವ ಗ್ರಾಮಸ್ಥರು ಸಗಣಿಯಲ್ಲೇ ಹೊಡೆದಾಡುವುದು ಈ ಹಬ್ಬದ ವಿಶೇಷ. ಅಚ್ಚ ಕನ್ನಡಿಗರೆ ಇರುವ ಗುಮಟಾಪುರ ರಾಜ್ಯ ಪುನರ್ ವಿಂಗಡೆಣೆ ಸಂದರ್ಭದಲ್ಲಿ ತಮಿಳುನಾಡಿಗೆ ಸೇರಿಹೋದ ಗ್ರಾಮ.
ಹಬ್ಬದ ದಿನ ಬೆಳಗ್ಗೆ ಗ್ರಾಮದ ಎಲ್ಲರ ಮನೆಯ ಕೊಟ್ಟಿಗೆಗಳಿಂದ ಸಗಣಿಯನ್ನು ಎತ್ತಿನ ಗಾಡಿ ಹಾಗು ಟ್ರಾಕ್ಟರ್ಗಳ ಮೂಲಕ ತಂದು ಗ್ರಾಮದ ಬೀರೇಶ್ವರ ದೇವಸ್ಥಾನದ ಬಳಿ ರಾಶಿ ಹಾಕಲಾಗುತ್ತದೆ. ನಂತರ ದೊಡ್ಡ ದೊಡ್ಡ ಸಗಣಿ ಮುದ್ದೆಗಳನ್ನು ಮಾಡಿ ಒಬ್ಬರ ಮೇಲೆ ಒಬ್ಬರು ಎತ್ತಿ ಹಾಕಿ ಖುಷಿಪಡುತ್ತಾರೆ.
55
ಒಬ್ಬರಿಗೊಬ್ಬರು ಹೊಡೆದಾಡುವುದು ಹಬ್ಬದ ವಿಶೇಷ
ಪ್ರತಿವರ್ಷ ಇಲ್ಲಿ ಬಲಿಪಾಡ್ಯಮಿಯ ಮರುದಿನ ದಿನ ಗೊರೆ ಹಬ್ಬ ಆಚರಿಸಲಾಗುತ್ತದೆ. ವಯಸ್ಸು ಹಾಗೂ ಜಾತಿ ಬೇಧಬಾವವಿಲ್ಲದೆ ಗ್ರಾಮದ ಜನರೆಲ್ಲ ಸೇರಿ ಸಗಣಿಯಲ್ಲಿ ಹೊರಳಾಡಿ, ಒಬ್ಬರಿಗೊಬ್ಬರು ಹೊಡೆದಾಡುವುದು ಗೊರೆ ಹಬ್ಬದ ವಿಶೇಷ.