ಮೋದಿಗೆ ಕೊಟ್ಟ ಕೋದಂಡರಾಮನ ಪ್ರತಿಮೆ ಕರ್ನಾಟಕದಲ್ಲಿ ಕೆತ್ತನೆಯಾಗಿದ್ದು..!

First Published Aug 5, 2020, 5:18 PM IST

ಅಯೋಧ್ಯೆಯಲ್ಲಿ ಇಂದು (ಆ.05) ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದರು. ಈ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ  ಕೋದಂಡರಾಮನ ವಿಗ್ರಹವನ್ನು ಉಡುಗೊರೆಯಾಗಿ ನೀಡಿದರು. ಆದ್ರೆ, ಆ ಕೋದಂಡರಾಮನ ಪತ್ರಿಮೆ ಕೆತ್ತನೆಯಾಗಿದ್ದು ಕರ್ನಾಟಕದಲ್ಲಿ. ಹಾಗಾದ್ರೆ, ಈ ಮೂರ್ತಿಯನ್ನು ಯಾರು ಕತ್ತನೆ ಮಾಡಿದ್ರು? ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ.
 

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಕೋದಂಡರಾಮನ ವಿಗ್ರಹವನ್ನು ಉಡುಗೊರೆಯಾಗಿ ನೀಡಿದರು
undefined
ಉಡುಗೊರೆಯಾಗಿ ನೀಡಿರುವ ಕೋದಂಡರಾಮನ ಪ್ರತಿಮೆ ಕೆತ್ತನೆಯಾಗಿದ್ದು ಕರ್ನಾಟಕದಲ್ಲಿ.
undefined
ಬೆಂಗಳೂರಿನ ಕೆಂಗೇರಿಯ ರಾಮಮೂರ್ತಿ ಎಂಬುವವರು ಈ ಪ್ರತಿಮೆಯನ್ನು ವಿನ್ಯಾಸಗೊಳಿಸಿದ್ದಾರೆ.
undefined
ಈ ವಿಚಾರವನ್ನು ಸಂಸದ ಪಿಸಿ ಮೋಹನ್ ಹಂಚಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿಯವರಿಗೆ ಯೋಗಿ ಆದಿತ್ಯನಾಥ್ ನೀಡುತ್ತಿರುವ ಪ್ರತಿಮೆಯ ಫೋಟೋ ಹಾಗೂ ಅದನ್ನು ತಯಾರಿಸಿದ ವ್ಯಕ್ತಿಯ ಫೋಟೋವನ್ನು ಹಾಕಿ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ.
undefined
ಇದೇ ಸಂದರ್ಭದಲ್ಲಿ ಶ್ರೀರಾಮ ಮಂದಿರ ಭೂಮಿ ಪೂಜೆಯ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಲಾಯಿತು.
undefined
ಅಯೋಧ್ಯೆಯ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ
undefined
ಪ್ರಧಾನಿ ನರೇದ್ರ ಮೋದಿಯವರಿಂದ ಭವ್ಯ ರಾಮಮಂದಿರದ ನಿರ್ಮಾಣಕ್ಕೆಶಿಲಾನ್ಯಾಸ
undefined
click me!