ಎತ್ತುಗಳ ಮೇಲೆ ದರ್ಶನ ಕೈದಿ ಸಂಖ್ಯೆ, ಡಿ ಬಾಸ್ ಬರೆದು ಕಾರಹುಣ್ಣಿಮೆ ಆಚರಿಸಿದ ಅಭಿಮಾನಿಗಳು!

Published : Jul 22, 2024, 12:48 PM ISTUpdated : Jul 22, 2024, 01:59 PM IST

ಕಾರ ಹುಣ್ಣಿಮೆ ಆಚರಣೆ ಸಂದರ್ಭದಲ್ಲಿ ಎತ್ತುಗಳ ಮೇಲೆ ದರ್ಶನ ಕೈದಿ ಸಂಖ್ಯೆ ಹಾಗೂ ಡಿ ಬಾಸ್ ಎಂದು ಬರೆದು ಅಭಿಮಾನಿಗಳು ದರ್ಶನ ಬಗ್ಗೆ ಅಭಿಮಾನ ಪ್ರದರ್ಶಿಸಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಗುಡಸ್ ಗ್ರಾಮದಲ್ಲಿ ನಡೆದಿದೆ.  

PREV
14
ಎತ್ತುಗಳ ಮೇಲೆ ದರ್ಶನ ಕೈದಿ ಸಂಖ್ಯೆ, ಡಿ ಬಾಸ್ ಬರೆದು ಕಾರಹುಣ್ಣಿಮೆ ಆಚರಿಸಿದ ಅಭಿಮಾನಿಗಳು!

 ಕಾರ ಹುಣ್ಣಿಮೆ ನಿಮಿತ್ತ ಎತ್ತುಗಳನ್ನು ಓಡಿಸುವುದು ಸರ್ವೆ ಸಾಮಾನ್ಯ ಆದರೆ ಗುಡಸ್ ಗ್ರಾಮದಲ್ಲಿ ಒಂದು ಎತ್ತಿನ ಮೇಲೆ ನಟ ದರ್ಶನ್ ಅವರು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಕೈದಿ ಸಂಖ್ಯೆ 6106, ಇನ್ನೊಂದು ಎತ್ತಿನ D BOSS ಎಂದು ಬರೆದು ನಟ ದರ್ಶನ್ ಮೇಲಿರುವ ಅಭಿಮಾನ ಪ್ರದರ್ಶಿಸಿದ್ದಾರೆ.
 

24

ಪ್ರತಿ ವರ್ಷದಂತೆ ಊರಿನ ಜನರೆಲ್ಲ ಸೇರಿ ಕಾರ ಹುಣ್ಣಿಮೆ ನಿಮಿತ್ತ ಎತ್ತುಗಳಿಗೆ ಬಣ್ಣ ಬಳಿದು, ಸಿಂಗಾರ ಮಾಡಿ ಓಡಿಸುವುದು ಸಹಜ. ಆದರೆ ಈ ಬಾರಿ ಎತ್ತುಗಳ ಮೇಲೆ ಜೈಲು ಸೇರಿದ ನಟ ದರ್ಶನ್ ಅವರ ಕೈದಿ ಸಂಖ್ಯೆ D BOSS

34

ಕಾರ ಹುಣ್ಣಿಮೆ ಹಬ್ಬದ ನಿಮಿತ್ತ ಎತ್ತುಗಳಿಗೆ ಮೈತೊಳೆದು ಮೈಮೇಲೆ ಕೊಂಬುಗಳಿಗೆ ಬಣ್ಣಗಳಿಂದ ಅಲಂಕರಿಸಿರುವ ಅಭಿಮಾನಿಗಳು ಬಳಿಕ ಮೈಮೇಲೆ ಕೈದಿ ನಂಬರ್ ಬರೆಯಲಾಗಿದೆ, ಇನ್ನೊಂದೆಡೆ ಡಿ ಬಾಸ್ ಎಂದು ಬರೆಯಲಾಗಿದೆ.

44

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕಾರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದಂತೆ ದರ್ಶನ್‌ಗೆ ಕೈದಿ ನಂಬರ್ ನೀಡಲಾಗಿತ್ತು. ಆದರೆ ಇದೇ ನಂಬರ್ ಮೈಮೇಲೆ ಬಟ್ಟೆಗಳ ಮೇಲೆ ಹಚ್ಚೆ ಹಾಕಿಸುವ ಮೂಲಕ ಅಭಿಮಾನ ಮೆರೆಯುತ್ತಿರುವ ಯುವಕರು. ಇದೀಗ ಪ್ರಾಣಿಗಳ ಮೇಲೆಯೂ ದರ್ಶನ್ ಕೈದಿ ನಂಬರ್ ಬರೆದಿರುವುದು ಎಲ್ಲೆ ವೈರಲ್ ಆಗಿದೆ.

Read more Photos on
click me!

Recommended Stories