ಭಾರತದ ಉದ್ದನೆಯ ನದಿಗಳು ಯಾವುವು? ಜೀವ ನದಿ ಕಾವೇರಿಗೆ ಎಷ್ಟನೇ ಸ್ಥಾನ?

Published : Sep 13, 2024, 11:44 AM IST

ಭಾರತದ ಟಾಪ್ 10 ಉದ್ದನೆಯ ನದಿಗಳು: ವೈವಿಧ್ಯಮಯ ಭೂಪ್ರದೇಶ ಹೊಂದಿರುವ ಭಾರತದಲ್ಲಿ 200ಕ್ಕೂ ಹೆಚ್ಚು ನದಿಗಳಿವೆ. ಇವು ಜೀವನೋಪಾಯಕ್ಕೆ, ಕೃಷಿಯ ಜೀವನಾಡಿಯಾಗಿದ್ದು, ನಾಗರಿಕತೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿವೆ.  ಭಾರತದ ಸಂಸ್ಕೃತಿ, ಜನಜೀವನದೊಂದಿಗೆ ಬೆಸೆದುಕೊಂಡಿರುವ ನದಿಗಳ ಉದ್ದವೆಷ್ಟು. ಅದರಲ್ಲಿಯೂ ಕರ್ನಾಟಕದ ಅನೇಕ ಜಿಲ್ಲೆಗಳಿಗಳಲ್ಲದೇ, ತಮಿಳುನಾಡಿನ ಕೃಷಿಕರ ಜೀವನಾಡಿಯೂ ಆಗಿರುವ ಕಾವೇರಿ ಎಷ್ಟು ಉದ್ದ ಹರಿಯುತ್ತಾಳೆ? ಕೊಡಗಿನ ತಲಕಾವೇರಿಯಲ್ಲಿ ಹರಿಯೋ ಈ ನದಿ ತಮಿಳುನಾಡಿನಲ್ಲೂ ಹರಿದು, ಸಮುದ್ರ ಸೇರೋ ಮುನ್ನ ಎಷ್ಟು ದೂರ ಸಂಚರಿಸುತ್ತಾಳೆ?

PREV
15
ಭಾರತದ ಉದ್ದನೆಯ ನದಿಗಳು ಯಾವುವು? ಜೀವ ನದಿ ಕಾವೇರಿಗೆ ಎಷ್ಟನೇ ಸ್ಥಾನ?
ಸಂಸ್ಕೃತಿಯೊಂದಿಗೆ ನದಿ ನಂಟು

ವೈವಿಧ್ಯಮಯ ಭೂಪ್ರದೇಶವನ್ನು ಹೊಂದಿರುವ ಭಾರತವು ವಿಶಾಲವಾದ ನದಿಗಳನ್ನು ಹೊಂದಿದೆ. ಈ ನದಿಗಳು ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ ಹೊಂದಿದ್ದು ಭಾರತೀಯರ ಜೀವನದಲ್ಲಿ ಹಾಸಿ ಹೊಕ್ಕಾಗಿದೆ. ಕೃಷಿಯನ್ನು ಪೋಷಿಸಿ,ನಾಗರಿಕತೆಯೊಂದಿಗೆ ಬೆಸೆದುಕೊಂಡಿವೆ. ಭಾರತದ ವಿಶಾಲವಾದ ಭೂಪ್ರದೇಶದಲ್ಲಿ 200ಕ್ಕೂ ಹೆಚ್ಚು ನದಿಗಳು ಹರಿಯುತ್ತವೆ. ಹೆಚ್ಚಿನ ಭಾರತೀಯ ನದಿಗಳು ಅರಾವಳಿ, ಕಾರಕೋರಂ ಮತ್ತು ಹಿಮಾಲಯದಲ್ಲಿ ಹುಟ್ಟಿಕೊಳ್ಳುತ್ತವೆ. ಕೃಷಿ ಭಾರತದ ಬೆನ್ನೆಲುಬು. ನೀರಾವರಿ ವ್ಯವಸ್ಥೆಯ ಜೀವನಾಡಿಯಾಗಿ ನದಿಗಳು ಪ್ರಮುಖ ಪಾತ್ರವಹಿಸುತ್ತವೆ.ಇದಲ್ಲದೆ, ಈ ನದಿಗಳು ದೇಶದ ಭೌಗೋಳಿಕತೆ, ಆರ್ಥಿಕತೆ ಮತ್ತು ಸಂಸ್ಕೃತಿಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತವೆ. ಭಾರತದಲ್ಲಿ ಹರಿಯುವ ಟಾಪ್ 10 ಉದ್ದನೆಯ ನದಿಗಳು ಯಾವುವು?

25
ದೇವನದಿ ಗಂಗೆ

ಉತ್ತರಾಖಂಡದ ಗಂಗೋತ್ರಿ ಹಿಮನದಿಯಲ್ಲಿ ಹುಟ್ಟುವ ಗಂಗೆಯು ಭಾರತದ ಅಚೀ ಉಜ್ಜನೆಯ ನದಿ. ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಸೇರಿ ಹಲವು ರಾಜ್ಯಗಳಲ್ಲಿ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಗಂಗಾ ನದಿಯ ಒಟ್ಟು ಉದ್ದ ಸುಮಾರು 2,525 ಕಿ.ಮೀ. ಇದನ್ನು ಬಾಂಗ್ಲಾದೇಶದಲ್ಲಿ ಪದ್ಮಾ ನದಿ ಎಂದೂ ಕರೆಯುತ್ತಾರೆ. ಗಂಗಾ ನದಿಯನ್ನು ಭಾರತದ ಅತ್ಯಂತ ಪವಿತ್ರ ನದಿ ಎಂದು ಪರಿಗಣಿಸಲಾಗಿದೆ.

ಗೋದಾವರಿ: ಗಂಗಾ ನಂತರ ಭಾರತದ ಎರಡನೇ ಅತಿದೊಡ್ಡ ನದಿ ಗೋದಾವರಿ. ಈ ನದಿಯ ಉದ್ದ ಸುಮಾರು 1,465 ಕಿ.ಮೀ. ಮಹಾರಾಷ್ಟ್ರದ ತ್ರಿಂಬಕ್ ಬೆಟ್ಟದಲ್ಲಿ ಹುಟ್ಟುವ ಈ ನದಿಯು ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಈ ನದಿಯು  ಸಾಂಸ್ಕೃತಿಕ ಮತ್ತು ಆರ್ಥಿಕ ಪ್ರಾಮುಖ್ಯತೆಯನ್ನು ಹೊಂದಿದ್ದು, ಲಕ್ಷಾಂತರ ಜನರ ಜೀವನಾಡಿ. ಗೋದಾವರಿ ನದಿಗೆ ಪ್ರವಾರ, ಮಂಜೀರಾ, ಪೆಂಗಂಗಾ, ವಾರ್ಧಾ, ಇಂದ್ರಾವತಿ, ಶಬರಿ ಸೇರಿ ಹಲವು ಉಪನದಿಗಳಿವೆ.

35
ಕೃಷ್ಣಾ

ಭಾರತದ ಮೂರನೇ ಅತಿದೊಡ್ಡ ನದಿ ಕೃಷ್ಣಾ. ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಈ ಕೃಷ್ಣಾ ನದಿಯ ಉದ್ದ ಸುಮಾರು 1,400 ಕಿ.ಮೀ. ಈ ನದಿಯು ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದ ಮೂಲಕ ಹರಿದು, ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ತುಂಗಭದ್ರಾ, ಭೀಮಾ, ಘಟಪ್ರಭಾ, ಮಲಪ್ರಭಾ ಮತ್ತು ಮೂಸಿ ಸೇರಿ ಹಲವು ನದಿಗಳು ಕೃಷ್ಣಾ ನದಿಯ ಉಪನದಿಗಳಾಗಿವೆ. ಕರ್ನಾಟಕದಲ್ಲಿ ಹುಟ್ಟುವ ತುಂಗಭದ್ರಾ ನದಿಯು ಕೃಷ್ಣಾ ನದಿಯ ಅತಿದೊಡ್ಡ ಉಪನದಿಗಳಲ್ಲಿ ಒಂದು.

ಯಮುನಾ: ಸುಮಾರು 1376 ಕಿ.ಮೀ ಉದ್ದದ ಯಮುನಾ ನದಿ ಭಾರತದ ನಾಲ್ಕನೇ ಅತಿದೊಡ್ಡ ನದಿ. ಈ ನದಿಯು ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿರುವ ಯಮುನೋತ್ರಿ ಹಿಮನದಿಗಳಲ್ಲಿ ಹುಟ್ಟುತ್ತದೆ. ಗಂಗಾ ನದಿಯ ಉಪನದಿಯಾದ ಇದು ಹಿಮಾಚಲ ಪ್ರದೇಶ, ಹರಿಯಾಣ, ದೆಹಲಿ ಮತ್ತು ಉತ್ತರ ಪ್ರದೇಶದ ಮೂಲಕ ಹರಿದು ಪ್ರಯಾಗ್‌ರಾಜ್‌ನಲ್ಲಿ ಗಂಗಾ ನದಿಯನ್ನು ಸೇರುತ್ತದೆ. 

45
ನರ್ಮದಾ:

ಭಾರತದ ಐದನೇ ಅತಿದೊಡ್ಡ ನದಿ ನರ್ಮದಾ. ಇದು ಸುಮಾರು 1,312 ಕಿಲೋಮೀಟರ್ ದೂರ ಕ್ರಮಿಸುತ್ತದೆ. ನರ್ಮದೆಯು ಮಧ್ಯ ಭಾರತದಲ್ಲಿ ಹರಿಯುವ ಪ್ರಮುಖ ನದಿ. ಮಧ್ಯಪ್ರದೇಶದ ಅಮರಕಂಟಕ ಪ್ರಸ್ಥಭೂಮಿಯಲ್ಲಿ ಹುಟ್ಟುವ ಈ ನದಿ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ ಮೂಲಕ ಪಶ್ಚಿಮಕ್ಕೆ ಹರಿದು, ಅರೇಬಿಯನ್ ಸಮುದ್ರ ಸೇರುತ್ತದೆ. 

ತವಾ, ಬರ್ನಾ, ಶಕ್ಕರ್ ಮತ್ತು ಹಿರಾನ್ ನದಿಗಳು ನರ್ಮದಾ ನದಿಯ ಪ್ರಮುಖ ಉಪನದಿಗಳು. ನೀರಾವರಿ, ಜಲ ವಿದ್ಯುತ್ ಉತ್ಪಾದನೆ ಮತ್ತು ನೀರು ಸರಬರಾಜಿಗಾಗಿ ಈ ನದಿ ಮೇಲೆ ಹಲವು ಅಣೆಕಟ್ಟುಗಳು ಮತ್ತು ಜಲಾಶಯಗಳನ್ನು ನಿರ್ಮಿಸಲಾಗಿದೆ. ದೇಶದ ಪ್ರಸಿದ್ಧ ಸರ್ದಾರ್ ಸರೋವರ ಅಣೆಕಟ್ಟು ಕೂಡ ಗುಜರಾತ್‌ನಲ್ಲಿ ಈ ನದಿಯ ಮೇಲಿದೆ.

ಸಿಂಧೂ: ಭಾರತದ 7 ನೇ ಅತಿದೊಡ್ಡ ನದಿ ಸಿಂಧೂ ನದಿ. ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿರುವ ಮಾನಸರೋವರ ಸರೋವರದಲ್ಲಿ ಹುಟ್ಟುವ ಈ ನದಿಯು ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳ ಮೂಲಕ ಹರಿದು ಪಾಕಿಸ್ತಾನವನ್ನು ತಲುಪುತ್ತದೆ ಮತ್ತು ಅಂತಿಮವಾಗಿ ಅರೇಬಿಯನ್ ಸಮುದ್ರ ಸೇರುತ್ತದೆ. ಸಿಂಧೂ ನದಿಯ ಒಟ್ಟು ಉದ್ದ 3,180 ಕಿಲೋಮೀಟರ್.

ಬ್ರಹ್ಮಪುತ್ರ: ದೇಶದ ಏಳನೇ ಅತಿದೊಡ್ಡ ನದಿಯಾದ ಬ್ರಹ್ಮಪುತ್ರ ನದಿಯು ಹಿಮಾಲಯದಲ್ಲಿ ಕೈಲಾಶ್ ಪರ್ವತದ ಬಳಿ ಇರುವ ಚೆಮಾಯುಂಗ್‌ ಹಿಮನದಿಯಿಂದ ಹುಟ್ಟುತ್ತದೆ. ಈ ಪ್ರದೇಶ ಚೀನಾದಲ್ಲಿದೆ. ಬ್ರಹ್ಮಪುತ್ರ ನದಿಯ ಒಟ್ಟು ಉದ್ದ ಸುಮಾರು 2,900 ಕಿಲೋಮೀಟರ್ ಆದರೆ ಈ ನದಿಯ 918 ಕಿಲೋಮೀಟರ್ ಮಾತ್ರ ಭಾರತದಲ್ಲಿದೆ. ಬ್ರಹ್ಮಪುತ್ರ ನದಿಯು ಅರುಣಾಚಲ ಪ್ರದೇಶದ ಮೂಲಕ ಭಾರತ ಪ್ರವೇಶಿಸುತ್ತದೆ. ಆ ರಾಜ್ಯದಲ್ಲಿ ಇದನ್ನು ಸಿಯಾಂಗ್ ನದಿ ಎಂದು ಕರೆಯಲಾಗುತ್ತದೆ. ಇದು ಗಂಗಾ ಮತ್ತು ಮೇಘನಾ ನದಿಗಳೊಂದಿಗೆ ಸೇರಿ ಬಂಗಾಳ ಕೊಲ್ಲಿಯಲ್ಲಿ ಬೀಳುವ ಮೊದಲು ವಿಶ್ವದ ಅತಿದೊಡ್ಡ ಡೆಲ್ಟಾವಾದ ಸುಂದರ್ಬನ್ಸ್ ಡೆಲ್ಟಾವನ್ನು ರೂಪಿಸುತ್ತದೆ.

55
ಮಹಾನದಿ:

858 ಕಿಲೋಮೀಟರ್ ಉದ್ದದ ಭಾರತದ 8 ನೇ ಅತಿದೊಡ್ಡ ನದಿ. ಛತ್ತೀಸ್‌ಗಢದ ರಾಯ್‌ಪುರ ಜಿಲ್ಲೆಯಲ್ಲಿ ಹುಟ್ಟುವ ಈ ನದಿಯು ಪೂರ್ವ ದಿಕ್ಕಿನತ್ತ ಹರಿಯುತ್ತದೆ. ಛತ್ತೀಸ್‌ಗಢ ಮತ್ತು ಒಡಿಶಾ ರಾಜ್ಯಗಳ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಶಿಯೋನಾಥ್, ಜೋಂಕ್, ಹಸ್ಡಿಯೊ, ಓಂಗ್ ಮತ್ತು ಟೆಲ್ ನದಿಗಳು ಮಹಾನದಿಯ ಪ್ರಮುಖ ಉಪನದಿಗಳು. ಛತ್ತೀಸ್‌ಗಢ ಮತ್ತು ಒಡಿಶಾದ ಕೃಷಿ ಉತ್ಪಾದನೆಗೆ ಕೊಡುಗೆ ನೀಡುವ ನದಿಯ ನೀರನ್ನು ನೀರಾವರಿಗಾಗಿ ವ್ಯಾಪಕವಾಗಿ ಬಳಸಲಾಗುತ್ತದೆ.

ಕಾವೇರಿ: ಭಾರತದ 9ನೇ ಅತಿದೊಡ್ಡ ನದಿ ಕಾವೇರಿ. ಇದು ಕರ್ನಾಟಕದ ಕೊಡಗು ಬೆಟ್ಟದಲ್ಲಿ ಹುಟ್ಟುತ್ತದೆ. ಕಾವೇರಿ ನದಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಮೂಲಕ ಪೂರ್ವಕ್ಕೆ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಇದು ಒಟ್ಟು ಸುಮಾರು 800 ಕಿಲೋಮೀಟರ್ ದೂರ ಪ್ರಯಾಣಿಸುತ್ತದೆ. ಹೇಮಾವತಿ, ಕಬಿನಿ, ಅರ್ಕಾವತಿ, ಶಿಂಷಾ ಮತ್ತು ಅಮರಾವತಿ ಸೇರಿ ಹಲವು ನದಿಗಳು ಕಾವೇರಿ ನದಿಯ ಉಪನದಿಗಳಾಗಿವೆ.

ತಪತಿ: ತಪತಿ ನದಿಯು ಭಾರತದ ಹತ್ತನೇ ಅತಿದೊಡ್ಡ ನದಿ. ಮಧ್ಯಪ್ರದೇಶದ ಸತ್ಪುರಾ ಶ್ರೇಣಿಯಲ್ಲಿ ಹುಟ್ಟುವ ಈ ನದಿಯ ಒಟ್ಟು ಉದ್ದ ಸುಮಾರು 724 ಕಿಲೋಮೀಟರ್. ಮಹಾರಾಷ್ಟ್ರ ಮತ್ತು ಗುಜರಾತ್ ಮೂಲಕ ಹರಿದು ಅರೇಬಿಯನ್ ಸಮುದ್ರ ಸೇರುತ್ತದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories