ಹೊರನಾಡಿಗೆ ಭೇಟಿ ನೀಡಿ ತಾಯಿ ಅನ್ನಪೂರ್ಣೇಶ್ವರಿ ದರ್ಶನ ಪಡೆದ ತೇಜಸ್ವಿ-ಶಿವಶ್ರೀ ದಂಪತಿ

Published : Mar 15, 2025, 10:26 PM ISTUpdated : Mar 15, 2025, 10:28 PM IST

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕುಟುಂಬ ಸಮೇತರಾಗಿ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಪತ್ನಿ ಶಿವಶ್ರೀ ಸ್ಕಂದಪ್ರಸಾದ್ ಅವರೊಂದಿಗೆ ಆಗಮಿಸಿದ ಸೂರ್ಯ ದಂಪತಿಗೆ ದೇವಸ್ಥಾನದ ಆಡಳಿತ ಮಂಡಳಿ ಆತ್ಮೀಯ ಸ್ವಾಗತ ಕೋರಿತು.

PREV
15
ಹೊರನಾಡಿಗೆ ಭೇಟಿ ನೀಡಿ ತಾಯಿ ಅನ್ನಪೂರ್ಣೇಶ್ವರಿ ದರ್ಶನ ಪಡೆದ ತೇಜಸ್ವಿ-ಶಿವಶ್ರೀ ದಂಪತಿ

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕುಟುಂಬ ಸಮೇತರಾಗಿ ಇಂದು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡಿಗೆ ಭೇಟಿ ನೀಡಿ ತಾಯಿ ಅನ್ನಪೂರ್ಣೇಶ್ವರಿ ದರ್ಶನ ಪಡೆದುಕೊಂಡಿದ್ದಾರೆ. 

25
Tejasvi Surya , Shivasri

ತಂದೆ-ತಾಯಿ, ಮಡದಿಯೊಂದಿಗೆ ಆಗಮಿಸಿದ ತೇಜಸ್ವಿ ಸೂರ್ಯ ಅವರು ತಾಯಿ  ಅನ್ನಪೂರ್ಣೇಶ್ವರಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ದೇವಸ್ಥಾನದ ಆಡಳಿತ ಮಂಡಳಿ ದಂಪತಿಗೆ ಆತ್ಮೀಯ ಸ್ವಾಗತಕೋರಿದರು

35

ಹೊರನಾಡು ಧರ್ಮಕರ್ತ ಭೀಮೇಶ್ಚರ ಜೋಶಿಯವರು ತೇಜಸ್ವಿ‌ಸೂರ್ಯ ದಂಪತಿಗೆ ಆಶೀರ್ವಾದಿಸಿದರು. ತೇಜಸ್ವಿ ಸೂರ್ಯ ಅವರ ಧರ್ಮಪತ್ನಿ ಶಿವಶ್ರೀ ಸ್ಕಂದಪ್ರಸಾದ್ ತಮಿಳುನಾಡಿನ ಮೂಲದವರಾಗಿದ್ದು, ಗಾಯಕಿಯಾಗಿ ಜನಪ್ರಿಯತೆ ಪಡೆದುಕೊಂಡಿದ್ದಾರೆ.

45

ಮಾರ್ಚ್ 6ರಂದು ಬೆಂಗಳೂರಿನ ಹೊರವಲಯದ ಹೆಸರಘಟ್ಟದ ರೆಸಾರ್ಟ್‌ನಲ್ಲಿ ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಸ್ಕಂದಪ್ರಸಾದ್ ಮದುವೆ ಕರ್ನಾಟಕ ಮತ್ತು ತಮಿಳುನಾಡು  ಸಂಪ್ರದಾಯದಂತೆ ನಡೆದಿತ್ತು. ಮದುವೆಗೆ ಅತ್ಯಾಪ್ತರನ್ನು ಆಹ್ವಾನಿಸಲಾಗಿತ್ತು. 

55

ಮಾರ್ಚ್  9ರಂದು ಬೆಂಗಳೂರಿನ ಅರಮನೆಯ ಮೈದಾನದಲ್ಲಿ ಅದ್ಧೂರಿಯಾಗಿ ನಡೆದಿತ್ತು. ಕೇಂದ್ರ ಸಚಿವ ರಾಜನಾಥ್ ಸಿಂಗ್‌, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ನಟರಾದ ಯಶ್, ರಮೇಶ್ ಅರವಿಂದ್ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು

Read more Photos on
click me!

Recommended Stories