ಹಾಸನಾಂಬೆ ಪವಾಡದಲ್ಲಷ್ಟೇ ಅಲ್ಲ, ಆದಾಯದಲ್ಲೂ ಶ್ರೀಮಂತೆ: ಕೇವಲ 12 ದಿನದಲ್ಲಿ 8.72 ಕೋಟಿ ಆದಾಯ ಗಳಿಕೆ

First Published | Nov 16, 2023, 3:36 PM IST

ಹಾಸನ (ನ.16): ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿರುವ ಹಾಸನದ ಹಾಸನಾಂಬ ದೇವಿಯ ಜಾತ್ರೆಯ ಅಂಗವಾಗಿ ಕೇವಲ 12 ದಿನಗಳಿಗೆ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಈ ವೇಳೆ ಭಕ್ತಾದಿಗಳಿಂದ ಭಾರಿ ಪ್ರಮಾಣದ ಬೆಂಬಲ ವ್ಯಕ್ತವಾಗಿದ್ದು, ದೇವಾಲಯದ ಹುಂಡಿಯಲ್ಲಿ ಬರೋಬ್ಬರಿ 8.72 ಕೋಟಿ ರೂ. ಹಣ ಸಂಗ್ರಹವಾಗಿದೆ. ಇನ್ನು ದೇವಾಲಯದ ಟಿಕೆಟ್‌ ಹಾಗೂ ಲಾಡು ಪ್ರಸಾದ ಮಾರಾಟದಿಂದ 6.15 ಕೋಟಿ ರೂ. ಆದಾಯ ಗಳಿಸಿತ್ತು. ಹಾಸನಾಂಬ ದೇವಿಯ 2023ರ ಜಾತ್ರಾ ಮಹೋತ್ಸವದಿಂದ ಸುಮಾರು 15 ಕೋಟಿ ರೂ. ಆದಾಯ ಬಂದಿದೆ.

ಹಾಸನದ ಹಾಸನಾಂಬ ದೇವಿಯ ಜಾತ್ರೆಯ ಅಂಗವಾಗಿ ಕೇವಲ 12 ದಿನಗಳಿಗೆ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಈ ವೇಳೆ ಭಕ್ತಾದಿಗಳಿಂದ ಭಾರಿ ಪ್ರಮಾಣದ ಬೆಂಬಲ ವ್ಯಕ್ತವಾಗಿದ್ದು, ದೇವಾಲಯದ ಹುಂಡಿಯಲ್ಲಿ ಬರೋಬ್ಬರಿ 8.72 ಕೋಟಿ ರೂ. ಹಣ ಸಂಗ್ರಹವಾಗಿದೆ.

ಹಾಸನಾಂಬೆ ದೇವರ ಹುಂಟಿಯಲ್ಲಿ ಬರೋಬ್ಬರಿ 2 ಕೋಟಿ 55ಲಕ್ಷ 41ಸಾವಿರದ 497 ರೂಪಾಯಿ ಸಂಗ್ರಹವಾಗಿದೆ ಇದನ್ನು 150ಕ್ಕೂ ಹೆಚ್ಚು ಸಿಬ್ಬಂದಿ ಎಣಿಕೆ ಮಾಡಿದ್ದಾರೆ. 

Tap to resize

ದೇವಾಲಯದ ಟಿಕೆಟ್‌ ಹಾಗೂ ಲಾಡು ಪ್ರಸಾದ ಮಾರಾಟದಿಂದ 6.15 ಕೋಟಿ ರೂ. ಆದಾಯ ಗಳಿಸಿತ್ತು. ಈಗ ಚಿನ್ನ, ಅಮೇರಿಕಾದ ಡಾಲರ್‌ ಸೇರಿದಂತೆ ವಿವಿಧ ವಸ್ತುಗಳು ಪತ್ತೆಯಾಗಿವೆ. 

ಈ ಬಾರಿ 8 ಕೋಟಿ 72 ಲಕ್ಷದ 41ಸಾವಿರ 531ರೂ ಆದಾಯ ಬಂದಿದ್ದರೆ, ಈ ಹಿಂದೆ ಅತಿಹೆಚ್ಚು ಅಂದರೆ 5.20 ಕೋಟಿ ರೂ. ದಾಖಲೆಯ ಸಂಗ್ರಹವಾಗಿತ್ತು. 

ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ನಿನ್ನೆಯಷ್ಟೇ ವಿದ್ಯುಕ್ತ ತೆರೆ ಬಿದ್ದಿದೆ. ಇದರ ಬೆನ್ನಲ್ಲಿಯೇ ಹಾಸನಾಂಬೆ ದೇವಾಲಯ ಆವರಣದಲ್ಲಿ ಗುರುವಾರ ಬೆಳಗ್ಗೆ ಹುಂಡಿ‌ ಎಣಿಕೆ ಕಾರ್ಯದಿಂದಲೂ ಹಾಸನಾಂಬೆ ಶ್ರೀಮಂತೆ ಎಂದು ತೋರಿಸಿದ್ದಾಳೆ.

ಹುಂಡಿ‌ ಎಣಿಕೆ ಕಾರ್ಯದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ, ಬ್ಯಾಂಕ್ ಅಧಿಕಾರಿಗಳು, ಸ್ಕೌಟ್ ಅಂಡ್ ಗೈಡ್ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಇನ್ನು ಹಾಸನಾಂಬ ದೇವಾಲಯದಲ್ಲಿ ತಾಳಿಗಳು, ಚೈನು ಸರ, ಬಂಗಾರದ ಪದಕಗಳು, ಬಂಗಾರದ ಕಣ್ಣು, ಬೆಳ್ಳಿಯ ಚೈನುಗಳು ಸೇರಿದಂತೆ ವಿವಿಧ ಬಂಗಾರದ ಆಭರಣಗಳನ್ನು ಹುಂಡಿಗೆ ಹಾಕಲಾಗಿದೆ.

ಹಾಸನಾಂಬ ದೇವಾಲಯದ ಹುಂಡಿಯಲ್ಲಿ ನಮ್ಮ ದೇಶದ ಹಳೆಯ 2,000 ರೂ. ನೋಟು ಹಾಗೂ ಅಮೇರಿಕಾದ ಕರೆನ್ಸಿ ಡಾಲರ್‌ ನೋಟು ಕೂಡ ಪತ್ತೆಯಾಗಿದೆ.

ಹಾಸನಾಂಬೆ ದರ್ಶನೋತ್ಸವದಿಂದ ದಾಖಲೆಯ ಆದಾಯವನ್ನು ಗಳಿಸಿದೆ. ಈ ಹಿಂದೆಂದಿಗಿಂತಲೂ ಹೆಚ್ಚು ಆದಾಯವನ್ನು ಹಾಸನಾಂಬೆ ದೇವಾಲಯ ಪಡೆದಿದೆ.

Latest Videos

click me!