Dhruv Jatti-Amogha Shettar: ಕೋಟಿ ಕೋಟಿ ಇದ್ದರೂ ಮಾಜಿ ಸಿಎಂ ಕುಟುಂಬದ ನಡುವೆ 'ವಚನ ಮಾಂಗಲ್ಯ'ಬಂಧ!

First Published | Dec 6, 2024, 5:08 PM IST

ಕರ್ನಾಟಕದ ಇಬ್ಬರು ಮಾಜಿ ಸಿಎಂಗಳ ಕುಟುಂಬಗಳಾದ ಬಿ.ಡಿ. ಜತ್ತಿ ಅವರ ಮರಿ ಮೊಮ್ಮಗ ಧ್ರುವ್ ಜತ್ತಿ ಮತ್ತು ಜಗದೀಶ್ ಶೆಟ್ಟರ್ ಅವರ ಸಹೋದರ ಪ್ರದೀಪ್ ಶೆಟ್ಟರ್ ಅವರ ಪುತ್ರಿ ಅಮೋಘಾ ಶೆಟ್ಟರ್ ವಚನ ಮಾಂಗಲ್ಯದ ಮೂಲಕ ಸರಳ ವಿವಾಹವಾಗಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಈ ವಿವಾಹದ ಆರತಕ್ಷತೆ ಬೆಂಗಳೂರಿನಲ್ಲಿ ನಡೆಯಲಿದೆ.

ಕೋಟಿ ಕೋಟಿ ಹಣವಿದ್ದರೂ, ಕರ್ನಾಟಕದ ಇಬ್ಬರು ಮಾಜಿ ಸಿಎಂಗಳೂ ಹಾಗೂ ಲಿಂಗಾಯತ ಸಮುದಾಯದ ಪ್ರಮುಖ ರಾಜಕೀಯ ಕುಟುಂಬದ ನಡುವೆ ವಚನ ಮಾಂಗಲ್ಯದ ಬಂಧವಾಗಿದೆ. 

ಕರ್ನಾಟಕದ ಮಾಜಿ ಸಿಎಂ ಹಾಗೂ ರಾಷ್ಟ್ರಪತಿ ಹುದ್ದೆಗೇರಿದ ಮೊದಲ ಕನ್ನಡಿಗ ಬಿಡಿ ಜತ್ತಿ ಅವರ ಮರಿ ಮೊಮ್ಮಗ ಧ್ರುವ್‌ ಜತ್ತಿ ಹಾಗೂ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರ ಸಹೋದರ ಪ್ರದೀಪ್‌ ಶೆಟ್ಟರ್‌ ಅವರ ಪುತ್ರಿ ಅಮೋಘಾ ಶೆಟ್ಟರ್‌ ಅವರ ವಾಹ ಅತ್ಯಂತ ಸರಳವಾಗಿ ನೆರವೇರಿದೆ.

Tap to resize

ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ವಕ್ತಾರ ಕೂಡ ಆಗಿರುವ ಧ್ರುವ್‌ ಜತ್ತಿ ಹಾಗೂ ಅಮೋಘಾ ಶೆಟ್ಟರ್‌ ವಿವಾಹ  ಗುರುವಾರ ಹುಬ್ಬಳ್ಳಿಯ ನವೀನ್‌ ಹೋಟೆಲ್‌ನಲ್ಲಿ ಅತ್ಯಂತ ಸರಳವಾಗಿ ನಡೆದಿದೆ.

ಇಬ್ಬರೂ ಕೂಡ ವಚನ ಮಾಂಗಲ್ಯದ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಫೋಟೋಗಳನ್ನು ಹಂಚಿಕೊಂಡಿರುವ ಧ್ರುವ್‌ ಜತ್ತಿ, 'ಎಮ್ಮವರು ಬೆಸಗೊಂಡಡೆ ಶುಭಲಗ್ನವೆನ್ನಿರಯ್ಯಾ, ರಾಶಿಕೂಟ ಋಣಸಂಬಂಧವುಂಟೆಂದು ಹೇಳಿರಯ್ಯಾ, ಚಂದ್ರಬಲ ತಾರಾಬಲವುಂಟೆಂದು ಹೇಳಿರಯ್ಯಾ, ನಾಳಿನ ದಿನಕಿಂದನ ದಿನ ಲೇಸೆಂದು ಹೇಳಿರಯ್ಯಾ, ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯಾ' ಎಂದು ಬರೆದುಕೊಂಡಿದ್ದಾರೆ.
 

ರಾಜ್ಯದಲ್ಲಿ ರಾಜಕೀಯವನ್ನು ಮೀರಿ ನಾಯಕರು ಬೀಗತನ ಬೆಳೆಸಿದ್ದು ಇದು ಮೊದಲೇನಲ್ಲ. ಕರ್ನಾಟಕದಲ್ಲಿ ಹಲವು ಮುಖಂಡರ ನಡುವೆ ಪಕ್ಷಾತೀತವಾಗಿ ಮದುವೆಯ ಮೈತ್ರಿಗಳು ಆಗಿದೆ. 

ಅದರಲ್ಲಿ ಧ್ರುವ್‌ ಜತ್ತಿ ಹಾಗೂ ಅಮೋಘಾ ಶೆಟ್ಟರ್‌ ಜೋಡಿ ಹೊಸ ಸೇರ್ಪಡೆ. ಧ್ರುವ್‌ ಜತ್ತಿ ಪ್ರಸ್ತುತ ಕಾಂಗ್ರೆಸ್‌ ವಕ್ತಾರರಾಗಿ ಕೆಲಸ ಮಾಡುತ್ತಿದ್ದಾರೆ. ಡಿಸೆಂಬರ್‌ 5 ರಂದು ಸರಳವಾಗಿ ಮದುವೆ ನಡೆದಿದ್ದು, ಡಿ. 7 ರಂದು ಬೆಂಗಳೂರಿನಲ್ಲಿ ಆರತಕ್ಷತೆ ಸಮಾರಂಭ ನಡೆಯಲಿದೆ.
 

ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ಗೆ ಸೇರ್ಪಡೆಯಾದ ಬಳಿಕ ಧ್ರುವ್‌ ಜತ್ತಿ ಅವರನ್ನು ಭೇಟಿಯಾಗಿದ್ದರು. ಕಾಂಗ್ರೆಸ್‌ಪಕ್ಷದಿಂದ ವಿಧಾನ ಪರಿಷತ್‌ಗೆ ಅವರು ಆಯ್ಕೆಯಾದ ಕೆಲವೇ ತಿಂಗಳಲ್ಲಿ ಇಬ್ಬರ ನಡುವೆ ಬೀಗತನ ಏರ್ಪಟ್ಟಿದೆ. 

ರಾಜ್ಯದ ರೈತರಿಗೆ ಹೊಸ ಟ್ಯಾಕ್ಸ್‌; ಖನಿಜ ಹೊಂದಿರುವ ಭೂಮಿಗೆ ಇನ್ನು ತೆರಿಗೆ

ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಹಾಗೂ ವಕ್ತಾರನಾಗಿ ಮಾತ್ರವಲ್ಲದೆ, ಜತ್ತಿ ಫೌಂಡೇಷನ್‌ನಲ್ಲಿ ಮಾಡುತ್ತಿದ್ದ ಕಾರ್ಯದಿಂದ ಜಗದೀಶ್‌ ಶೆಟ್ಟರ್‌ಗೆ ಇಷ್ಟವಾಗಿದ್ದ ಹುಡುಗನನ್ನು ಈಗ ಅಳಿಯನನ್ನಾಗಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

3 ಕೋಟಿ ಎಫ್‌ಡಿ ಹಣ ಕದ್ದ ಎಚ್‌ಡಿಎಫ್‌ಸಿ ಬ್ಯಾಂಕ್‌ ಉದ್ಯೋಗಿ, ಆರ್‌ಬಿಐಗೆ ನೋಟಿಸ್‌ ಕಳಿಸಿದ ಕೋರ್ಟ್‌!

ಎರಡು ಸಲ ಬಿಜೆಪಿಯಿಂದ ವಿಧಾನಪರಿಷತ್‌ಗೆ ಆಯ್ಕೆಯಾಗಿರುವ ಪ್ರದೀಪ್‌ ಶೆಟ್ಟರ್‌ ಅವರ ಹಿರಿಯ ಪುತ್ರಿ ಅಮೋಘಾ ಶೆಟ್ಟರ್‌. ಲಿಂಗಾಯತ ಸಮುದಾಯದಲ್ಲಿ ಜತ್ತಿ ಕುಟುಂಬ ಹಾಗೂ ಶೆಟ್ಟರ್‌ ಕುಟುಂಬ ಪ್ರಮುಖ ರಾಜಕೀಯ ಕುಟುಂಬವಾಗಿ ಗುರುತಿಸಿಕೊಂಡಿದೆ.

Latest Videos

click me!