ಮಕ್ಕಳ ವಿಮಾನ ಪ್ರವಾಸಕ್ಕೆ ಶಿಕ್ಷಕರ,ದಾನಿಗಳ ಸಾಥ್
ಮಕ್ಕಳಿಗೆ ವಿಮಾನದ ಪ್ರಯಾಧ ಖರ್ಚುವೆಚ್ಚ ಬರಿಸೋದು ಕಷ್ಟವಾಗಿತ್ತು. ಹೀಗಾಗಿ ಮೊದಲು ಯಾರೆಲ್ಲಾ ಪ್ರವಾಸಕ್ಕೆ ಬರ್ತಾರೆ ಅನ್ನೋದನ್ನು ಲಿಸ್ಟ್ ಮಾಡಿದ ಶಿಕ್ಷಕರು, ಪ್ರತಿಯೊಬ್ಬ ವಿದ್ಯಾರ್ಥಿಗೆ ಕೇವಲ ಎರಡುವರೆ ಸಾವಿರ ರೂಪಾಯಿ ಹಣವನ್ನು ಪ್ರವಾಸಕ್ಕೆ ನೀಡಬೇಕು ಅಂತ ಹೇಳಿದ್ದರು. ಹೀಗಾಗಿ ಮೂವತ್ತೆರಡು ಮಕ್ಕಳು ಹಣ ನೀಡಿದ್ದರು. ಆದ್ರೆ ನಾಲ್ಕು ದಿನದ ಪ್ರವಾಸಕ್ಕೆ ಪ್ರತಿಯೊಬ್ಬರಿಗೂ ತಲಾ ಹತ್ತು ಸಾವಿರಕ್ಕೂ ಹೆಚ್ಚು ಹಣ ಖರ್ಚಾಗುತ್ತದೆ. ಹೀಗಾಗಿ ಆ ಹಣವನ್ನು ಸ್ವತ ತಾವೇ ತಮ್ಮ ಜೇಬಿನಿಂದ ಒಂದಿಷ್ಟು ಹಣವನ್ನು ಹಾಕಿದ್ರೆ, ಗ್ರಾಮಸ್ಥರು ಒಂದಿಷ್ಟು ಹಣ ಹೊಂದಿಸಿ ನೀಡಿದ್ದಾರೆ.ಶಿಕ್ಷಕರು, ಗ್ರಾಮಸ್ಥರ ಸಹಕಾರದಿಂದ ಮಕ್ಕಳು ನಾಲ್ಕು ದಿನದ ಪ್ರವಾಸಕ್ಕೆ ಹೋಗಿದ್ದಾರೆ.
ಕೊಪ್ಪಳದ ಸರ್ಕಾರಿ ಶಾಲೆಯ ಶಿಕ್ಷಕರು ಮತ್ತು ಗ್ರಾಮಸ್ಥರ ನಡೆ ಇದೀಗ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಇದೇ ರೀತಿ ಎಲ್ಲರು ತಮ್ಮ ಶಾಲೆಯ ಮಕ್ಕಳಿಗೆ ಅವಕಾಶ ಕಲ್ಪಿಸಿದ್ರೆ, ಬಡವರ ಮಕ್ಕಳು, ಸರ್ಕಾರಿ ಶಾಲೆಯ ಮಕ್ಕಳು ಕೂಡಾ ವಿಮಾನದಲ್ಲಿ ಹಾರಾಡಲಿಕ್ಕೆ ಸಾಧ್ಯವಾಗುತ್ತದೆ.
ವರದಿ- ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್