ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ರಾಜ್ಯದ ವಿವಿಧೆಡೆ ಇಂದು ಸಂಭ್ರಮಾಚರಣೆ ಇದ್ದು ವಿಭಿನ್ನವಾಗಿ ಕನ್ನಡದ ಬಾವುಟ ಹಾರಾಡಿದೆ. ಎಲ್ಲೆಲ್ಲಿ ಹೇಗಿದೆ..?
ಇಂದು ಕನ್ನಡ ರಾಜ್ಯೋತ್ಸವ ಹಿನ್ನೆಲೆ ಬಳ್ಳಾರಿಯ ಕೋಟೆ ಮೇಲೆ ನವ ಕರ್ನಾಟಕ ಯುವಶಕ್ತಿ ಸಂಘಟನೆಯಿಂದ 66 ಅಡಿ ಎತ್ತರದ ಕನ್ನಡದ ಬಾವುಟವನ್ನು ಹಾರಿಸಲಾಯಿತು
ಕಾರ್ಮಿಕ ಇಲಾಖೆ ಸಚಿವ ಶಿವರಾಮ್ ಹೆಬ್ಬಾರ್ ಕನ್ನಡ ಬಾವುಟವನ್ನು ಹಾರಿಸಿ ಕನ್ನಡ ನಾಡಿನ ಹುಟ್ಟು ಹಬ್ಬ ಕರುನಾಡ ರಾಜ್ಯೋತ್ಸವವನ್ನು ಆಚರಿಸಿದರು
ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಮುರ್ಡೇಶ್ವರ ಅರಬ್ಬಿ ಸಮುದ್ರದಲ್ಲಿ ಸ್ಪೀಡ್ ಬೋಟ್ ಮೇಲೆ ಹಾರಿದ ಕನ್ನಡದ ಬಾವುಟ ಸುಂದರ ದೃಶ್ಯ
ನೇತ್ರಾಣಿ ಸಮುದ್ರದಾಳದಲ್ಲಿ ಸ್ಕೂಬಾ ಡೈವರ್ ಗಳಿಂದ ರಾಜ್ಯೋತ್ಸವ. ಸಮುದ್ರದದ ಆಳದಲ್ಲಿ ಕನ್ನಡ ಬಾವುಟವನ್ನು ಹಾರಿಸುವ ಮೂಲಕ ಕನ್ನಡಾಭಿಮಾನ ಮೆರೆದರು
ರಾಜ್ಯದಲ್ಲಿ ಎಲ್ಲೆಡೆ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ನಡೆಯುತ್ತಿದ್ದರೆ ಸಮುದ್ರದದ ಆಳದಲ್ಲಿ ಕನ್ನಡ ಬಾವುಟ ಹಾರಿಸಿ ವಿಶೇಷವಾಗಿ ಆಚರಣೆ ಮಾಡಲಾಯಿತು
ಸಮುದ್ರದ ಆಳದಲ್ಲಿಯೂ ಹಳದಿ ಕೆಂಪು ಬಣ್ಣದ ನಮ್ಮ ಕನ್ನಡದ ಬಾವುಟ ಹಾರಾಡಿತು. ಇಲ್ಲಿಯೂ ಕನ್ನಡ ರಾಜ್ಯೋತ್ಸವದ ಆಚರಣೆ ಸಂಭ್ರಮದಿಂದ ನಡೆಯಿತು
Suvarna News