ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಗ್ರಾಮದ ಜನರ ಕಥೆ-ವ್ಯಥೆ ಇದು. ಎರಡರಲ್ಲಿ ಯಾವುದೇ ಜಿಲ್ಲಾ ಕೇಂದ್ರ ಹೋಗಬೇಕು ಅಂದ್ರು ನೂರು ಕಿ.ಮೀ. ಗಡಿ ದಾಟಲೇ ಬೇಕು. ಕಾಡಂಚಿನ ಕುಗ್ರಾಮ. ದಟ್ಟ ಕಾಡಿನ ನಡುವೇ ಇರೋ ಗ್ರಾಮಗಳು. ಕೆಲವರು ಚಿಕ್ಕಮಗಳೂರು ಜಿಲ್ಲೆ ಅಂದ್ರೆ, ಕೆಲವರು ನಮ್ದು ದಕ್ಷಿಣ ಕನ್ನಡ ಅಂತಾರೇ. ಘಾಟಿಯ ಮಧ್ಯೆ ನಿತ್ಯ ಅಲ್ಲಿಗೆ ಹೋಗುವ ಪ್ರವಾಸಿಗರು ನೂರಲ್ಲ... ಸಾವಿರಾರು... ನೇತ್ರಾವತಿ ಪೀಕ್ ಅಂದ್ರೆ ನೇತ್ರಾವತಿ ಉಗಮ ಸ್ಥಾನ. ನೇತ್ರಾವತಿ ಪಿಕ್ ಇರೋ ಸ್ಥಳಕ್ಕೆ ಹೋಗೋ ರಸ್ತೆಯ ಸ್ಥಿತಿ ಮಾತ್ರ ಆಯೋಮಯ.
ಈ ರಸ್ತೆ ಪ್ರವಾಸಿಗರಿಗೆನೋ ಖುಷಿ ಕೊಡಬಹುದು. ಆದರೆ, ನಿತ್ಯ ಓಡಾಡೋ ಪ್ರವಾಸಿಗರಿಗೆ ನರಕ. ಯಾಕಂದ್ರೆ, ಪ್ರವಾಸಿಗರು ಬರೋದು ಒಂದೇ ಸಲ. ಆದ್ರೆ, ಈ ರಸ್ತೆಯನ್ನೇ ನಂಬಿರೋರು 70 ಕುಟುಂಬಗಳು. ಸ್ವಾತಂತ್ರ್ಯ ಬಂದಾಗಿನಿಂದಲೂ ಈ ನರಕಯಾತನೆಯನ್ನ ನೋಡ್ತಾನೆ ಇದ್ದಾರೆ. ಅನುಭವಿಸುತ್ತಿದ್ದಾರೆ. ಯಾಕಂದ್ರೆ, ಅಲ್ಲಿಗೆ ಹೋಗೋದು ಫೋರ್ ವಿಲ್ ಜೀಪ್ ಗಳು ಮಾತ್ರ. ಬೇರೆ ಯಾವುದೇ ವಾಹನಗಳು ಹೋಗೋಕೆ ಇರ್ಲಿ ಆ ರಸ್ತೆಗೆ ಎಂಟ್ರಿ ಕೊಡೋಕು ಭಯ ಬಿಳ್ತಾವೇ. ಅಂತಹ ದುರ್ಗಮ ಹಾದಿಯಲ್ಲಿ ಬದುಕು ಕಟ್ಟಿಕೊಂಡವರು 70 ಕುಟುಂಬದ ಜನ.