ರಾಮಮಂದಿರಕ್ಕೆ ಭೂಮಿ ಪೂಜೆಯಾಗುವ ಹೊತ್ತಿನಲ್ಲೇ ಇತ್ತ ಹನುಮನ ನಾಡಿನಲ್ಲಿ ಸಂಭ್ರಮ
First Published | Aug 5, 2020, 6:12 PM ISTರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಭೂಮಿ ಪೂಜೆಯಾಗುವ ಹೊತ್ತಿನಲ್ಲೇ ಇತ್ತ ಅಂಜನಾದ್ರಿ ಬೆಟ್ಟದ ಹನುಮನ ನಾಡಿನಲ್ಲಿ ಸಂಭ್ರಮ ತಾರಕಕ್ಕೇರಿತ್ತು. ರಾಮತಾರಕ ಜಪ, ಹೋಮಗಳಿಂದ ಆಧ್ಯಾತ್ಮಿಕ ವಾತಾವರಣ ರಂಗೇರಿದ್ದರೆ ಜೈಶ್ರೀರಾಮ್ ಘೋಷಣೆ ಮತ್ತು ಆಗಸಕ್ಕೇರಿದ ಗಾಳಿಪಟಗಳು ಮುಗಿಲನ್ನು ಚುಂಬಿಸುತ್ತಾ ರಾಮನ ನಾಡಿಗೆ ಸಂದೇಶ ತಲುಪಿಸುತ್ತಿದ್ದವು. ಒಂದಷ್ಟು ಚಿತ್ರಗಳು ಇಲ್ಲಿವೆ ನೋಡಿ.