ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಏರ್ಪೋರ್ಟ್ಸ್ ಕೌನ್ಸಿಲ್ ಇಂಟರ್ನ್ಯಾಷನಲ್ (ACI) ನಿಂದ ಸತತ ನಾಲ್ಕನೇ ವರ್ಷವೂ 'ಅತ್ಯುತ್ತಮ ಆಗಮಸ್ಥಾನ' ಪ್ರಶಸ್ತಿಗೆ ಪಾತ್ರವಾಗಿದೆ. ವೇಗ, ಸೌಕರ್ಯ ಮತ್ತು ಉತ್ತಮ ಅನುಭವ ನೀಡಲು ಸಿಬ್ಬಂದಿ ಹಾಗೂ ಪಾಲುದಾರರ ಸಾಮೂಹಿಕ ಬದ್ಧತೆ
ನವದೆಹಲಿ: ತನ್ನ ಕಾರ್ಯಕ್ಷಮತೆಯಿಂದ ಹಲವು ಬಾರಿ ವಿವಿಧ ದಾಖಲೆಗಳನ್ನು ನಿರ್ಮಿಸಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸತತ 4ನೇ ವರ್ಷವೂ ‘ಅತ್ಯುತ್ತಮ ಆಗಮಸ್ಥಾನ’ (ಅರೈವಲ್ಸ್) ಎಂಬ ದಾಖಲೆಗೆ ಪಾತ್ರವಾಗಿದೆ.
25
ವಿಮಾನ ನಿಲ್ದಾಣ ಸೇವಾ ಗುಣಮಟ್ಟ
ಏರ್ಪೋರ್ಟ್ಸ್ ಕೌನ್ಸಿಲ್ ಇಂಟರ್ನ್ಯಾಷನಲ್ (Airports Council International) ಕೊಡಮಾಡುವ 2025ರ ವಿಮಾನ ನಿಲ್ದಾಣ ಸೇವಾ ಗುಣಮಟ್ಟ ಪ್ರಶಸ್ತಿಗಳ ಪೈಕಿ ‘ಅತ್ಯುತ್ತಮ ಆಗಮಸ್ಥಾನ’ ಎಂಬ ಗೌರವಕ್ಕೆ ಭಾಜನವಾಗಿದೆ.
35
ಗಿರೀಶ್ ನಾಯರ್
ಈ ಬಗ್ಗೆ ವಿಮಾನ ನಿಲ್ದಾಣದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ನಾಯರ್ ಹರ್ಷ ವ್ಯಕ್ತಪಡಿಸಿದ್ದು, ‘ಪ್ರತಿಯೊಬ್ಬ ಪ್ರಯಾಣಿಕನ ಬರುವಿಕೆಯೂ ನಮ್ಮ ಜವಾಬ್ದಾರಿ. ಪ್ರಯಾಣಿಕರು ವೇಗ ಮತ್ತು ಸೌಕರ್ಯವನ್ನು ಬಯಸುತ್ತಾರೆ. ನಾವು ಅದನ್ನು ಅವರಿಗೆ ಒದಗಿಸುವಂಯೆ ಕಾರ್ಯಾಚರಣೆಗಳನ್ನು ರೂಪಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ವಿಮಾನದಿಂದ ಇಳಿದ ಕ್ಷಣದಿಂದ ನಾವು ಉತ್ತಮ ಅನುಭವ ನೀಡಲು ಶ್ರಮಿಸುತ್ತೇವೆ. ಇದರ ಫಲವಾಗಿ ದೊರಕಿರುವ ಪ್ರಶಸ್ತಿಯು ನಮ್ಮ ಕಾರ್ಯನಿರ್ವಹಣೆಯ ಸ್ಥಿರತೆ, ಸಿಬ್ಬಂದಿ ಮತ್ತು ಪಾಲುದಾರರ ಸಾಮೂಹಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಗಿರೀಶ್ ನಾಯರ್ ತಿಳಿಸಿದರು.
ವಿಮಾನ ನಿಲ್ದಾಣದಲ್ಲಿ ಲಭ್ಯವಿರುವ ಸೇವೆ, ಸೌಕರ್ಯ, ಅನುಕೂಲತೆ ಮತ್ತು ಸ್ವಚ್ಛತೆಯ ಮಾನದಂಡಗಳ ಬಗ್ಗೆ ಪ್ರಯಾಣಿಕರು ನೀಡುವ ಪ್ರತಿಕ್ರಿಯೆ, ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ಜಾಗತಿಕವಾಗಿ ಪ್ರಮಾಣೀಕೃತ ಸಮೀಕ್ಷೆಗಳ ಮೂಲಕ ಅಳೆದು, ಅದರ ಆಧಾರದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು. 2022ರಿಂದ ಇದು ಬೆಂಗಳೂರು ವಿಮಾನನಿಲ್ದಾಣದ ಪಾಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ