ಬೆಂಗಳೂರಿನ ಸ್ಯಾಂಕಿ ಟ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ: ಡಿಕೆಶಿ ವಿಶೇಷ ಪೂಜೆ

Published : Mar 21, 2025, 09:34 PM ISTUpdated : Mar 21, 2025, 09:36 PM IST

ವಾರಣಾಸಿಯ ಗಂಗಾ ಆರತಿ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನ ಸ್ಯಾಂಕಿ ಕೆರೆಯ ಬಳಿ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಚಾಲನೆ ನೀಡಿದರು.

PREV
16
ಬೆಂಗಳೂರಿನ ಸ್ಯಾಂಕಿ ಟ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ: ಡಿಕೆಶಿ ವಿಶೇಷ ಪೂಜೆ

ಬೆಂಗಳೂರು (ಮಾ.21): ಇಲ್ಲಿನ ಸ್ಯಾಂಕಿ ಕೆರೆಯ ಬಳಿ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಚಾಲನೆ ನೀಡಿದರು. ಇದಕ್ಕೂ ಮುನ್ನ ಶಿವಕುಮಾರ್​ ಅವರು ಕಾವೇರಿ ನದಿಯ ಉಗಮ ಸ್ಥಾನ ಭಾಗಮಂಡಲಕ್ಕೆ ಆಗಮಿಸಿ ತಾಯಿಗೆ ಪೂಜೆ ಸಲ್ಲಿಸಿದರು. 

26

ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, "ನಾಳೆ ವಿಶ್ವ ಜಲದಿನ ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಸ್ಯಾಂಕಿಟ್ಯಾಂಕಿ ಬಳಿ ಕಾವೇರಿ ಪೂಜೆ ಹಾಗೂ ಕಾವೇರಿ ಆರತಿ ನಡೆಸಲಾಗುವುದು. 

36

'ನಮ್ಮ ನೀರು, ನಮ್ಮ ಹಕ್ಕು' ಎಂದು ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿ ಇಲ್ಲಿಗೆ ಬಂದು ಪೂಜೆ ಸಲ್ಲಿಸಿದ್ದೆವು. ಅದೇ ರೀತಿ ಈಗ ಕಾವೇರಿ ಐದನೇ ಹಂತ ಕಾರ್ಯರೂಪಕ್ಕೆ ಬಂದಿದೆ. 

46

ಇಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೂ ಮುನ್ನ ಕಾವೇರಿ ತಾಯಿ ಉಗಮ ಸ್ಥಾನ ಭಾಗಮಂಡಲದಲ್ಲಿ ತಾಯಿಗೆ ಪೂಜೆ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದರು.

56

ಸ್ಯಾಂಕಿ ಟ್ಯಾಂಕ್‌ ಕೆರೆ ಬಳಿ ಸಂಜೆ 6.30ಕ್ಕೆ ಡಿಕೆ ಶಿವಕುಮಾರ್ ದಂಪತಿ, ಸಚಿವ ದಿನೇಶ್ ಗುಂಡೂರಾವ್ ಹಾಗೂ ಸಚಿವ ರಾಮಲಿಂಗರೆಡ್ಡಿ ಕಾವೇರಿ ಆರತಿ ಮಾಡಿದರು. ಅಲ್ಲದೇ ಸ್ಯಾಂಕಿ ಕೆರೆಯ ಮಧ್ಯೆದಲ್ಲಿ ಇರುವ ಇದು ತೇಲುವ ವೇದಿಕೆ. ಇದನ್ನು ಮುಂಬೈನಿಂದ ತರಸಲಾಗಿದೆ. ಇದು ಯಾವಾಗಲೂ ಇಲ್ಲಿ ಇರುವುದಿಲ್ಲ ಎಂದರು ಡಿಕೆಶಿ.

66

ಕಾವೇರಿ ಉಗಮ ಸ್ಥಾನ ಭಾಗಮಂಡಲದಲ್ಲಿ ಕಾವೇರಿ ನದಿಯ ನೀರನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಕೆ.ಆರ್.‌ಎಸ್.‌ ಡ್ಯಾಂ ನಲ್ಲೂ ಕಾವೇರಿ ಆರತಿ ಮಾಡುವ ಗುರಿಯಿದೆ. ಇದಕ್ಕಾಗಿ ಹಣ ಮೀಸಲಿಡಲಾಗಿದೆ  ಎಂದು ಡಿಕೆಶಿ ಹೇಳಿದ್ದರು.
 

Read more Photos on
click me!

Recommended Stories