ಸಂಪುಟ ಸಭೆಯಲ್ಲಿ ಹೊಸ ಬಸ್‌ಗಳ ಖರೀದಿ, 'ಪ್ರಜಾಸೇವೆ' ಎಂಬ ಹೊಸ ಇಲಾಖೆ ಸ್ಥಾಪನೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ಇದೇ ವೇಳೆ ಬಸ್ ದರ ಏರಿಕೆ ಬಗ್ಗೆ ಸಿಎಂ ಮಾಹಿತಿ ನೀಡಿದ್ದಾರೆ.
ಸಂಪುಟ ಸಭೆ ಬಳಿಕ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಸಾರಿಗೆ ಇಲಾಖೆಯ ಬಸ್ ದರ ಏರಿಕೆ ಕುರಿತು ಮಾಹಿತಿ ನೀಡಿದರು. ಬಸ್ ದರ ಏರಿಕೆ ಮಾಡುವಂತೆ ಸಾರಿಗೆ ನಿಗಮಗಳು ಪ್ರಸ್ತಾವನೆ ಸಲ್ಲಿಕೆ ಮಾಡಿವೆ. ಈ ಹಿನ್ನೆಲೆ ಬಸ್ ದರ ಏರಿಕೆಯಾಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ.
25
ಬಸ್ ದರ ಏರಿಕೆಯಾಗುತ್ತಾ?
ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ತೈಲ ಖರೀದಿ ಮತ್ತು ಪೂರೈಕೆ ಬಗ್ಗೆ ವರದಿ ಕೇಳಿದ್ದೇನೆ. ಬಸ್ ದರದ ವಿಚಾರದಲ್ಲಿ ಜನಸಾಮಾನ್ಯರ ಬಗ್ಗೆ ಸಹ ಯೋಚನೆ ಮಾಡಬೇಕಿದೆ. ಪ್ರಧಾನ ಮಂತ್ರಿ ಗಳು ಸಹ ಬಸ್ ನಲ್ಲಿ ಓಡಾಡಲು ಹೇಳಿದ್ದಾರೆ. ತೈಲ ಬೆಲೆ ಮತ್ತು ಬಸ್ ದರದ ವಿಚಾರದಲ್ಲಿ ಮುಂದೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
35
ಹೊಸ ಎಲೆಕ್ಟ್ರಿಕ್ ಬಸ್
ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಎರಡನೇ ಕ್ಯಾಬಿನೆಟ್ ಸಭೆಯಲ್ಲಿ KSRTC ಮತ್ತು NWKRTCಗೆ ಒಟ್ಟು 620 ಹೊಸ ಬಿಎಸ್-VI ಬಸ್‌ಗಳನ್ನು ರೂ. 235.60 ಕೋಟಿ ವೆಚ್ಚದಲ್ಲಿ ಖರೀದಿಸಲು ಸಂಪುಟ ಅನುಮೋದನೆ ನೀಡಲಾಯ್ತು. ರಾಜ್ಯದ ಮೂರು ಸಾರಿಗೆ ನಿಗಮಗಳಲ್ಲಿ 10 ನಗರಗಳ 11 ಸ್ಥಳಗಳಲ್ಲಿ ಎಲೆಕ್ಟ್ರಿಕ್ ಬಸ್ ಘಟಕ ನಿರ್ಮಾಣಕ್ಕೆ ರೂ. 112.72 ಕೋಟಿ ವೆಚ್ಚದ ಯೋಜನೆ ಮತ್ತು ಸಂಡೂರು ತಾಲೂಕಿನಲ್ಲಿ 37 ಕೋಟಿ ರೂ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಲಿದೆ.
ಸಾರ್ವಜನಿಕ ಅಹವಾಲು ಪಡೆಯಲು ಒಂದು ಪ್ರತ್ಯೇಕ ಸಚಿವಾಲಯ ಮಾಡಲು ತೀರ್ಮಾನ ಮಾಡಲಾಗಿದೆ. ಪ್ರಜಾಸೇವೆ ಅಂತ ಹೆಸರಿನಲ್ಲಿ ಸಚಿವಾಲಯ ತೆರೆಯಲಾಗಿದ್ದು, ಜನರ ಅಹವಾಲು ಪಡೆದು, ಸಮಸ್ಯೆ ಪರಿಹಾರಕ್ಕೆ ಈ ಇಲಾಖೆ ಕೆಲಸ ಮಾಡಲಾಗಿದೆ. ಈ ಸಚಿವಾಯಲಕ್ಕೆ ಪ್ರತ್ಯೇಕ ಸಚಿವರು ಇರಲಿದ್ದಾರೆ. ಎಲ್ಲಾ ಸಚಿವರು, ಸಿಎಂಗೆ ಕೊಟ್ಟ ಮನವಿಗಳು ಪ್ರಜಾಸೇವೆ ಇಲಾಖೆಗೆ ಬರಲಿವೆ. 224 ಕ್ಷೇತ್ರದಲ್ಲಿ ಪ್ರಜಾಸೇವೆ ಇಲಾಖೆ ವ್ಯಾಪ್ತಿಯಲ್ಲಿ ಪ್ರತಿ ವಾರ ಸಭೆ ಮಾಡಲು ತೀರ್ಮಾನಿಸಲಾಗಿದೆ ಎಂದು ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಹಳೆ ಕಟ್ಟಡಗಳಿಗೆ ತಾತ್ಕಾಲಿಕ ವಿದ್ಯುತ್ ಸೇವೆ ಪಡೆದಿದ್ದರೆ, ಅವರಿಗೆ 15 ದಿನಗಳ ಅವಧಿಯಲ್ಲಿ ಶಾಶ್ವತ ವಿದ್ಯುತ್ ಸಂಪರ್ಕ ಕೊಡಲು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಆದ್ರೆ ಗ್ಯಾರಂಟಿ ಪರಿಷ್ಕರಣೆ ವಿಚಾರವಾಗಿ ಅಧಿಕೃತವಾಗಿ ಇಂದಿನ ಕ್ಯಾಬಿನೆಟ್ ನಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ತಿಳಿದು ಬಂದಿದೆ. ಇನ್ನು ದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕರ್ನಾಟಕ ಭವನದಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ