ಇನ್ಪೋಸಿಸ್ ಸಂಸ್ಥಾಪಕಿ, ಲೇಖಕಿ ಮತ್ತು ರಾಜ್ಯಸಭಾ ಸದಸ್ಯ ಸುಧಾ ಮೂರ್ತಿ ಅವರು ಅಯೋಧ್ಯೆ ರಾಮಮಂದಿರ ಶಿಲ್ಪಿ ಅರುಣ್ ಯೋಗಿರಾಜ್ ಮನೆಗೆ ಭೇಟಿ ನೀಡಿದರು.
ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿರುವ ಅರುಣ್ ಯೋಗಿರಾಜ್ ಮನೆ. ಸುಧಾಮೂರ್ತಿ ಆಗಮಿಸುತ್ತಿದ್ದಂತೆ ಸಂತೋಷಗೊಂಡು ಕುಟುಂಬಸ್ಥರು ಸ್ವಾಗತಿಸಿದರು.
ಅರುಣ್ ಯೋಗಿರಾಜ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರ ಜೊತೆ ಉಭಯ ಕುಶೋಲಪರಿ ಬಳಿಕ ಅರುಣ್ ಯೋಗಿರಾಜ್ ಮನೆಯಲ್ಲಿನ ಶಿಲ್ಪಗಳನ್ನು ಕುತೂಹಲದಿಂದ ವೀಕ್ಷಿಸಿದರು
ಈ ವೇಳೆ ಅರುಣ್ ಶಿಲ್ಪಗಳ ಬಗ್ಗೆ ಸುಧಾಮೂರ್ತಿಯವರಿಗೆ ವಿವರಣೆ ನೀಡಿದರು.ಶಿಲ್ಪಗಳ ವಿವರಣೆ ಕೇಳಿ ಸುಧಾಮೂರ್ತಿ ಸಂತಸಪಟ್ಟರು. ಇನ್ಫೋಸಿಸ್ ಸಂಸ್ಥಾಪಕಿಯಾಗಿದ್ದರು ಭಾರತೀಯ ಕಲೆ ಸಂಸ್ಕೃತಿ, ಇತಿಹಾಸದ ಬಗ್ಗೆ ಅಪಾರ ಆಸಕ್ತಿ, ಗೌರವದ ಭಾವನೆ ಹೊಂದಿರುವ ಸುಧಾಮೂರ್ತಿ.
ಕೆಲವು ಹೊತ್ತು ಮಾತುಕತೆ ನಡೆಸಿದರು ಬಳಿಕ ಯೋಗಿರಾಜ್ ಕುಟುಂಬಸ್ಥರು ಅತ್ಮೀಯವಾಗಿ ಬೀಳ್ಕೊಟ್ಟರು. ಸುಧಾಮೂರ್ತಿಯವರು ನಿನ್ನೆಯಷ್ಟ ಮೈಸೂರಿನಲ್ಲಿ ನಡೆದ
ನಿನ್ನೆ ಮೈಸೂರಿಗೆ ಆಗಮಿಸಿದ್ದ ಸುಧಾಮೂರ್ತಿಯವರು ಮೈಸೂರು ವಿಶ್ವವಿದ್ಯಾಲಯ ಹೊರತಂದಿರುವ 'ಕನ್ನಡ ವಿಶ್ವಕೋಶ 10 ಮತ್ತು 13ನೇ ಸಂಪುಟಗಳ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡಿದ್ದರು ಇದೇ ಸಂದರ್ಭ ಅರುಣ್ ಯೋಗಿರಾಜ ಮನೆಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.