ಮನುಷ್ಯತ್ವ ಮರೆಯಾಗಿರೋ ಹೊತ್ತಲ್ಲಿ ಮಾನವೀಯತೆಗೆ ಸಾಕ್ಷಿಯಾದ ಬೆಕ್ಕು

First Published Jul 15, 2024, 1:55 PM IST

ಮನುಷ್ಯತ್ವ ಮಾನವೀಯತೆ ಮರೆಯಾಗುತ್ತಿರುವ ಇಂದಿನ ಕಾಲದಲ್ಲಿ ವಿದ್ಯಾಕಾಶಿ ಧಾರವಾಡದಲ್ಲಿ ಅಪರೂಪದ ಘಟನೆ ನಡೆದಿದೆ. ಪ್ರಾಣಿಗಳಲ್ಲಿರುವ ಮಾನವೀಯತೆ ಎಂತಹದ್ದು ಎನ್ನುವುದು ಸಾಬೀತಾಗಿದೆ..ಮನುಷ್ಯರಿಗಿಲ್ಲದೆ ಮಾನವೀಯತೆ ಸದ್ಯ ಪ್ರಾಣಿಗಳಲ್ಲಿ ಕಂಡು ಬಂದಿದೆ.

- ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ

ಧಾರವಾಡದ ಕಲ್ಲಂದರ ಮುಲ್ಲಾ ಎನ್ನುವರ ಮನೆಯಲ್ಲಿ ಈ ಘಟನೆ ನಡೆದಿದೆ ನಾಯಿ ಹಾಗೂ ಬೆಕ್ಕಿನ ಮರಿ ಸಾಕಿದ್ದ ಕಲ್ಲಂದರ ಮುಲ್ಲಾ ಅವರಿಗೆ, ಏಕಾಏಕಿ ಮನೆಯಲ್ಲಿ ಸಾಕಿದ್ದ ಜರ್ಮನ್ ಶಪರ್ಢ ನಾಯಿ ಅಗಲಿಕೆ ಸಾಕಷ್ಟು ದು:ಖವನ್ನು ತರಿಸಿದೆ.ಅನಾರೋಗ್ಯದಿಂದ ನಾಯಿ ಸಾವನ್ನಪ್ಪಿದೆ.ಅದಕ್ಕಾಗಿ ಅಂತ್ಯ ಸಂಸ್ಕಾರ ಮಾಡಿ 3 ನೇ ದಿನದ ಕಾರ್ಯವನ್ನು ಮಾಡಿದ್ದಾರೆ.

2 ವರೆ ವರ್ಷದ ಜೋಯಾ ಎನ್ನುವ ನಾಯಿಮರಿ ಅನಾರೋಗ್ಯದ ನಿಮಿತ್ತ ನಿಧನ ಹೊಂದಿದ್ದು ಅದರ ಜೋತೆಗೆ ಒಡನಾಟ ಹೊಂದಿದ್ದ ಬೆಕ್ಕಿನ ಮರಿಗೆ ದುಃಖ ತೊಡಿಕೊಳ್ಳಲಾರದೇ ಮೃತ ನಾಯಿ ಮರಿಯ ಮುಂದೆ ಕಣ್ಣೀರು ಹಾಕಿದೆ..ಇದನ್ನ ನೋಡಿ ಮನೆಯವರು ಕೂಡಾ ಕಣ್ಣೀರು ಹಾಕಿದ್ದಾರೆ.ನಿಜಕ್ಕೂ ನಾಯಿ ಮರಿ ಮುಂದೆ ಬೆಕ್ಕು ಕಣ್ಣೀರು ಹಾಕಿದ್ದನ್ನ ನೋಡಿದರೆ ಎಂತವರ ಮನಸ್ಸು ಮನಕಲುಕುವಂತಿತ್ತು.

Latest Videos


ಇನ್ನು ಈ ನಾಯಿ ಮರಿಯ ಮೂರನೇಯ ದಿನದ ಕಾರ್ಯಕ್ರಮವನ್ನ ಮಾಡಿದ್ದಾರೆ..ಇಷ್ಟೆಲ್ಲ ಆದ್ರೂ ಕುಟುಂಬಸ್ಥರು ನಾಯಿಯನ್ನು ನೆನೆದು ಮಮ್ಮಲ ಮರಗುತ್ತಿದ್ದಾರೆ.

ಈ ದೃಶ ಮಾನವೀಯತೆ ಎನ್ನುವುದು ಪ್ರಾಣಿಗಳಲ್ಲಿ ಎಷ್ಟರ ಮಟ್ಟಿಗೆ ಇರುತ್ತೆ ಎನ್ನುವುದನ್ನು ತೋರಿಸಿಕೊಟ್ಟಂತೆ ಆಗಿದೆ..ಅದರಲ್ಲೂ ಅತ್ಯಂತ ಪ್ರಿತಿಯಿಂದ ಸಾಕಿದ ನಾಯಿ ಮರಿಯನ್ನು ನೆನೆದು ಮನೆಯವರು ಪ್ರತಿನಿಥ್ಯ ಕಣ್ಣೀರು ಹಾಕುವಂತಾಗಿದೆ

click me!