Published : Oct 31, 2026, 10:31 AM ISTUpdated : Oct 31, 2026, 12:58 PM IST
ವೈದ್ಯರ ನಿರ್ಲಕ್ಷ್ಯದಿಂದಾಗಿ ಒಂದು ವರ್ಷದ ಮಗು ಕೋಮಾಗೆ ಹೋದ ದುರಂತ ಘಟನೆ ಬೆಂಗಳೂರಿನ ಕ್ಲೌಡ್‌ನೈನ್ ಆಸ್ಪತ್ರೆಯಲ್ಲಿ ನಡೆದಿದ್ದು, ನ್ಯಾಯಕ್ಕಾಗಿ ಮಗುವಿನ ಕುಟುಂಬಸ್ಥರು ರಾತ್ರಿಯಿಡೀ ಆಸ್ಪತ್ರೆಯಲ್ಲೇ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪ.
ವೈದ್ಯರ ನಿರ್ಲಕ್ಷ್ಯದಿಂದಾಗಿ ಒಂದು ವರ್ಷದ ಮಗು ಕೋಮಾಗೆ ಹೋದ ದುರಂತ ಘಟನೆ ಬೆಂಗಳೂರಿನ ಕ್ಲೌಡ್‌ನೈನ್ ಆಸ್ಪತ್ರೆಯಲ್ಲಿ ನಡೆದಿದ್ದು, ನ್ಯಾಯಕ್ಕಾಗಿ ಮಗುವಿನ ಕುಟುಂಬಸ್ಥರು ರಾತ್ರಿಯಿಡೀ ಆಸ್ಪತ್ರೆಯಲ್ಲೇ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪ.
24
ಕ್ಲೌಡ್ ನೈನ್ ಆಸ್ಪತ್ರೆ ವಿರುದ್ಧ ಮಗುವಿನ ಪೋಷಕರು ಪ್ರತಿಭಟನೆ
ಶಯಾನ್, ವೈದ್ಯರ ಚಿಕಿತ್ಸೆ ಬಳಿಕ ಕೋಮಾಗೆ ಹೋದ ಒಂದು ವರ್ಷದ ಮಗು. ಮಗು ಕೋಮಾಗೆ ಹೋಗುವಂತದ್ದೇನೂ ಆಗಿರಲಿಲ್ಲ. ವೈದ್ಯರ ನಿರ್ಲಕ್ಷ್ಯದಿಂದಾಗಿ ಮಗು ಕೋಮಾಗೆ ಹೋಗಿದೆ ಎಂದು ವೈದ್ಯರ ವಿರುದ್ಧ ಕುಟುಂಬಸ್ಥರು ಆರೋಪಿಸಿದ್ದಾರೆ.
ಕ್ಲೌಡ್‌ನೈನ್(Cloudnine Hospital) ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಗುವಿನ ಕುಟುಂಬಸ್ಥರು ನ್ಯಾಯ ಸಿಗುವವರೆಗೂ ಇಲ್ಲಿಂದ ಕದಲಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.
34
ರಾತ್ರಿ ಕ್ಲೌಡ್ ಆಸ್ಪತ್ರೆಯಲ್ಲೇ ಮಲಗಿದ ಕುಟುಂಬ!
ಮಗವಿನ ಆರೋಗ್ಯದ ಬಗ್ಗೆ ಮಾಹಿತಿ ನೀಡದೆ ಆಸ್ಪತ್ರೆ ಸಿಬ್ಬಂದಿಯ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಮಗುವಿಗೆ ಏನಾಗಿದೆ, ಕೋಮಾಗೆ ಹೋಗಲು ಕಾರಣವೇನು? ಎಂದು ಕುಟುಂಬಸ್ಥರು ಪ್ರಶ್ನಿಸಿದ್ರೂ ವೈದ್ಯ ಸಿಬ್ಬಂದಿ ಸಮರ್ಪಕ ಉತ್ತರ ನೀಡುತ್ತಿಲ್ಲ. ಹೀಗಾಗಿ ನಮ್ಮ ಮಗುವಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಬೇಕು, ನ್ಯಾಯ ಸಿಗುವವರೆಗೂ ಇಲ್ಲಿಂದ ನಾವು ಕದಲುವುದಿಲ್ಲ ಎಂದು ರಾತ್ರಿಯೂ ಆಸ್ಪತ್ರೆಯಲ್ಲೇ ಊಟ ಮಾಡಿ ಕುಟುಂಬಸ್ಥರು ಅಲ್ಲೇ ಮಲಗಿ ಪ್ರತಿಭಟನೆ ನಡೆಸಿದರು.
ನಿನ್ನೆ ಇಡೀ ದಿನ ಪ್ರತಿಭಟಿಸಿದರೂ ಆಸ್ಪತ್ರೆ ವೈದ್ಯರು ಸ್ಪಂದಿಸದೆ ಹಿನ್ನೆಲೆ ಇಂದು ಕೂಡ ಕ್ಲೌಡ್‌ನೈನ್ ಆಸ್ಪತ್ರೆ ವಿರುದ್ಧ ಕುಟುಂಬಸ್ಥರು ಪ್ರತಿಭಟನೆ ಮುಂದುವರಿಸಿದ್ದಾರೆ. ಇಂದು ಕುಟುಂಬಸ್ಥರ ಸಂಬಂಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇದೆ. ಆಸ್ಪತ್ರೆ ವಿರುದ್ಧ ದೊಡ್ಡಮಟ್ಟದಲ್ಲಿ ಪ್ರತಿಭಟನೆಗೆ ಕುಟುಂಬಸ್ಥರು ತಯಾರಿ ನಡೆಸಿದ್ದಾರೆ.
ಡಿಎಚ್‌ಓ ಭೇಟಿ ನೀಡಿದಾಗಲೂ ಮಾಹಿತಿ ನೀಡದ ಸಿಬ್ಬಂದಿ!
ಆಸ್ಪತ್ರೆಯ ನಡೆದಿರುವ ಘಟನೆ ಕುರಿತಂತೆ ಪೋಷಕರು ಕ್ಲೌಡ್‌ನೈನ್ ಆಸ್ಪತ್ರೆ, ವೈದ್ಯರ ವಿರುದ್ಧ ದೂರು ನೀಡಿದ್ದರು. ದೂರು ಬರುತ್ತಿದ್ದಂತೆ ರಾತ್ರಿಯೇ ನಾಗರಭಾವಿಯಲ್ಲಿ ಕ್ಲೌಡ್‌ನೈನ್ ಆಸ್ಪತ್ರೆಗೆ ಡಿಎಚ್ಒ ಸಿರಾಜುದ್ದೀನ್ ಮದ್ನಿ ಭೇಟಿ ನೀಡಿದ್ದರು. ಆದರೆ ಡಿಎಚ್‌ಒ ಭೇಟಿ ನೀಡಿದಾಗಲೂ ಮಗುವಿನ ಚಿಕಿತ್ಸೆಗೆ ಸಂಬಂಧಿಸಿದಂತೆ ಆಸ್ಪತ್ರೆ ಸಿಬ್ಬಂದಿ ಸರಿಯಾಗಿ ಮಾಹಿತಿ ನೀಡಿಲ್ಲ. ಅಲ್ಲದೆ ಚಿಕಿತ್ಸೆ ಮಾಹಿತಿ ಕೇಳಿದ ಮಗುವಿನ ಪೋಷಕರನ್ನೇ ಆಸ್ಪತ್ರೆಯಿಂದ ಹೊರಹಾಕಲು ಆಸ್ಪತ್ರೆಯ ಕೆಲ ಸಿಬ್ಬಂದಿಗಳು ಯತ್ನಿಸಿರುವ ಗಂಭೀರ ಆರೋಪವೂ ಕೇಳಿಬಂದಿದೆ. ಇನ್ನುವರೆಗೂ ಮಗು ಶಯಾನ್ ಕೋಮಾ ಸ್ಥಿತಿ ಬಗ್ಗೆ ಯಾವುದೇ ಮಾಹಿತಿ ನೀಡದ ಹಿನ್ನೆಲೆ ಪೋಷಕರು ಇಂದು ಕೂಡ ಪ್ರತಿಭಟನೆ ಮುಂದುವರಿಸಿದ್ದಾರೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ