ಗೋವುಗಳ ರಕ್ಷಣೆಗೆ ದಿಟ್ಟ ಹೆಜ್ಜೆ ಇಟ್ಟ ಸರ್ಕಾರ

First Published | Nov 6, 2021, 7:26 AM IST

ಬೆಂಗಳೂರು(ನ.06):  ದೀಪಾವಳಿ(Deepavali) ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಬಲಿಪಾಡ್ಯಮಿಯಂದು ಗೋಪೂಜೆ(Gopooja) ನಡೆಸಲು ಸರ್ಕಾರ ಮಾಡಿಕೊಂಡ ಮನವಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನ ವಿವಿಧೆಡೆಯಲ್ಲೂ ಗೋಪೂಜೆ ನೆರವೇರಿಸುವ ಮೂಲಕ ಸರ್ಕಾರ ಮಹತ್ವಾಕಾಂಕ್ಷೆಯ ಕಾರ್ಯಕ್ರಮಕ್ಕೆ ಸಾಥ್ ನೀಡಲಾಗಿದೆ. 

ಗೋವಿಂದರಾಜನಗರ ಮತ್ತು ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಚಿವ ವಿ.ಸೋಮಣ್ಣ(V Somanna) ಆಯೋಜನೆ ಮಾಡಿದ್ದ ಗೋಪೂಜೆ ಕಾರ್ಯಕ್ರಮದಲ್ಲಿ ಬಿಜೆಪಿ(BJP) ಕಾರ್ಯಕರ್ತರು ಭಾಗವಹಿಸಿದ್ದರು. ಮಹಿಳಾ ಮೋರ್ಚಾ ಮತ್ತು ಯುವಮೋರ್ಚಾ ಕಾರ್ಯಕರ್ತರ ನೇತೃತ್ವದಲ್ಲಿ ಗೋಪೂಜೆ ನಡೆಸಲಾಯ್ತು. ಗೋವಿಗೆ(Cow) ಪೂಜೆ ಸಲ್ಲಿಸಿ ಗೌರವ ಸಲ್ಲಿಸಲಾಯಿತು. ಜೊತೆಗೆ ಬಿಜೆಪಿ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿಕೊಂಡು ದೀಪಾವಳಿ ಶುಭಾಷಯವನ್ನು ವಿನಿಮಯ ಮಾಡಿಕೊಂಡಿದ್ದಾರೆ. 

ಕರ್ನಾಟಕ(Karnataka) ಈಗಾಗಲೇ ಗೋ‌ಹತ್ಯೆ ನಿಷೇಧವಾಗಿದೆ(Cow Slaughter). ಇದೀಗ ಬಿಜೆಪಿ ಸರ್ಕಾರ(BJP Government) ಮತ್ತೊಂದು ಮಹತ್ತರ ಘೊಷಣೆಯೊಂದಿಗೆ ಗೋವುಗಳ ರಕ್ಷಣೆ ಮತ್ತು ಅಭಿವೃದ್ಧಿಗೆ ಹೆಜ್ಜೆ ಹಾಕಿದೆ. ಬೆಂಗಳೂರು(Bengaluru) ಪೂರ್ವ ತಾಲೂಕಿನ ಹೂಡಿ ಗ್ರಾಮದ ನಂದೀಶ್ವರ ದೇವಾಲಯ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್ ಹೂಡಿ ಪ್ರಖಂಡ ವತಿಯಿಂದ ಗೋ ಪೂಜೆ ಅಯೋಜಿಸಲಾಗಿತ್ತು. ಸುತ್ತಮುತ್ತಲಿನ ಗೋ ಭಕ್ತರು ಇತರೇ ಹಿಂದೂ ಸಂಘಟನೆಗಳ‌ ಕಾರ್ಯಕರ್ತರು ಭಾಗವಹಿಸಿದ್ದರು.

Latest Videos


ದೀಪಾವಳಿಯಂದೇ ಈಗಾಗಲೇ ರಾಜ್ಯದಲ್ಲಿ ಕೆಲವು ಕಡೇ ಗೋವುಗಳ ಪೂಜಿಸುವ ಪದ್ದತಿಯಿದೆ. ಇದೀಗ ಸರ್ಕಾರವೇ ಮುಜರಾಯಿ ದೇವಾಲಯಗಳಲ್ಲಿ ಗೋ ಪೂಜೆ ಮಾಡುವ ಮಹತ್ತರ ನಿರ್ದಾರ ಗೋ ಹತ್ಯೆ ನಿಷೇದಕ್ಕೆ ಮತ್ತಷ್ಟು ಶಕ್ತಿ ತುಂಬಿದೆ ಮತ್ತು ಗೋ ರಕ್ಷಕಕರಿಗೆ ಇದೊಂದು ಉತ್ತಮ ಅವಕಾಶವಾಗಿದೆ, ಇನ್ನೂ ಹಲವು ವರ್ಷಗಳಿಂದ ವಿಶ್ವ ಹಿಂದೂ ಪರಿಷತ್(Vishva Hindu Parishad) ಕಾರ್ಯಕರ್ತರು ಈಗಾಗಲೇ ಗೋ ಪೂಜೆ ಮಾಡುತ್ತಿದ್ದೇವೆ ಇದು ನಮಗೆ ಇನ್ನಷ್ಟು ಶಕ್ತಿ ನೀಡುತ್ತಿದೆ ಎಂದು ಭಕ್ತರೊಬ್ಬರು ತಿಳಿಸಿದ್ದಾರೆ. 

ಬಲಿಪಾಡ್ಯಮಿ ಹಬ್ಬದಂದು ಮುಜರಾಯಿ ದೇವಾಲಯಗಳಲ್ಲಿ(Temple) ಗೋಪೂಜೆ ನೆರವೇರಿಸಲು ರಾಜ್ಯ ಸರ್ಕಾರ ಅದೇಶಿಸಿರುವಂತೆ ಎಲ್ಲೆಡೆ ಗೋ ಪೂಜೆ ನೆರವೇರಿಸುತ್ತಿರುವುದು  ಸಂತಸ ತಂದಿದೆ ಎಂದು ರಾಮಭಕ್ತ ಮಂಜುನಾಥ ರವರು ಹರ್ಷ ವ್ಯಕ್ತಪಡಿಸಿದ್ದಾರೆ.

click me!