ಶೃಂಗೇರಿಯ ಹನುಮಗಿರಿಯಲ್ಲಿ 32 ಅಡಿ ಎತ್ತರದ ಶಂಕರಾಚಾರ್ಯ ಪ್ರತಿಮೆ ಅನಾವರಣ, ಫೋಟೊಗಳು ಇಲ್ಲಿವೆ

Published : Nov 10, 2023, 07:21 PM ISTUpdated : Nov 10, 2023, 07:27 PM IST

ಕಾಫಿನಾಡ ಶೃಂಗೇರಿ ಶಾರದಾಂಭೆ ಕ್ಷೇತ್ರ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಇಷ್ಟು ದಿನ ಶೃಂಗೇರಿಯಲ್ಲಿ ಶಾರದಾಂಭೆ ದರ್ಶನ ಪಡೆಯುತ್ತಿದ್ದು ಭಕ್ತರು ಇನ್ಮುಂದೆ ಅದ್ವೈತ ಸಿದ್ಧಾಂತ ಪ್ರತಿಪಾದಕ ಶಂಕರಾಚಾರ್ಯರ ದರ್ಶನವನ್ನೂ ಪಡೆಯಬಹುದಾಗಿದೆ.

PREV
16
ಶೃಂಗೇರಿಯ ಹನುಮಗಿರಿಯಲ್ಲಿ 32 ಅಡಿ ಎತ್ತರದ ಶಂಕರಾಚಾರ್ಯ ಪ್ರತಿಮೆ ಅನಾವರಣ,  ಫೋಟೊಗಳು ಇಲ್ಲಿವೆ

ಕಾಫಿನಾಡ ಶೃಂಗೇರಿ ಶಾರದಾಂಭೆ ಕ್ಷೇತ್ರ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಇಷ್ಟು ದಿನ ಶೃಂಗೇರಿಯಲ್ಲಿ ಶಾರದಾಂಭೆ ದರ್ಶನ ಪಡೆಯುತ್ತಿದ್ದು ಭಕ್ತರು ಇನ್ಮುಂದೆ ಅದ್ವೈತ ಸಿದ್ಧಾಂತ ಪ್ರತಿಪಾದಕ ಶಂಕರಾಚಾರ್ಯರ ದರ್ಶನವನ್ನೂ ಪಡೆಯಬಹುದು.

26

45 ಕೋಟಿ ವೆಚ್ಚದ ಎರಡು ಎಕರೆ ವಿಸ್ತೀರ್ಣದಲ್ಲಿ ಬೃಹತ್ ಹಾಗೂ ಸುಂದರವಾಗಿ ನಿರ್ಮಾಣಗೊಂಡಿರೋ 32 ಅಡಿಯ ಶಂಕರಾಚಾರ್ಯರ ಪ್ರತಿಮೆ ಇಂದು ಲೋಕರ್ಪಣೆಗೊಂಡಿದೆ.

36

ಶಂಕರಾಚಾರ್ಯರ ಇಂಥ ಪ್ರತಿಮೆ ನಿರ್ಮಾಣ ಮಾಡಬೇಕೆಂಬುದು ಶೃಂಗೇರಿ ಮಠದ ಹಿರಿಯ ಗುರುಗಳಾದ ಶ್ರೀ ಭಾರತೀತೀರ್ಥ ಶ್ರೀಗಳ ಸಂಕಲ್ಪವಾಗಿದ್ದು. ಇದೀಗ ಅಂದುಕೊಂಡಂತೆ ಪ್ರತಿಮೆ ಅನಾವರಣಗೊಂಡಿದೆ.  ಶ್ರೀ ಭಾರತೀತೀರ್ಥ ಶ್ರೀಗಳು ಸನ್ಯಾಸತ್ವ ಸ್ವೀಕರಿಸಿದ ಸುವರ್ಣ ಮಹೋತ್ಸವದ ಹೊತ್ತಲ್ಲೆ ಶಂಕರಾಚಾರ್ಯರ ಸುಂದರ ಪ್ರತಿಮೆ ಅನಾವರಣಗೊಂಡಿದೆ.

46

ಇಂದು ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಉಭಯ ಜಗದ್ಗುರುಗಳು ಭಾಗವಹಿಸಿ ಶಂಕರರ ಪ್ರತಿಮೆಗೆ ಪೂಜೆ ಸಲ್ಲಿಸಿದರು..ಬೆಳಿಗ್ಗೆನಿಂದ ಮಾರುತಿ ಬೆಟ್ಟದಲ್ಲಿ ವಿವಿಧ ಪೂಜೆಗಳನ್ನು ನೆರೆವರಿಸಲಾಯಿತು. ಪ್ರತಿಮೆ ಅನಾರವಣ ಹಿನ್ನೆಲೆಯಲ್ಲಿ ಹೂವಿನ ಅಲಂಕಾರವನ್ನು ಮಾಡಲಾಗಿತ್ತು.

56

ಶಂಕರಾಚಾರ್ಯರ ಮೂರ್ತಿ ಸ್ಥಾಪನೆಗೆ ಬೆಂಗಳೂರಿನ ಹೊಸಕೋಟೆಯಿಂದ 750 ಟನ್ ತೂಕದ ಶಿಲೆ ತರಲಾಗಿತ್ತು. ಶಂಕರರು ಜೀವಿಸಿದ್ದ ಕಾಲಾವಧಿಗೆ ಹೊಂದುವಂತೆ ತಮಿಳುನಾಡಿನ ಪ್ರಸಿದ್ಧ ಶಿಲ್ಪಿ ಶಂಕರ ಸ್ಥಪತಿ 32 ಅಡಿ ಎತ್ತರದ ಮೂರ್ತಿ ನಿರ್ಮಿಸಿದ್ದಾರೆ.

66

ಈ ಹನುಮಗಿರಿ ಬೆಟ್ಟದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತ ವೀಕ್ಷಣೆಗೂ ವ್ಯವಸ್ಥೆ ಮಾಡಲಾಗಿದೆ. ಬೆಟ್ಟ ಹತ್ತಲು-ಇಳಿಯಲು ಎಸ್ಕಲೇಟರ್ ವ್ಯವಸ್ಥೆ ಅಳವಡಿಸಲಾಗಿದೆ. ಶಂಕರಾಚಾರ್ಯರ ಪ್ರತಿಮೆ ಜೊತೆ ಅವರ ನಾಲ್ವರು ಶಿಷ್ಯರಾದ ಸುರೇಶ್ವರಾಚಾರ್ಯರು, ತೋಟಕಾಚಾರ್ಯರು, ಪದ್ಮಪಾದಚಾರ್ಯರು, ಹಸ್ತಮಲಕಾಚಾರ್ಯರು ಮೂರ್ತಿಯೂ ಅನಾವರಣಗೊಂಡಿದೆ.

Read more Photos on
click me!

Recommended Stories