ಕರ್ನಾಟಕದ ಗಡಿಭಾಗದಲ್ಲಿದೆ ಮತ್ತೊಂದು ಜಗತ್ತು; ಇಲ್ಲಿದ್ದಾರೆ ಸೂರು ಇಲ್ಲದ ಸೋಲಿಗರು!

Published : Dec 05, 2024, 09:03 PM IST

 ಅವರೆಲ್ಲಾ ಕಾಡಿನ ಮಕ್ಕಳು ಸ್ವಾತಂತ್ರ್ಯ ಪೂರ್ವದಿಂದಲೂ ಕಾಡಿನಲ್ಲಿ ವಾಸಿಸುತ್ತಿದ್ದಾರೆ. ಸೋಲಿಗರು  ಸೋರುವ ಹಳೆಯ ಮನೆಯ ಮನೆ ಜೋಪುಡಿಗಳಲ್ಲಿ ಇಂದಿಗೂ ವಾಸಿಸುತ್ತಿದ್ದಾರೆ. ಇಂತಹ ಸೋಲಿಗರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ವಿಶೇಷ ಯೋಜನೆಯಡಿ ಮನೆಗಳನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.  

PREV
16
ಕರ್ನಾಟಕದ ಗಡಿಭಾಗದಲ್ಲಿದೆ ಮತ್ತೊಂದು ಜಗತ್ತು; ಇಲ್ಲಿದ್ದಾರೆ ಸೂರು ಇಲ್ಲದ ಸೋಲಿಗರು!

ಗಡಿ  ಜಿಲ್ಲೆ  ಚಾಮರಾಜನಗರದ  ಅರಣ್ಯ  ಹಾಗೂ  ಅರಣ್ಯದಂಚಿನಲ್ಲಿ  ಸುಮಾರು 32 ಸಾವಿರಕ್ಕೂ ಹೆಚ್ಚು ಬುಡಕಟ್ಟು ಸೋಲಿಗ ಕುಟುಂಬಗಳು ವಾಸ ಮಾಡುತ್ತಿವೆ. ಬಹುತೇಕ ಸೋಲಿಗರು ವಾಸ  ಮಾಡ್ತಿರುವ  ಮನೆಗಳು  ಸುಸ್ಥಿತಿಯಲ್ಲಿಲ್ಲ. ಚಿಕ್ಕ ಮಣ್ಣಿನ  ಗೋಡೆಯ  ಮನೆಗಳು  ಹಾಗೂ ಜೋಪುಡಿಗಳಲ್ಲಿ ಇಂದಿಗೂ ಕೂಡ ಸೋಲಿಗರು ವಾಸ ಮಾಡ್ತಿದ್ದಾರೆ.

26

ಅರಣ್ಯದಂಚಿನಲ್ಲಿರುವ  ಜೇನು ಕುರುಬರಿಗೆ ಮಾತ್ರ ಹಿಂದಿನಿಂದಲೂ ಸರ್ಕಾರದ ವತಿಯಿಂದ ಪಾರಂಪರಿಕವಾಗಿ ಅವರಿಗೆ 4.50 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲಾಗುತ್ತಿದೆ. ಆದ್ರೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಜೇನು ಕುರುಬ ಸಮುದಾಯಕ್ಕಿಂತ ಹೆಚ್ಚಾಗಿ ಬೇರೆ ಸಮುದಾಯದ ಸೋಲಿಗರು  ವಾಸ ಮಾಡಿಕೊಂಡು ಬರುತ್ತಿದ್ದಾರೆ. ಇತರ ಸಮುದಾಯದ ಸೋಲಿಗರಿಗೂ ಕೂಡ ಮನೆ ಕಟ್ಟಿಕೊಡಲೂ ಜಿಲ್ಲಾಡಳಿತ ಪ್ಲಾನ್ ಮಾಡಿದ್ದು, ಸರ್ಕಾರಕ್ಕೆ2995 ಮನೆ ನಿರ್ಮಿಸುವ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿದೆ.

36

ಇನ್ನೂ ಸೋಲಿಗರಿಗೆ ಮನೆ ನಿರ್ಮಿಸಿಕೊಡುವ ಬಗ್ಗೆ ಚಿಂತನೆ ನಡೆಸಿದ್ದ ಜಿಲ್ಲಾಡಳಿತ ಮೊದಲಿಗೆ ಸರ್ವೇ ಕಾರ್ಯ ನಡೆಸಿತ್ತು. ಈ ವೇಳೆ 243 ಕುಟುಂಬಗಳಿಗೆ ಮನೆಯಷ್ಟೇ ಅಲ್ಲ ನಿವೇಶನ ಕೂಡ ಇಲ್ಲದಿರುವುದು ಕಂಡು ಬಂದಿದೆ. ಅಂತಹ ಕುಟುಂಬಗಳಿಗೂ ಕೂಡ ನಿವೇಶನದ ಜೊತೆಗೆ ಮನೆ ನಿರ್ಮಿಸಿಕೊಡಲೂ ತೀರ್ಮಾನಿಸಲಾಗಿದೆ. ಒಟ್ಟಾರೆ ಈ ಯೋಜನೆಗೆ ಒಂದು ಮನೆಗೆ 5 ಲಕ್ಷದಂತೆ 3 ಸಾವಿರ ಮನೆಗಳಿಗೆ 150 ಕೋಟಿಯ ಅಂದಾಜು ವೆಚ್ಚ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕೊಟ್ಟಿದ್ದಾರೆ. ಇದಕ್ಕೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಕೂಡ ಕೈ ಜೋಡಿಸಿದ್ದಾರೆ. ಅಲ್ಲದೇ ಸರ್ಕಾರ ಅನುಮೋದನೆ ಕೊಟ್ರೆ ಈ ಯೋಜನೆಗೆ ಸಿದ್ದು ನಿವಾಸ ಯೋಜನೆ ಎಂದು ಹೆಸರಿಡಲೂ ಕೂಡ ಚಿಂತಿಸಿದ್ದಾರೆ.
 

46

ರ್ಕಾರದಿಂದ ಆದಿವಾಸಿಗಳಿಗಾಗಿ ಸಾಕಷ್ಟು ಯೋಜನೆಗಳಿವೆ.ಆದ್ರೆ ಆ ಯೋಜನೆಗಳೆಲ್ಲಾ ಎಲ್ಲಿ ಹೋದವು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಸೋಲಿಗರಿಗೆ ಈ ವಸತಿ ಯೋಜನೆಗಳು ತಲುಪುತ್ತಿಲ್ಲ. ಈಗಲೋ ಆಗಲೋ ಬೀಳುವಂತಿರುವ ಗೆದ್ದಲು ಹಿಡಿದಿರುವ ಹಳೇ ತೆಂಗಿನ ಗರಿ, ಪ್ಲಾಸ್ಟಿಕ್ ಹಾಳೆಗಳ ಹೊದಿಕೆಯ ಹುರುಕುಮುರುಕು ಜೋಪಡಿಗಳಲ್ಲೇ ಸೋಲಿಗರ ಬದುಕು ಕಳೆದು ಹೋಗ್ತಿದೆ. ಹಂದಿಗೂಡಿನಂತಿರುವ ಗುಡಿಸಲಿನಲ್ಲಿ ದಿನ ದೂಡ್ತಿದ್ದಾರೆ. 

56

ಗುಡಿಸಲಿಗೆ ವಿದ್ಯುತ್ ಸಂಪರ್ಕವೂ ಇಲ್ಲದೇಮತ್ತೊಂದೆಡೆ ಸೀಮೆಎಣ್ಣೆ ಸರಬರಾಜು ಕೂಡ ಕತ್ತಲಲ್ಲಿ ವಾಸಿಸುತ್ತಿದ್ದಾರೆ. ಎಲ್ಲಿ ಮೈಮೇಲೆ ಬೀಳುವುದೋ ಎಂಬ ಆತಂಕದಿ0ದಲೇ ಹಾಗೂ ವಿಷ ಜಂತುಗಳ ಭಯದಿಂದಲೇ ಜೀವವನ್ನು ಕೈಯಲ್ಲಿ ಹಿಡಿದು ಅರೆಬರೆ ನಿದ್ರೆಯಲ್ಲಿ ಕಾಲ ದೂಡಬೇಕಾದ ಕರಾಳ ಜೀವನ ಇಲ್ಲಿಯ ಜನರದ್ದು.   ಮಳೆ ಬಂದ್ರೆ ಜಾಗರಣೆಯೇ ಗಟ್ಟಿ ಅಂತಾರೆ.
 

66

ಒಟ್ನಲ್ಲಿ ಅರಣ್ಯ ಹಾಗೂ ಅರಣ್ಯದಂಚಿನಲ್ಲಿ ವಾಸಿಸುವ ಸೋಲಿಗರಿಗೆ ಸೂರನ್ನು ಒದಗಿಸಿಕೊಡಲೂ ಜಿಲ್ಲಾಡಳಿತ ಸರ್ಕಾರಕ್ಕೆ ವಿಶೇಷ ಪ್ರಸ್ತಾವನೆ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಡಿ ಜನರ ಕಷ್ಟಗಳನ್ನು ಅರಿತಿದ್ದಾರೆ. ಆದ್ರಿಂದ ಸಿಎಂ ಸಿದ್ದರಾಮಯ್ಯ ಹಾಗೂ ಸಂಪುಟ ಈ ವಿಶೇಷ ಯೋಜನೆಗೆ ಅಸ್ತು  ಅಂತಾರಾ ಅಥವಾ ಇಲ್ವಾ ಅನ್ನೋದ್ನ ಕಾದುನೋಡಬೇಕಾಗಿದೆ.

ವರದಿ - ಪುಟ್ಟರಾಜು. ಆರ್. ಸಿ.  ಏಷಿಯಾನೆಟ್  ಸುವರ್ಣ  ನ್ಯೂಸ್ ,  ಚಾಮರಾಜನಗರ.
 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories