ಜಿಲ್ಲೆಯಲ್ಲೇ ಅತಿದೊಡ್ಡ ಕೆರೆ ಅನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಆದರೆ ಕರೆಯಲ್ಲಿ ಮಳೆಗಾಲದಲ್ಲಿ ಸಾಕಷ್ಡು ನೀರು ಸಂಗ್ರಹ ವಾದರೂ ಆ ನೀರು ಜನಸಾಮಾನ್ಯರಿಗೆ ಕುಡಿಯಲು ಜನಜಾನುವಾರುಗಳಿಗೆ ಸಿಗ್ತಿಲ್ಲ ಅನ್ನೋ ಕೊರಗು ಗ್ರಾಮಸ್ಥರದ್ದಾಗಿದೆ.ಕಳೆದ 2019 ರಲ್ಲಿ ಕೆರೆಯ ಎಡದಂಡೆ ಕಾಲುವೆ ದುರಸ್ತಿ, ಕಟ್ಟಡಗಳು ಮತ್ತು ವೇಸ್ಟ ವಿಯರನ ಸುಧಾರಣೆ ಪುನರ್ ನಿರ್ಮಾಣ ಕಾಮಗಾರಿಯನ್ನ ಮಾಡಬೇಕಿದೆ ಸದ್ಯ ಕಿನಾಲು ಮಳೆಯಲ್ಲಿ ಕೊಚ್ಚಿ ಹೋಗಿ ಹಾಳಾಗಿದ್ದು ಅದೆ ಕಿನಾಲನ್ನ ಸದ್ಯ ಮರು ನಿರ್ಮಾಣ ಮಾಡಬೇಕು ಎಂದು ರೈತರ ಒತ್ತಾಯವಾಗಿತ್ತು ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್(Santosh lad) ಅವರಿಗೂ ಗ್ರಾಮಸ್ಥರು ಮನವಿ ಮಾಡಿಕ್ಕೊಂಡಿದ್ದಾರೆ ಆದರೆ ಎನ್ ಪ್ರಯೋಜನೆ ಅನ್ನೋ ಹಾಗೆ ಆಗಿದೆ ಇಲ್ಲಿಯ ಜನರದ್ದು.
ಕಳೆದ 3 ವರ್ಷಗಳಿಂದ ಸಣ್ಣ ನೀರಾವರಿ ಇಲಾಖೆಯಿಂದ ಕಾಮಗಾರಿಯನ್ನ ಮಾಡಲು 6 ಕೋಟಿ ಹಣವನ್ನ ಹಿಂದಿನ ಬಿಜೆಪಿ ಸರಕಾರದಲ್ಲಿ ಬಿಡುಗಡೆಯಾಗಿದ್ದು ಆದರೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷಕ್ಕೆ ಟೆಂಡರ್ ಕರಿಯೋದು ಮತ್ತೆ ಕ‌್ಯಾನ್ಸಲ್ ಮಾಡೋದು ಅಂತ ಮೂರು ಬಾರಿ ಟೆಂಡರ್ ಕರೆದು ರದ್ದು ಮಾಡುತ್ತಿದೆ ಎನ್ನಲಾಗುತ್ತಿದೆ.ಆದರೆ ಗುತ್ತಿಗೆದಾರ ಡೋಣುರ ಎಂಬುವರ ಹೇಸರಿಗೆ ಸದ್ಯ ಕಳೆದ ಡಿಸೆಂಬರನಲ್ಲಿ ಟೆಂಡರ್ ಆಗಿದ್ರು ಸದ್ಯ ಅಧಿಕಾರಿಗಳು ಈ ಕಾಮಗಾರಿಗೆ ಗುತ್ತಿಗೆದಾರನಿಗೆ ವರ್ಕ್ ಆರ್ಡರನ್ನ ನಿಡುತ್ತಿಲ್ಲ ಎಂದು ಹೇಳಲಾಗುತ್ತಿದೆ.