ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ: ನಟ ಚೇತನ್ ಪ್ರತಿಕ್ರಿಯೆ

Published : Aug 02, 2025, 06:35 PM IST

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಅತ್ಯಾ*ಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ತೀರ್ಪಿನ ಕುರಿತು ನಟ ಚೇತನ್ ಕುಮಾರ್ ಮತ್ತು ನಟಿ ರಮ್ಯಾ ಪ್ರತಿಕ್ರಿಯಿಸಿದ್ದಾರೆ. ನ್ಯಾಯ ವ್ಯವಸ್ಥೆಯ ಮೇಲಿನ ನಂಬಿಕೆ ಪುನಃಸ್ಥಾಪನೆಯಾಗಿದೆ ಎಂದು ಚೇತನ್ ಹೇಳಿದ್ದಾರೆ.

PREV
15

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಅತ್ಯಾ-ಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ಈ ಸಂಬಂಧ ನಟ, ಸಾಮಾಜಿಕ ಹೋರಾಟಗಾರ ನಟ ಚೇತನ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ನ್ಯಾಯ ವ್ಯವಸ್ಥೆಯ ಮೇಲೆ ಸಾರ್ವಜನಿಕರ ನಂಬಿಕೆಯನ್ನು ಪುನಃ ಸ್ಥಾಪಿಸುವ ಮಹತ್ವದ ತೀರ್ಪಾಗಿದೆ ಎಂದು ಚೇತನ್ ಕುಮಾರ್ ಹೇಳಿದ್ದಾರೆ.

25

ಪ್ರಜ್ವಲ್ ರೇವಣ್ಣ ತೀರ್ಪಿನ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಚೇತನ್ ಕುಮಾರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಚೇತನ್ ಫೇಸ್‌ಬುಕ್‌ ಪೋಸ್ಟ್‌ಗೆ ಪ್ರತಿಕ್ರಿಯಿಸಿರು ನೆಟ್ಟಿಗರೊಬ್ಬರು, ಅಧಿಕಾರ ದುರುಪಯೋಗ ಮಾಡಿಕೊಂಡು ಅದರ ಮೇಲೆ ಪ್ರಭಾವ ಬೀರಿ ಪಾರಾಗುವ ವಿಧಾನಗಳು ಇನ್ನೂ ಇಲ್ಲ ಎನ್ನುವುದು ವಿಕೃತ ಮನಗಳಿಗೆ ಮನವರಿಕೆ ಆಗಲಿ ಎಂದು ಹೇಳಿದ್ದಾರೆ.

35

ಚೇತನ್ ಕುಮಾರ್ ಹೇಳಿದ್ದೇನು?

ಬಲ*ತ್ಕಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ತೀರ್ಪು ಲೈಂಗಿಕ ದೌರ್ಜ*ನ್ಯದ ವಿರುದ್ಧದ ಗಟ್ಟಿಯಾದ ತೀರ್ಮಾನ. ಅಧಿಕಾರಸ್ಥರಾಗಿ (ಮುಖ್ಯವಾಗಿ ಪುರುಷರು) ತಮ್ಮ ಸ್ಥಾನದ ದುರುಪಯೋಗ ಮಾಡಿಕೊಂಡು ಬೆದರಿಸಿ ಮಹಿಳೆಯರನ್ನು ಮತ್ತು ತಮ್ಮ ಅಧೀನರನ್ನೇ ದುರ್ಬಳಕೆ ಮಾಡುವವರಿಗೆ ಪಾಠವಾಗುತ್ತದೆ. 

ಇದು ನ್ಯಾಯ ವ್ಯವಸ್ಥೆಯ ಮೇಲೆ ಸಾರ್ವಜನಿಕರ ನಂಬಿಕೆಯನ್ನು ಪುನಃ ಸ್ಥಾಪಿಸುವ ಮಹತ್ವದ ತೀರ್ಪಾಗಿದೆ ಎಂದು ನಟ ಚೇತನ್ ಕುಮಾರ್ ಹೇಳಿದ್ದಾರೆ.

45

ನಟಿ ರಮ್ಯಾ ಪ್ರತಿಕ್ರಿಯೆ

ಎಕ್ಸ್ ಖಾತೆಯಲ್ಲಿ ಕಾನೂನು ಎಲ್ಲರಿಗೂ ಒಂದೇ. ಮಹಿಳೆಯರ ಮೇಲಿನ ಅಪರಾಧಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ರಮ್ಯಾ ಪ್ರತಿಕ್ರಿಯಿಸಿದ್ದಾರೆ. ಶುಕ್ರವಾರ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದ ಸಂದರ್ಭದಲ್ಲಿಯೂ ರಮ್ಯಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಶುಕ್ರವಾರ ಪ್ರಜ್ವಲ್ ದೋಷಿ ತೀರ್ಪು ಬೆನ್ನಲ್ಲೇ ಎಲ್ಲಾ ಮಹಿಳೆಯರಿಗೂ ನ್ಯಾಯ ಸಿಕ್ಕಿದೆ ಎಂಬ ಭಾವನಾತ್ಮಕ ಪೋಸ್ಟ್‌ ಹಾಕಿದ್ದರು.

55

14 ತಿಂಗಳಿಂದ ಜೈಲುವಾಸ

ಕಳೆದ 14 ತಿಂಗಳಿಂದ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ಪ್ರಜ್ವಲ್‌ ರೇವಣ್ಣ ಈ ಪ್ರಕರಣದಲ್ಲಿ ದೋಷಮುಕ್ತರಾಗಿ ಖುಲಾಸೆಯಾಗುವ ನಿರೀಕ್ಷೆಯಲ್ಲಿದ್ದನು. ಇಂದು ತೀರ್ಪು ಪ್ರಕಟವಾಗಿದೆ. ಶುಕ್ರವಾರ ದೋಷಿ ಎಂದು ತೀರ್ಪು ನೀಡುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಕಣ್ಣೀರು ಹಾಕಿದ್ದನು.

Read more Photos on
click me!

Recommended Stories