ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಸರಣಿ ಅಪಘಾತದಲ್ಲಿ ಮಾಜಿ ಶಾಸಕ ಕೆಬಿ ಚಂದ್ರಶೇಖರ್ ಕಾರು ಜಖಂ

Published : Jun 06, 2026, 07:19 PM IST

ಬೆಂಗಳೂರು ಮೈಸೂರು ಎಕ್ಸ್‌ಪ್ರೇಸ್‌ವೇನಲ್ಲಿ ಸರಣಿ ಅಪಘಾತ ಸಂಭವಿಸಿದೆ. 5ಕ್ಕೂ ಹೆಚ್ಚು ವಾಹನಗಳು ಅಪಘಾಕ್ಕೀಡಾಗಿದೆ. ಅಪಘಾತದಲ್ಲಿ ಮಾಜಿ ಶಾಸಕ ಸಂಚರಿಸುತ್ತಿದ್ದ ಕಾರು ಜಖಂ ಗೊಂಡಿದೆ. 

PREV
15
5ಕ್ಕಕೂ ಹೆಚ್ಚು ವಾಹನಗಳ ಸರಣಿ ಅಪಘಾತ

ಬೆಂಗಳೂರು ಮೈಸೂರು ಎಕ್ಸ್‌ಪ್ರೇಸ್ ವೇನಲ್ಲಿ ಸರಣಿ ಅಪಘಾತ ಸಂಭವಿಸಿದೆ. 5ಕ್ಕೂ ಹೆಚ್ಚು ಕಾರುಗಳು, ಗೂಡ್ಸ್ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ರಾಮನಗರದ ಜಯಪುರು ಗೇಟ್ ಬಳಿಕ ಅಪಘಾತ ಸಂಭವಿಸಿದೆ. ಅತೀ ವೇಗದಲ್ಲಿದ್ದ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಮಾಜಿ ಶಾಸಕ ಕೆಬಿ ಚಂದ್ರಶೇಖರ್ ಚಲಿಸುತ್ತಿದ್ದ ಕಾರು ಜಖಂ ಗೊಂಡಿದೆ.

25
ಮಾಜಿ ಶಾಸಕ ಚಂದ್ರಶೇಕರ್ ಅಪಾಯದಿಂದ ಪಾರು

ಕೆಆರ್ ಪೇಟೆ ಮಾಜಿ ಶಾಸಕರ ಕೆಬಿ ಚಂದ್ರಶೇಕರ್ ಫಾರ್ಚುನರ್ ಕಾರಿನ ಮೂಲಕ ಇದೇ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮಾಜಿ ಶಾಸಕರ ಕಾರಿನ ಮುಂಭಾಗ ಜಖಂಗೊಂಡಿದೆ. ಅದೃಷ್ಠವಶಾತ್ ಕೆಬಿ ಚಂದ್ರಶೇಖರ್ ಅಪಾಯದಿಂದ ಪಾರಾಗಿದ್ದಾರೆ.

35
ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜು

ಕೆಬಿ ಚಂದ್ರಶೇಖರ್ ಕಾರಿನ ಮುಂಭಾಗ ಹಾಗೂ ಕೋ ಡ್ರೈವರ್ ಭಾಗ ಸಂಪೂರ್ಣ ನಜ್ಜು ಗುಜ್ಜಾಗಿದೆ. ವೇಗವಾಗಿ ಸಾಗುತ್ತಿದ್ದ ವೇಳೆ ಆ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ಕೆಬಿ ಚಂದ್ರಶೇಖರ್ ಬೇರೆ ವಾಹನದಲ್ಲಿ ಪ್ರಯಾಣ ಮುಂದುವರಿಸಿದ್ದಾರೆ.

45
ಕಾರು ಚಾಲಕರು ಸೇರಿ ಪ್ರಯಾಣಿಕರಿಗೆ ಗಾಯ

ಸರಣಿ ಅಪಘಾತದಲ್ಲಿ ಕಾರಿನ ಚಾಲಕರು, ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ತಕ್ಷಣವೇ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಅತೀ ವೇಗವಾಗಿದ್ದ ಕಾರಣ ಕೆಲ ಕಾರುಗಳು ಸಂಪೂರ್ಣವಾಗಿ ಜಖಂಗೊಂಡಿದೆ. ಹೆದ್ದಾರಿಯಲ್ಲಿ ಮತ್ತೆ ಅಪಘಾತಗಳ ಸರಣಿ ಹೆಚ್ಚಾಗುತ್ತಿದೆ.

55
ಸುಗಮ ಸಂಚಾರಕ್ಕೆ ವಾಹನಗಳ ತೆರವು

ಅಪಘಾತ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಾಮನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶನಿವಾರ ಆಗಿರುವ ಕಾರಣ ಹೆದ್ದಾರಿಯಲ್ಲಿ ವಿಪರೀತ ವಾಹನಗಳು ಪ್ರಯಾಣಿಸುತ್ತಿದೆ. ಹೀಗಾಗಿ ತಕ್ಷಣವೇ ಕಾರ್ಯಪ್ರವತ್ತರಾದ ಪೊಲೀಸರು ವಾಹನಗಳನ್ನು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories