ಬೆಂಗಳೂರಲ್ಲಿ ವಾಸಿಸಲು ಯೋಗ್ಯ ಏರಿಯಾ ಯಾವುದು? ಬಹುಜನರ ಆಯ್ಕೆ ಇಲ್ಲಿದೆ ನೋಡಿ..!

First Published | Nov 11, 2023, 7:33 PM IST

ಬೆಂಗಳೂರು (ನ.11): ಅಂತಾರಾಷ್ಟ್ರೀಯ ಮಟ್ಟದಲ್ಲಿ ವಸತಿ ಉದ್ದೇಶಕ್ಕೆ ಉತ್ತಮ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಕೂಡ ಒಂದಾಗಿದೆ. ಇನ್ನು ನಮ್ಮ ದೇಶದಲ್ಲಿ ಬೆಂಗಳೂರು ವಸತಿ ಉದ್ದೇಶಕ್ಕೆ ಬೆಸ್ಟ್‌ ಸಿಟಿ ಎಂಬ ಖ್ಯಾತಿಯನ್ನೂ ಗಳಿಸಿದೆ. ಆದರೆ, ಈಗ ಬೆಂಗಳೂರಿನಲ್ಲಿ ವಸತಿ ಉದ್ದೇಶಕ್ಕೆ ಯಾವ ಏರಿಯಾ ಉತ್ತಮವಾಗಿದೆ ಎಂದು ಕೇಳಿದರೆ ನಿಮ್ಮ ಉತ್ತರವೇನು ಎಂದ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲಿಯೂ ಅತಿ ಹೆಚ್ಚು ಜನರು ವೋಟಿಂಗ್‌ ಮಾಡಿದ ಪ್ರದೇಶ ಯಾವುದೆಂಬ ಮಾಹಿತಿ ಇಲ್ಲಿದೆ ನೋಡಿ...

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ನಮ್ಮ ಬೆಂಗಳೂರು (32 ಸಾವಿರ ಫಾಲೋವರ್ಸ್‌) ಎಂಬ ಖಾತೆಯಿಂದ ಈ ಪ್ರಶ್ನೆಯನ್ನು ಕೇಳಲಾಗಿದೆ. ಅದರಲ್ಲಿ ಬೆಂಗಳೂರಿನ ಫೋಟೋವೊಂದನ್ನು ಅಳವಡಿಕೆ ಮಾಡಿ ನಿಮಗೆ ವಾಸಕ್ಕೆ ಯಾವ ಏರಿಯಾ ಉತ್ತಮವಾಗಿದೆ ಎಂದು ಕೇಳಿದ್ದಾರೆ.

ಇಲ್ಲಿದೆ ನೋಡಿ ಉತ್ತಮ ವಸತಿ ಪ್ರದೇಶಗಳು: Bengaluru Best residential Areas 

ನಮ್ಮ ಬೆಂಗಳೂರು ಖಾತೆ ಬಳಕೆದಾರರು which is the best area to stay in bengaluru? (ಬೆಂಗಳೂರಿನಲ್ಲಿ ವಾಸಕ್ಕೆ ಯಾವ ಏರಿಯಾ ಉತ್ತಮ?)  ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ 1,500ಕ್ಕೂ ಹೆಚ್ಚಿನ ಜನರು ಪ್ರತಿಕ್ರಿಯೆ ನೀಡಿದ್ದಾರೆ.
 

Latest Videos


ಸಾಮಾಜಿಕ ಜಾಲತಾಣದಲ್ಲಿ ಕೇಳಲಾದ ಪ್ರಶ್ನೆಗೆ ಸುಮಾರು 100ಕ್ಕೂ ಅಧಿಕ ಜನರು ಜಯನಗರ ಬೆಂಗಳೂರಿನಲ್ಲಿ ವಾಸಕ್ಕೆ ಉತ್ತಮ ಏರಿಯಾ ಎಂದು ಬರೆದುಕೊಂಡಿದ್ದಾರೆ. ಇದು ಬಹುಜನರ ಆಯ್ಕೆಯಾಗಿದೆ. 

ಜಯನಗರದ ನಂತರದ ಸ್ಥಾನವನ್ನು ಬಸವನಗುಡಿಗೆ ನಿಡಲಾಗಿದೆ. ಉಳಿದಂತೆ ಬನಶಂಕರಿ, ಇಂದಿರಾ ನಗರ, ನಾಯಂಡಹಳ್ಳಿ, ನಾಗರಬಾವಿ, ಕೋರಮಂಗಲ, ಸದಾಶಿವನಗರ, ಕಸವನಹಳ್ಳಿ, ಮಲ್ಲೇಶ್ವರ, ಕಲ್ಯಾಣನಗರ, ಕೆಂಗೇರಿ, ಬಿಟಿಎಂ ಲೇಔಟ್‌, ಎಲೆಕ್ಟ್ರಾನಿಕ್‌ ಸಿಟಿ, ಯಲಹಂಕವನ್ನೂ ಆಯ್ಕೆ ಮಾಡಿದ್ದಾರೆ.

ಬೆಂಗಳೂರಿನ ಕೇಂದ್ರ ಭಾಗ ಮೆಜೆಸ್ಟಿಕ್‌ಗೆ ಹತ್ತಿರದಲ್ಲಿರುವ ರಾಜಾಜಿನಗರವೂ ಕೂಡ ವಾಸಕ್ಕೆ ಉತ್ತಮವಾಗಿದೆ. ಇಲ್ಲಿ ಬಾಡಿಗೆ, ದಿನಬಳಕೆ ವಸ್ತುಗಳ ಖರೀದಿಗೆ ಸೂಕ್ತವಾಗಿದೆ ಎಂದು ತಿಳಿಸಿದ್ದಾರೆ.

ಕೋರಮಂಗಲವೂ ಉತ್ತಮ ವಸತಿ ತಾಣವಾಗಿದೆ. ಮುಂದುವರೆದು ಕಮ್ಮನಹಳ್ಳಿ, ಸಿಲ್ಕ್‌ ಬೋರ್ಡ್‌, ಯಶವಂತಪುರ, ಬಿಳೇಕಹಳ್ಳಿ, ವೈಟ್‌ ಫೀಲ್ಡ್‌, ಜೆಪಿ ನಗರ, ಹೆಣ್ಣೂರು, ಬೆಳ್ಳಂದೂರು, ಗೋವಿಂದರಾಜನಗರ, ಮಾರತಹಳ್ಳಿ, ಶಂಕರ ನಗರ, ಎಚ್‌ಆರ್‌ಬಿಆರ್‌ ಲೇಔಟ್‌, ದಾಸರಹಳ್ಳಿ, ಶಿವಾಜಿನಗರ, ವಿದ್ಯಾರಣ್ಯಪುರ ಇತ್ಯಾದಿ ಏರಿಯಾಗಳ ಹೆಸರುಗಳು ವಾಸಕ್ಕೆ ಹೆಚ್ಚು ಅನುಕೂಲಕರ ಪ್ರದೇಶಗಳು ಎಂದು ಕಮೆಂಟ್‌ ಮಾಡಿದ್ದಾರೆ.

ಉತ್ತರ ಕರ್ನಾಟಕದ ಜನರೇ ಬಹುಭಾಗ ವಾಸಿಸುವ ಏರಿಯಾ ವಿಜಯನಗರಕ್ಕೂ ಹೆಚ್ಚಿನ ಜನರು ವಾಸಕ್ಕೆ ಯೋಗ್ಯವೆಂದು ಕಮೆಂಟ್‌ ಮಾಡಿ ತಿಳಿಸಿದ್ದಾರೆ. 

ಬೆಂಗಳೂರಿನಲ್ಲಿ ಕೆಂಗೇರಿ ಮೋರಿ ಎಂದರೆ ಎಲ್ಲರೂ ಮೂಗು ಮುರಿಯುವವರೇ ಹೆಚ್ಚಾಗಿದ್ದಾರೆ. ಆದರೆ, ಅಲ್ಲಿನ ನಿವಾಸಿಗಳು ಮೋರಿ ಹೊರತಾಗಿ ವಾಸಕ್ಕೂ ಇಲ್ಲಿ ಉತ್ತಮ ವಾತಾವರಣ ಇದೆ ಎಂದು ಹೇಳಿದ್ದಾರೆ.

ರಾಜ್ಯ ರಾಜಧಾನಿಯ ಹೊರ ವಲಯಗಳಲ್ಲಿ ಒಂದಾದ ಟಿ.ದಾಸರಹಳ್ಳಿ ಗ್ರಾಮೀಣ ಪ್ರದೇಶದಂತಿದ್ದು, ಇತ್ತೀಚೆಗೆ ಕೈಗಾರಿಕೆ ಬಿಟ್ಟು ವಸತಿ ಉದ್ದೇಶಕ್ಕೂ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ.

ಮಾರತಹಳ್ಳಿ ಪ್ರದೇಶಕ್ಕೂ ಹೆಚ್ಚಿನ ಮತಗಳು ಬಂದಿವೆ. ಇಲ್ಲಿ ಸ್ಥಳೀಯ ಜನರ ವಸತಿಯ ಜೊತೆಗೆ ದೇಶದ ವಿವಿಧ ಕಡೆಗಳಿಂದ  ಬಂದ ಜನರಿಗೂ ಇಲ್ಲಿ ಉತ್ತಮ ವಸತಿ ತಾಣವಾಗಿದೆ ಎಂದು ತಿಳಿಸಿದ್ದಾರೆ.

click me!