ಬೆಂಗಳೂರು, ಮೈಸೂರಲ್ಲಿ ಭಾನುವಾರ ಮಳೆ ಬರುತ್ತಾ? ಹವಾಮಾನ ಇಲಾಖೆ ಮುನ್ಸೂಚನೆ ಏನಿದೆ?

Published : May 11, 2025, 09:55 AM IST

ಕರ್ನಾಟಕದಲ್ಲಿ ಇವತ್ತು ಭಾನುವಾರ ಬಿಸಿಲು ಜಾಸ್ತಿ ಇರುತ್ತದೆ. ದಕ್ಷಿಣ ಒಳನಾಡಿನ ಬೆಂಗಳೂರು ಹಾಗೂ ಕರಾವಳಿಯ ಮಂಗಳೂರಿನ ಕೆಲವು ಕಡೆ ಮಳೆ ಬರಬಹುದು. ಗುಡುಗು-ಸಿಡಿಲು ಜೊತೆಗೆ ಮಳೆ ಬರುವ ಸಾಧ್ಯತೆ ಇದೆ.

PREV
13
ಬೆಂಗಳೂರು, ಮೈಸೂರಲ್ಲಿ ಭಾನುವಾರ ಮಳೆ ಬರುತ್ತಾ? ಹವಾಮಾನ ಇಲಾಖೆ ಮುನ್ಸೂಚನೆ ಏನಿದೆ?

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಭಾನುವಾರ ಬಿಸಿಲು ವಾತಾವರಣವಿರುತ್ತದೆ. ಇನ್ನು ಕರಾವಳಿ ಸೇರಿದಂತೆ ಕೆಲವು ಸೀಮಿತ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಗುಡುಗು-ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೇಸಿಗೆಯಲ್ಲಿ ದೇಹ ನಿರ್ಜಲೀಕರಣ ಆಗಲಿದ್ದು, ಜನರು ಹೆಚ್ಚಾಗಿ ನೀರು ಕುಡಿಯಬೇಕು. ಸಂಜೆ ಮಳೆ ಬರುವ ವಾತಾವರಣ ಇದ್ದಾಗ ಎಚ್ಚರವಹಿಸಬೇಕು.

23

ಬೆಂಗಳೂರು: ಗರಿಷ್ಠ ಉಷ್ಣತೆ: 33°C, ಕನಿಷ್ಠ ಉಷ್ಣತೆ: 22°C, ರಿಯಲ್ ಫೀಲ್: 36°C ಇದೆ.
ಬೆಂಗಳೂರಿನಲ್ಲಿ ಬೆಳಗ್ಗೆಯೇ ಕೆಲವೆಡೆ ತಂಪಾದ ಮತ್ತು ಮೋಡ ಕವಿದ ವಾತಾವರಣವಿದ್ದು, ನಂತರ ಬಿಸಿಲಿನ ಝಳ ಝಳಪಿಸಿದೆ. ಮಧ್ಯಾಹ್ನದ ನಂತರ ನಗರದ ವಿವಿಧೆಡೆ ಮಳೆ ಬರಬಹುದು.

ಮೈಸೂರು:
ಗರಿಷ್ಠ ಉಷ್ಣತೆ: 35°C
ಕನಿಷ್ಠ ಉಷ್ಣತೆ: 22°C,
ಯಲ್ ಫೀಲ್: 38°C.
ಬಿಸಿಲು, ಮೋಡ ಇರುತ್ತದೆ, ಮಳೆ ಇಲ್ಲ.

33

ಹುಬ್ಬಳ್ಳಿ-ಧಾರವಾಡ:
ಗರಿಷ್ಠ ಉಷ್ಣತೆ: 36°C,
ಕನಿಷ್ಠ ಉಷ್ಣತೆ: 23°C,
ರಿಯಲ್ ಫೀಲ್: 37°C.
ಬಿಸಿಲು, ಮೋಡ ಇರುತ್ತೆ, ಮಳೆ ಇಲ್ಲ.

ಮಂಗಳೂರು:
ಗರಿಷ್ಠ ಉಷ್ಣತೆ: 32°C,
ಕನಿಷ್ಠ ಉಷ್ಣತೆ: 25°C,
ರಿಯಲ್ ಫೀಲ್: 38°C
ಬಿಸಿಲು, ಮೋಡ, ಸಂಜೆ ಮಳೆ ಬರಬಹುದು.

Read more Photos on
click me!

Recommended Stories