ನಜ್ಮಾ ನಜೀರ್ ಚಿಕ್ಕನೇರಳೆ ಮದುವೆ: ಕಾಂಗ್ರೆಸ್ ಯುವ ನಾಯಕಿಯ 'ಕೈ' ಹಿಡಿದ ಹುಡುಗ ಯಾರು?

Published : May 23, 2026, 12:22 PM IST

ಕಾಂಗ್ರೆಸ್ ಯುವ ನಾಯಕಿ ನಜ್ಮಾ ನಜೀರ್ ಚಿಕ್ಕನೇರಳೆ ಅವರು ಡಾ.ಹಕೀಮ್ ತೀರ್ಥಹಳ್ಳಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಅದ್ಧೂರಿ ವಿವಾಹ ಸಮಾರಂಭದಲ್ಲಿ ರಾಜಕೀಯ ಗಣ್ಯರು ಮತ್ತು ಚಂದನವನದ ಕಲಾವಿದರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದರು.

PREV
15
ನಜ್ಮಾ ನಜೀರ್ ಚಿಕ್ಕನೇರಳೆ ಮದುವೆ

ಕಾಂಗ್ರೆಸ್ ಯುವ ನಾಯಕಿ ನಜ್ಮಾ ನಜೀರ್ ಚಿಕ್ಕನೇರಳೆ ಅವರ ಮದುವೆ ಪಿರಿಯಾಪಟ್ಟಣದ ಬೆಟ್ಟದಪುರದಲ್ಲಿ ಅದ್ಧೂರಿಯಾಗಿ ನಡೆದಿದೆ. ಡಾ.ಹಕೀಮ್ ತೀರ್ಥಹಳ್ಳಿ ಅವರೊಂದಿಗೆ ನಜ್ಮಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

25
ಮದುವೆ ಫೋಟೋಗಳು ವೈರಲ್

ಕಳೆದ ಎರಡ್ಮೂರು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ನಜ್ಮಾ ಅವರ ಮದುವೆ ಫೋಟೋಗಳು ವೈರಲ್ ಆಗುತ್ತಿವೆ. ರಾಜಕೀಯ ಗಣ್ಯರು, ಚಂದನವನದ ಕಲಾವಿದರು ಸೇರಿದಂತೆ ಹಲವರು ಪ್ರಮುಖರು ಮದುವೆ ಸಂಭ್ರಮದಲ್ಲಿ ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದರು.

35
ಯಾರು ಡಾ.ಹಕೀಮ್ ತೀರ್ಥಹಳ್ಳಿ?

ಪಿಹೆಚ್‌ಡಿ ಮುಗಿಸಿರುವ ಡಾ.ಹಕೀಮ್ ತೀರ್ಥಹಳ್ಳಿ ಅವರು ಬೆಂಗಳೂರಿನಲ್ಲಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿಯೂ ಹಕೀಮ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮನ್ನು ಡಿಜಿಟಲ್ ಕ್ರಿಯೇಟರ್ ಎಂದು ಬರೆದುಕೊಂಡಿದ್ದಾರೆ.

45
ಅರಿಶಿನ ಶಾಸ್ತ್ರ

ನಜ್ಮಾ ಅವರು ಸಹ ಫೇಸ್‌ಬುಕ್ ಖಾತೆಯಲ್ಲಿ ಬ್ರೈಡ್ ಟು ಬಿ ವಿಡಿಯೋ, ಹಳದಿ ಶಾಸ್ತ್ರ ಮತ್ತು ನಿಖಾ ಫೋಟೋಗಳನ್ನು ಸಹ ಶೇರ್ ಮಾಡಿಕೊಳ್ಳುವ ಮೂಲಕ ಮದುವೆ ವಿಷಯವನ್ನು ಹಂಚಿಕೊಂಡಿದ್ದಾರೆ. ಮದುವೆಯಲ್ಲಿ ಕೆಂಪು ಬಣ್ಣದ ಗ್ರ್ಯಾಂಡ್ ಡ್ರೆಸ್ ಧರಿಸಿ ನಜ್ಮಾ ಮಿಂಚಿದ್ದಾರೆ. ಇನ್ನು ವರ ಹಕೀಮ್ ಸಿಲ್ವರ್ ಕುರ್ತಾ ಧರಿಸಿ ರಾಯಲ್ ಲುಕ್‌ನಲ್ಲಿ ಮಿಂಚಿದ್ದಾರೆ.

55
ಶುಭ ಹಾರೈಸಿದ ನಟಿ ಅಕ್ಷತಾ ಪಾಂಡವಪುರ

ನಜ್ಮಾ ನಜೀರ್ ಗೆಳತಿಯಾಗಿರುವ ಬಹುಮುಖ ಕಲಾವಿದೆ ಅಕ್ಷತಾ ಪಾಂಡವಪುರ ಸಹ ಮದುವೆಯಲ್ಲಿ ಭಾಗಿ ಆಪ್ತೆಗೆ ಶುಭ ಹಾರೈಸಿದ್ದಾರೆ. ಮದುವೆ ಫೋಟೋ ಶೇರ್ ಮಾಡಿಕೊಂಡಿರುವ ಮಾಜಿ ಬಿಗ್‌ಬಾಸ್ ಸ್ಪರ್ಧಿ ಅಕ್ಷತಾ, ನನ್ನ ತಂಗಿಯ ಮದುವೆ. ಬಲು ಜೋರು ಜೋರು ಜೋರು. ಇಬ್ಬರಿಗೂ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಇನ್ನು ಶಿವಮೊಗ್ಗ ಸೊಸೆಗೆ ಸ್ವಾಗತ ಎಂಬ ಕಮೆಂಟ್‌ಗಳು ಬಂದಿವೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories