ಕದನ ವಿರಾಮ ಟ್ರಂಪ್ ಮಧ್ಯೆ ಪ್ರವೇಶಕ್ಕೆ ಕಾಂಗ್ರೆಸ್ ಅಕ್ರೋಶ; 'ಮಾತಿನ ಮೋಡಿ ಸಾಕು ಇಂದಿರಾ ನಡೆ ಬೇಕು' ಎಂದು ಪೋಸ್ಟರ್!

Published : May 13, 2025, 12:08 PM ISTUpdated : May 13, 2025, 12:11 PM IST

india pakistan ceasefire ಭಾರತ-ಪಾಕಿಸ್ತಾನದ ನಡುವಿನ ಕದನ ವಿರಾಮ ಒಪ್ಪಂದಕ್ಕೆ ಅಮೆರಿಕದ ಮಧ್ಯಸ್ಥಿಕೆಯನ್ನು ಒಪ್ಪಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ಪಕ್ಷ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು 'ಭಾರತಕ್ಕೆ ಮಾತಿನ ಮೋದಿ ಸಾಕು, ಇಂದಿರಾ ನಡೆ ಬೇಕು' ಎಂಬ ಘೋಷಣೆಯೊಂದಿಗೆ ಪೋಸ್ಟರ್‌ಗಳನ್ನು ಹಾಕಿದ್ದಾರೆ. ಈ ಪೋಸ್ಟರ್‌ಗಳು ಕದನ ವಿರಾಮಕ್ಕೆ ಅಮೆರಿಕದ ಮಧ್ಯಪ್ರವೇಶವನ್ನು ತೀವ್ರವಾಗಿ ವಿರೋಧಿಸಿವೆ.

PREV
15
 ಕದನ ವಿರಾಮ ಟ್ರಂಪ್ ಮಧ್ಯೆ ಪ್ರವೇಶಕ್ಕೆ ಕಾಂಗ್ರೆಸ್ ಅಕ್ರೋಶ; 'ಮಾತಿನ ಮೋಡಿ ಸಾಕು ಇಂದಿರಾ ನಡೆ ಬೇಕು' ಎಂದು ಪೋಸ್ಟರ್!
ಇಂದಿರಾ ಗಾಂಧಿಯನ್ನು ಸ್ಮರಿಸಿದ ಕಾಂಗ್ರೆಸ್


ಪೋಸ್ಟರ್‌ಗಳಲ್ಲಿ 1972ರಲ್ಲಿ ಭಾರತ-ಪಾಕ್ ಯುದ್ಧದ ಸಂದರ್ಭದಲ್ಲಿ ಅಮೆರಿಕದ ಮಧ್ಯಸ್ಥಿಕೆಯನ್ನು ತಿರಸ್ಕರಿಸಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಕಠಿಣ ನಿಲುವನ್ನು ತಾಳಿದರು. 'ಇಂದಿರಾ ಇಸ್ ಇಂಡಿಯಾ, ಇಂಡಿಯಾ ಇಸ್ ಇಂದಿರಾ, "ಭಾರತಾಂಬೆಯ ಮಕ್ಕಳಿಗೆ ದುರ್ಗಿಯ ನೆನಪಾಗಿದೆ, ಮತ್ತು 'ಇಂದಿರಾ ಭಾರತದ ನಿಜ ಸಿಂದೂರ ಎಂಬ ಘೋಷವಾಕ್ಯಗಳು ಪೋಸ್ಟರ್‌ಗಳಲ್ಲಿ ಕಾಣಿಸಿಕೊಂಡಿವೆ. ಇದರ ಮೂಲಕ ಕಾಂಗ್ರೆಸ್, ಇಂದಿರಾ ಗಾಂಧಿಯ ದಿಟ್ಟ ನಾಯಕತ್ವವನ್ನು ಮಾದರಿಯಾಗಿಟ್ಟುಕೊಂಡು ಪ್ರಧಾನಿ ಮೋದಿಯವರ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದೆ.

25
ಬೆಂಗಳೂರಿನಾದ್ಯಂತ ಪೋಸ್ಟರ್ ವಾರ್!


ಯೂತ್ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ಸಿಎಂ ಮನೆ, ಮೌರ್ಯ ಸರ್ಕಲ್, ಟೌನ್ ಹಾಲ್, ಕೆ.ಆರ್. ಸರ್ಕಲ್, ಮೇಖ್ರಿ ಸರ್ಕಲ್, ವಿಧಾನಸೌಧ ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಈ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಆದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಹುತೇಕ ಎಲ್ಪಾ ಪೋಸ್ಟರ್‌ಗಳನ್ನು ತೆಗೆದುಹಾಕಿದೆ ಎಂದು ವರದಿಯಾಗಿದೆ.

35
ಕಾಂಗ್ರೆಸ್‌ನಿಂದ ತೀವ್ರ ಟೀಕೆ


ಕರ್ನಾಟಕದ ಪ್ರಭಾವಿ ಸಚಿವ ದಿನೇಶ್ ಗುಂಡೂರಾವ್, 'ಆಕ್ರಮಣಕಾರಿಯಾಗಿ ಮಾತನಾಡಿದ ಮೋದಿ ದಿಢೀರ್ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದು ಅಚ್ಚರಿಯಾಗಿದೆ' ಎಂದು ಹೇಳಿದ್ದಾರೆ. ಇನ್ನು ಹಿರಿಯ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್, 'ಇಂಡೋ-ಪಾಕ್ ಕದನದಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪಕ್ಕೆ ಅವಕಾಶ ನೀಡಿದ್ದು ದುರದೃಷ್ಟಕರ. ಇನ್ನು ಮುಂದೆ ಮೋದಿ ವಿಶ್ವಗುರು ಅಲ್ಲ' ಎಂದು ಕಿಡಿಕಾರಿದ್ದಾರೆ.

45
ಅಮೆರಿಕದ ಮಧ್ಯಸ್ಥಿಕೆಗೆ ಆಕ್ಷೇಪ


ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಅಮೆರಿಕದ ಮಧ್ಯಪ್ರವೇಶವನ್ನು ತೀವ್ರವಾಗಿ ವಿರೋಧಿಸಿದ್ದಾರೆ. 1972ರಲ್ಲಿ ಇಂದಿರಾ ಗಾಂಧಿಯವರು ಅಮೆರಿಕದ ಸಲಹೆಯನ್ನು ತಿರಸ್ಕರಿಸಿ ಭಾರತದ ಸಾರ್ವಭೌಮತೆಯನ್ನು ಎತ್ತಿಹಿಡಿದಿದ್ದರು. ಪ್ರಧಾನಿ ಮೋದಿ ಇದೇ ರೀತಿಯ ದೃಢ ನಿಲುವು ತೆಗೆದುಕೊಳ್ಳುವಂತೆ ಆಗ್ರಹಿಸಿದೆ.
 

55
ಇಂದಿರಾ ಪೋಸ್ಟರ್

ಈ ಪೋಸ್ಟರ್ ವಾರ್ ಬೆಂಗಳೂರಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲವರು ಕಾಂಗ್ರೆಸ್‌ನ ಈ ಹೋರಾಟವನ್ನು ಬೆಂಬಲಿಸಿದರೆ, ಇನ್ನೂ ಕೆಲವರು ಇದನ್ನು ರಾಜಕೀಯ ತಂತ್ರವೆಂದು ಟೀಕಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಈ ವಿಷಯ ತೀವ್ರ ಚರ್ಚೆಗೊಳಪಟ್ಟಿದೆ. ಪೋಸ್ಟರ್‌ನಿಂದಾಗಿ ರಾಜಕೀಯ ವಲಯದಲ್ಲಿ ಮತ್ತಷ್ಟು ಗೊಂದಲವನ್ನು ಸೃಷ್ಟಿಸಿವೆ. ಕದನ ವಿರಾಮ ಒಪ್ಪಂದದ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಇನ್ನೂ ಬಂದಿಲ್ಲ. 

ಮುಂದಿನ ಬೆಳವಣಿಗೆಗಳು ತಿಳಿಯಲು ಏಷಿಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಟ್ಯೂನ್ ಆಗಿರಿ

Read more Photos on
click me!

Recommended Stories