ಕಾಫಿನಾಡಲ್ಲಿ ಖಾಕಿ ಫುಲ್ ಅಲರ್ಟ್ :
ಇನ್ನು ಈಗಾಗಲೇ ಹಿಂದೂ ಅರ್ಚಕರ ನೇತೃತ್ವದಲ್ಲಿಯೇ ದತ್ತಜಯಂತಿ ನಡೆಯುತ್ತಿದೆ.ಹಿಂದೂಗಳಿಗೆ ಪೀಠ ಒಪ್ಪಿಸಬೇಕು ಎಂಬ ಅಗ್ರಹ ಈ ಬಾರಿಯೂ ಕೇಳಿಬಂದಿದೆ. ಇದ್ರ ನಡುವೇ ವಕ್ಫ್ ವಿವಾದ ದತ್ತಜಯಂತಿಯಲ್ಲಿ ಮತ್ತೆ ಸದ್ದು ಮಾಡಿದ್ದು ವಕ್ಪ್ ನ ಮೊದಲ ಬಲಿಯೇ ಐ.ಡಿ.ಪೀಠ, ಮೂಲದಾಖಲೆಯನ್ನ ಪರಿಶೀಲನೆ ನಡೆಸದೇ ವಕ್ಪ್ ಬೋರ್ಡ್ ಗೆಜೆಟ್ ನೋಟಿಫೀಕೆಷನ್ ಮಾಡಿದ್ರು. ಉಳಿಸಿಕೊಳ್ಳಲು ಜನಾದೊಂಲನ, ನ್ಯಾಯಲಯದಲ್ಲಿ ಹೋರಾಟ ಮಾಡಬೇಕಾಯಿತು ಎಂದು ಎಂಎಲ್ಸಿ ಸಿ.ಟಿ.ರವಿ ಹೇಳಿದ್ರು.