ನಟ ದರ್ಶನ್ ಬಿಡುಗಡೆಗೆ ಅಲಾಯಿ ದೇವರ ಮೊರೆ ಹೋದ ಅಭಿಮಾನಿಗಳು!

Published : Jul 15, 2024, 12:30 PM ISTUpdated : Jul 15, 2024, 12:45 PM IST

ನಟ ದರ್ಶನ್ ಜೈಲಿನಿಂದ ಬಿಡುಗಡೆಯಾಗುವಂತೆ ಅಭಿಮಾನಿಗಳೂ ಮೊಹರಂ ಹಬ್ಬದ ಅಲಾಯಿ ದೇವರಿಗೆ ಹರಕೆ ಹೊತ್ತು ದರ್ಶನ್ ಫೋಟೊ ಎತ್ತಿ ಕುಣಿದಿರುವುದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.

PREV
15
ನಟ ದರ್ಶನ್ ಬಿಡುಗಡೆಗೆ ಅಲಾಯಿ ದೇವರ ಮೊರೆ ಹೋದ ಅಭಿಮಾನಿಗಳು!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿ ತಿಂಗಳು ಸಮೀಪಿಸಿದೆ. ಆದರೂ ಜೈಲಿನ ಮುಂಭಾಗ ಅಭಿಮಾನಿಗಳು ಬರುವುದು ಕಣ್ಣೀರಿಡುತ್ತಿರುವುದು ನಿಲ್ಲುತ್ತಿಲ್ಲ. ಸಾಲದ್ದಕ್ಕೆ ದರ್ಶನ್ ಬಿಡುಗಡೆಗೆ ದೇವರ ಬಳಿ ವಿಚಿತ್ರ ಹರಕೆ ಹೊರುತ್ತಿರುವ ಅಭಿಮಾನಿಗಳು. ಇದೀಗ ನಟ ದರ್ಶನ್ ಜೈಲಿನಿಂದ ಬಿಡುಗಡೆಯಾಗುವಂತೆ ಅಭಿಮಾನಿಗಳೂ ಮೊಹರಂ ಹಬ್ಬದ ಅಲಾಯಿ ದೇವರಿಗೆ ಹರಕೆ ಹೊತ್ತು ದರ್ಶನ್ ಫೋಟೊ ಎತ್ತಿ ಕುಣಿದಿರುವುದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.

25

ಹೌದು ಯಾದಗಿರಿ ಜಿಲ್ಲೆಯ ಅರಕೇರಾ(ಕೆ) ಗ್ರಾಮದಲ್ಲಿ ಅಭಿಮಾನಿಗಳು ಇಂತದ್ದೊಂದು ಹರಕೆ ಹೊತ್ತು ನಟ ದರ್ಶನ್ ಭಾವಚಿತ್ರ ಹಿಡಿದು ಕುಣಿದು ಕುಪ್ಪಳಿಸಿದ್ದಾರೆ. 

35

ನೂರಾರು ಜನರು ನೆರೆದಿದ್ದ ಮೊಹರಂ ಹಬ್ಬದ ವೇಳೆ ಭರ್ಜರಿ ಹಲಾಯ್ ಕುಣಿದ ದರ್ಶನ್ ಅಭಿಮಾನಿಗಳು. ಸ್ಟಾರ್ ಸ್ಟಾರ್ ಚಾಲೆಂಜಿಂಗ್ ಸ್ಟಾರ್, ಡಿಬಾಸ್ ಡಿಬಾಸ್ ಎಂದು ಘೋಷಣೆ ಕೂಗುತ್ತಾ ಕುಣಿದಿದ್ದಾರೆ. ಬಳಿಕ ದೇವರ ಬಳಿಯೂ ದರ್ಶನ್‌ಗಾಗಿ ಪ್ರಾರ್ಥನೆ ಮಾಡಿದ್ದಾರೆ. ಶೀಘ್ರವಾಗಿ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬರುವಂತೆ ದೇವರಿಗೆ ಪ್ರಾರ್ಥಿಸಿದ್ದಾರೆ. 

45

ರೇಣುಕಾ ಸ್ವಾಮಿ ಕೊಲೆ ಕೇಸ್‌ಲ್ಲಿ ಜೈಲು ಸೇರಿದಾಗಿಂದ ಕಣ್ಣೀರು ಹಾಕುತ್ತಿರುವ ದರ್ಶನ್, ಜೈಲೂಟಕ್ಕೆ ಹೊಂದಿಕೊಳ್ಳುತ್ತಿಲ್ಲ, ಕಣ್ಣಿಗೆ ನಿದ್ದೆಯೂ ಹತ್ತುತ್ತಿಲ್ಲ. ಕೆಲದಿಗಳಿಂದ ವಾಂತಿ ಭೇದಿಯಾಗಿ ಅನಾರೋಗ್ಯಗೊಂಡಿದ್ದಾರೆ. ಇತ್ತ ಪ್ರೇಯಸಿ ಪವಿತ್ರಾ ಗೌಡಗೂ ಅನಾರೋಗ್ಯ ಕಾಡುತ್ತಿದೆ. 

55

ದರ್ಶನ್ ತಪ್ಪು ಮಾಡಿಲ್ಲ, ಯಾರದೋ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ ಎನ್ನುತ್ತಿರುವ ಅಭಿಮಾನಿಗಳು. ರಾಜ್ಯಾದ್ಯಂತ ಹಲವಾರು ಅಭಿಮಾನಿಗಳು ದೇವರ ಬಳಿ ವಿಚಿತ್ರ ಹರಕೆ ಹೊತ್ತಿದ್ದಾರೆ. ತಿರುಪತಿ ತಿಮ್ಮಪ್ಪನಿಂದ ಇಡಿದು, ಊರಲ್ಲಿನ ದೇವರುಗಳಿಗೆ ಹರಕೆ ಹೊತ್ತಿದ್ದಾರೆ. ಇದೀಗ ಯಾದಗಿರಿ ಜಿಲ್ಲೆಯ ಅರಕೇರಾ ಗ್ರಾಮದ ದರ್ಶನ್ ಅಭಿಮಾನಿಗಳು ಮೊಹರಂ ದೇವರ ಮೊರೆ ಹೋಗಿರುವುದು ಎಲ್ಲರ ಗಮನ ಸೇಳೆದಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories